ರಾವಲ್ಪಿಂಡಿ: ಕೇಶವ್ ಮಹಾರಾಜ್ ಆರಂಭದಲ್ಲಿ ಆಘಾತ ನೀಡಿದರೂ ಪಾಕ್ ಆಟಗಾರರು ಗಟ್ಟಿಯಾಗಿ ನಿಂತು ಶತಕದ ಜೊತೆಯಾಟವಾಡಿದರು. ಆದರೆ, ಬೃಹತ್ ಇನ್ನಿಂಗ್ಸ್ನತ್ತ ಕೊಂಡೊಯ್ಯುತ್ತಿದ್ದ ಬಾಬರ್ ಅಜಾಮ್ ಮತ್ತು ಫವಾದ್ ಆಲಂ ಬ್ಯಾಟಿಂಗ್ಗೆ ವರುಣ ಅಡ್ಡಿಯಾಗಿ ದಿನವನ್ನೇ ನುಂಗಿಬಿಟ್ಟ.
ರಾವಲ್ಪಿಂಡಿ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿರುವ ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಆರಂಭಿಸಿದ ಪಾಕಿಸ್ತಾನ, ಆರಂಭಿಕರ ಕಳಪೆ ಬ್ಯಾಟಿಂಗ್ ನಡುವೆಯೂ ಉತ್ತಮ ಪ್ರದರ್ಶನ ತೋರಿದೆ. ಮೊದಲ ದಿನದ ಅಂತ್ಯಕ್ಕೆ 58 ಓವರ್ಗಳಿಗೆ 145 ರನ್ ಗಳಿಸಿದೆ.
-
Play has been called off for the day in Rawalpindi due to wet outfield. Pakistan are 145/3 at stumps.
— ICC (@ICC) February 4, 2021 " class="align-text-top noRightClick twitterSection" data="
There will be a 15-minute early start tomorrow.#PAKvSA | https://t.co/dHR9CvAE8T pic.twitter.com/yYRQ49vAyQ
">Play has been called off for the day in Rawalpindi due to wet outfield. Pakistan are 145/3 at stumps.
— ICC (@ICC) February 4, 2021
There will be a 15-minute early start tomorrow.#PAKvSA | https://t.co/dHR9CvAE8T pic.twitter.com/yYRQ49vAyQPlay has been called off for the day in Rawalpindi due to wet outfield. Pakistan are 145/3 at stumps.
— ICC (@ICC) February 4, 2021
There will be a 15-minute early start tomorrow.#PAKvSA | https://t.co/dHR9CvAE8T pic.twitter.com/yYRQ49vAyQ
ಆರಂಭದಲ್ಲಿ ಕೇವಲ 22 ರನ್ಗಳಿಗೆ 3 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. 15 ರನ್ ಗಳಿಸಿದ ಸಂದರ್ಭದಲ್ಲಿ ಕೇಶವ್ ಮಹಾರಾಜ್ ಎಸೆತದಲ್ಲಿ ಇಮ್ರಾನ್ ಬಟ್, ಡಿ ಕಾಕ್ಗೆ ಕ್ಯಾಚಿತ್ತರು. ನಂತರ ಅಬಿದ್ ಅಲಿ 6 ರನ್ ಗಳಿಸಿದ್ದಾಗ ನಾರ್ಟ್ಜೆ ಬೌಲಿಂಗ್ನಲ್ಲಿ ಮಾರ್ಕ್ರಮ್ ಅದ್ಭುತ ಕ್ಯಾಚ್ ಪಡೆಯುವ ಮೂಲಕ ಪೆವಿಲಿಯನ್ಗೆ ಕಳುಹಿಸಿದರು. ಮತ್ತೆ ದಾಳಿ ನಡೆಸಿದ ಮಹಾರಾಜ್, ಅಜರ್ ಅಲಿ ಅವರನ್ನು ಸೊನ್ನೆಗೆ ಎಲ್ಬಿಡಬ್ಲ್ಯೂಗೆ ಕೆಡವಿದರು.
ಅದಾದ ನಂತರ ಬಾಬರ್ ಅಜಾಮ್ ಅರ್ಧಶತಕ (77*) ಮತ್ತು ಫವಾದ್ ಆಲಂ (42*) ಕ್ರೀಸ್ನಲ್ಲಿ ಗಟ್ಟಿಯಾಗಿ ನೆಲೆಯೂರಿ 123 ರನ್ಗಳ ಜೊತೆಯಾಟವಾಡುವ ಮೂಲಕ ತಂಡಕ್ಕೆ ಆಸರೆಯಾದರು. ಬೃಹತ್ ಇನ್ನಿಂಗ್ಸ್ ಕಟ್ಟುವ ನಿರೀಕ್ಷೆಯಲ್ಲಿದ್ದ ತಂಡಕ್ಕೆ ವರುಣ ಶಾಕ್ ಕೊಟ್ಟ. ಇದರಿಂದಾಗಿ ಮೊದಲ ದಿನ ಅರ್ಧ ದಿನಕ್ಕೆ ನಿಂತು ಹೋಯಿತು. ದಕ್ಷಿಣ ಆಫ್ರಿಕಾದ ಪರ ಮಹಾರಾಜ್ 2 ವಿಕೆಟ್ ಮತ್ತು ನಾರ್ಟ್ಜೆ 1 ವಿಕೆಟ್ ಪಡೆದಿದ್ದಾರೆ. ಎರಡು ಟೆಸ್ಟ್ ಪಂದ್ಯಗಳ ಸರಣಿಯಲ್ಲಿ ಈಗಾಗಲೇ ಪಾಕಿಸ್ತಾನ ಒಂದು ಪಂದ್ಯ ಗೆದ್ದಿದೆ.