ಕ್ಯಾನ್ಬೆರಾ: ಲಿಯಾಮ್ ಲಿವಿಂಗ್‌ಸ್ಟೋನ್ 77ರನ್ ಮತ್ತು ಕ್ಯಾಮರೂನ್ ಬೆನ್‌ಕ್ರಾಫ್ಟ್ ಅಜೇಯ ಅರ್ಧಶತಕ (50), ಮಿಚೆಲ್ ಮಾರ್ಷ್ ಅಜೇಯ 49 ರನ್‌ಗಳ ನೆರವಿನಿಂದ ಬ್ರಿಸ್ಬೇನ್ ಹೀಟ್ ವಿರುದ್ಧ ಪರ್ತ್ ಸ್ಕಾರ್ಚರ್ಸ್ 49 ರನ್‌ಗಳ ಜಯ ಸಾಧಿಸಿ ಬಿಗ್ ಬ್ಯಾಷ್ ಲೀಗ್-10ನೇ ಆವೃತ್ತಿಯ ಫೈನಲ್ಗೇರಿದೆ. ಫೆಬ್ರುವರಿ 6ರಂದು ಸಿಡ್ನಿ ಸಿಕ್ಸರ್ ವಿರುದ್ಧ ಸೆಣಸಾಡಲಿದೆ.
ಬಿಬಿಎಲ್ನ ಚಾಲೆಂಜರ್ಸ್ ಪಂದ್ಯದಲ್ಲಿ ಟಾಸ್ ಗೆದ್ದು ಬ್ರಿಸ್ಬೇನ್ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಇಂಗ್ಲೆಂಡ್ ಆರಂಭಿಕ ಜೇಸನ್ ರಾಯ್ ಅನುಪಸ್ಥಿತಿಯ ಹೊರತಾಗಿಯೂ ಮೊದಲು ಬ್ಯಾಟಿಂಗ್ ಮಾಡಿದ ಸ್ಕಾಚರ್ಸ್ ಉತ್ತಮ ಮೊತ್ತವನ್ನೇ ಪೇರಿಸಿತು. 39 ಎಸೆತಗಳಲ್ಲಿ 77 ರನ್ ಗಳಿಸಿದ ಲಿಯಾಮ್ ಲಿವಿಂಗ್‌ಸ್ಟೋನ್ ಅರ್ಧ ಡಜನ್ ಸಿಕ್ಸರ್ಗಳನ್ನು ಬಾರಿಸಿದರು. ಕೇವಲ 27 ಎಸೆತಗಳಲ್ಲಿ 50ರ ಗಡಿ ದಾಟಿದರು.
ಬೆನ್‌ಕ್ರಾಫ್ಟ್ ಅವರೊಂದಿಗಿನ ಜೊತೆಯಾಟದಲ್ಲಿ 10ನೇ ಓವರ್‌ನೊಳಗೆ 100 ರನ್ ದಾಟಿದರು. ಮಾರ್ನಸ್ ಲಬುಶೇನ್ನ ಓವರ್ನಲ್ಲಿ ಮೂರು ಸಿಕ್ಸರ್, ಬೌಂಡರಿ ಬಾರಿಸಿ ಶತಕದತ್ತ ಮುನ್ನುಗ್ಗುತ್ತಿದ್ದ ಲಿವಿಂಗ್‌ಸ್ಟೋನ್ ವೇಗಕ್ಕೆ, ಮಿಚೆಲ್ ಸ್ವೆಪ್ಸನ್ 12ನೇ ಓವರ್‌ನ ಮೊದಲ ಎಸೆತದಲ್ಲಿ ತಡೆ ಹಾಕಿದರು. ಅದಾಗಲೇ ತಂಡಕ್ಕೆ 114 ರನ್ಗಳು ಹರಿದು ಬಂದಿದ್ದವು.
ಹೀಟ್ ಹೆಚ್ಚಿಸಿದ ಮಾರ್ಷ್, ಬೆನ್‌ಕ್ರಾಫ್ಟ್
ಲಿವಿಂಗ್‌ಸ್ಟೋನ್ ಔಟಾದ ನಂತರವೂ ರನ್ ವೇಗವನ್ನು ಕಣಕ್ಕಿಳಿದ ಮಿಚೆಲ್ ಮಾರ್ಷ್ ಮತ್ತಷ್ಟು ಹೆಚ್ಚಿಸಿದರು. 15ನೇ ಓವರ್ನಲ್ಲಿ ಸ್ಕಾಚರ್ಸ್ ಪವರ್ ಸರ್ಜ್ ತೆಗೆದುಕೊಂಡಿತು. ಮೋರ್ನೆ ಮಾರ್ಕೆಲ್ ಓವರ್ನಲ್ಲಿ ಮೂರು ಬೌಂಡರಿ ಮತ್ತು ಒಂದು ಸಿಕ್ಸರ್ ಸೇರಿಸಿ 22 ರನ್ ಬಾರಿಸಿದರು. ಪವರ್ ಸರ್ಜ್‌ನಲ್ಲಿ ಒಟ್ಟು 33 ರನ್ ಸೇರಿಸಿದರು. ಬೆನ್‌ಕ್ರಾಫ್ಟ್ ಮತ್ತು ಮಾರ್ಷ್ ದಾಳಿ ಮುಂದುವರೆಯುತ್ತಿದ್ದ ಸಂದರ್ಭದಲ್ಲಿ 19ನೇ ಓವರ್‌ನ ಮೊದಲ ಎಸೆತದ ನಂತರ ಮಳೆ ಸುರಿಯಿತು. ತಮ್ಮ ಮುರಿಯದ 2ನೇ ವಿಕೆಟ್‌ಗೆ 75ರನ್ ಸೇರಿಸಿದರು.
ಸವಾಲು ಕೊಟ್ಟ ಮಳೆ: ಬ್ರಿಸ್ಬೇನ್ಗೆ ಆರಂಭಿಕ ಆಘಾತ
ಮಳೆ ಸುರಿದ ಕಾರಣ ಬ್ರಿಸ್ಬೇನ್ಗೆ ಇನ್ನೂ ಸವಾಲುವಾಗುವಂತೆ ಮಾಡಿತು. ಮೊದಲ ಇನ್ನಿಂಗ್ಸ್‌ನಲ್ಲಿ 11 ಎಸೆತಗಳು ಉಳಿದವು. ಡಕ್ವರ್ಥ್ ಲೂಯಿಸ್ ಅನ್ವಯ ಬ್ರಿಸ್ಬೇನ್ಗೆ 18 ಓವರ್‌ಗಳಲ್ಲಿ 200 ಗುರಿ ನೀಡಲಾಯಿತು. ಗುರಿ ಬೆನ್ನಟ್ಟಿದ ಹೀಟ್ನ ಕ್ರಿಸ್ ಲಿನ್ ಮತ್ತು ಜೋ ಡೆನ್ಲಿ, ರಿಚರ್ಡ್‌ಸನ್‌ರ ಮೊದಲ ಓವರ್ನಲ್ಲಿ ಕೇವಲ ಮೂರು ಮತ್ತು ಅವರ ಎರಡನೇ ಓವರ್ನಲ್ಲಿ 22 ರನ್ ಚಚ್ಚಿದರು. ಆದರೆ, ಬೆಹ್ರೆಂಡೋರ್ಫ್ ಬೌಲಿಂಗ್ನಲ್ಲಿ ಸತತ ಎರಡು ಎಸೆತಗಳಲ್ಲಿ ಇಬ್ಬರೂ ಪವಿಲಿಯನ್ ಸೇರಿದರು.
-
Started from the bottom, now we're here 💪🏆 #MADETOUGH #BBL10 pic.twitter.com/oOKHcZx7EN
— Perth Scorchers (@ScorchersBBL) February 4, 2021 " class="align-text-top noRightClick twitterSection" data="
">Started from the bottom, now we're here 💪🏆 #MADETOUGH #BBL10 pic.twitter.com/oOKHcZx7EN
— Perth Scorchers (@ScorchersBBL) February 4, 2021Started from the bottom, now we're here 💪🏆 #MADETOUGH #BBL10 pic.twitter.com/oOKHcZx7EN
— Perth Scorchers (@ScorchersBBL) February 4, 2021
ಬೆಹ್ರೆಂಡೋರ್ಫ್ ನಂತರ ಫವಾಡ್ ಮತ್ತು ಹಾರ್ಡಿ ದಾಳಿ ನಡೆಸಿ ಸಂಪೂರ್ಣವಾಗಿ ತಮ್ಮ ಹಿಡಿತಕ್ಕೆ ತೆಗೆದುಕೊಂಡರು. ಮಾರ್ನಸ್ ಲಬುಶೇನ್ (15), ಸ್ಯಾಮ್ ಹೀಜ್ಲೆಟ್ (3), ಜಿಮ್ಮಿ ಪೀರ್ಸನ್ (15) ಅಂದುಕೊಂಡಷ್ಟು ಪ್ರದರ್ಶನ ತೋರಲಿಲ್ಲ. ಆದರೆ, ಸಂಕಷ್ಟದಲ್ಲಿದ್ದ ತಂಡಕ್ಕೆ ಜೋ ಬರ್ನ್ಸ್ (38) ಅಡಿಪಾಯ ಹಾಕಲು ಪ್ರಯತ್ನಿಸಿದರಾದರೂ ಉಳಿದವರು ಯಾರೂ ಅವರ ಜೊತೆ ನಿಲ್ಲಲಿಲ್ಲ. ಹೀಗಾಗಿ, ಬ್ರಿಸ್ಬೇನ್ 9 ವಿಕೆಟ್ ಕಳೆದುಕೊಂಡು 150 ರನ್ ಗಳಿಸಲಷ್ಟೇ ಶಕ್ತವಾಯಿತು.
ಐದನೇ ಬಾರಿ ಫೈನಲ್ ಪ್ರವೇಶ: ಬ್ರಿಸ್ಬೇನ್ ವಿರುದ್ಧ ರೋಚಕ ಗೆಲುವು ದಾಖಲಿಸುವ ಮೂಲಕ ಫೈನಲ್ ಪ್ರವೇಶಿಸಿರುವ ಪರ್ತ್ ಸ್ಕಾರ್ಚರ್ಸ್, ಒಟ್ಟು 6ನೇ ಫೈನಲ್ ತಲುಪಿದಂತಾಗಿದೆ. ಅದರಲ್ಲಿ ಮೂರು ಬಾರಿ ಪ್ರಶಸ್ತಿ ಜಯಿಸಿದರೆ, ಎರಡು ಬಾರಿ ರನ್ನರ್ಅಪ್ ಆಗಿದೆ.
ಸಂಕ್ಷಿಪ್ತ ಸ್ಕೋರ್: ಪರ್ತ್ ಸ್ಕಾರ್ಚರ್ಸ್ 18.1 ಓವರ್‌ಗಳಲ್ಲಿ 189/1 (ಲಿಯಾಮ್ ಲಿವಿಂಗ್‌ಸ್ಟೋನ್ 77, ಕ್ಯಾಮರೂನ್ ಬೆನ್‌ಕ್ರಾಫ್ಟ್ 58*, ಮಿಚೆಲ್ ಮಾರ್ಷ್ 49*; ಮಿಚೆಲ್ ಸ್ವೆ ಪ್ಸನ್ 1-26) 18 ಓವರ್‌ಗಳಲ್ಲಿ ಬ್ರಿಸ್ಬೇನ್ ಹೀಟ್ 150/9 (ಜೋ ಬರ್ನ್ಸ್ 38; ಆರನ್ ಹಾರ್ಡಿ 3-46, ಆಂಡ್ರ್ಯೂ ಟೈ 2-25, ಫವಾದ್ ಅಹ್ಮದ್ 2-26, ಜೇಸನ್ ಬೆಹ್ರೆಂಡೋರ್ಫ್ 2-19)