ಚಿತ್ತಗಾಂಗ್: 8ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಆಲ್‌ರೌಂಡರ್ ಮೆಹಿದಿ ಹಸನ್ ಬಾರಿಸಿದ ಚೊಚ್ಚಲ ಶತಕದ (103) ನೆರವಿನಿಂದ ಬಾಂಗ್ಲಾದೇಶವು ವೆಸ್ಟ್ ಇಂಡೀಸ್ ವಿರುದ್ಧ ಮೊದಲ ಟೆಸ್ಟ್ನ ಪ್ರಥಮ ಇನ್ನಿಂಗ್ಸ್ನಲ್ಲಿ ಉತ್ತಮ ಮೊತ್ತ ಕಲೆಹಾಕಿದೆ. ಬಾಂಗ್ಲಾ ತನ್ನೆಲ್ಲಾ ವಿಕೆಟ್ಗಳನ್ನು ಕಳೆದುಕೊಂಡು 430 ರನ್ ಗಳಿಸಿದೆ.
ಇದಕ್ಕೆ ತಿರುಗೇಟು ನೀಡಲು ಮುಂದಾಗಿರುವ ಮೊದಲ ಇನ್ನಿಂಗ್ಸ್ನ ಎರಡನೇ ದಿನದ ಅಂತ್ಯಕ್ಕೆ ವಿಂಡೀಸ್ 75ಕ್ಕೆ 2 ವಿಕೆಟ್ ಕಳೆದುಕೊಂಡಿದೆ. ಆರಂಭದಲ್ಲಿ ಜಾನ್ ಚಾಪ್ವೆಲ್ (3), ಶೇನ್ ಮೊಸ್ಲೆ (2) ಮುಸ್ತಾಫಿಜರ್ ಬೌಲಿಂಗ್ನಲ್ಲಿ ಬೇಗನೇ ಔಟಾದರು. ಕ್ರೆಗ್ ಬ್ರಾಥ್ವೇಟ್ (49) ಮತ್ತು ಕುಮ್ರಾ ಬೊನ್ನಾರ್ (17) ಅಜೇಯರಾಗಿದ್ದು, 51 ರನ್ಗಳ ಜೊತೆಯಾಟವಾಡಿದ್ದಾರೆ.
ಇದನ್ನೂ ಓದಿ...ಮಳೆ ಅಡ್ಡಿ: ಬಾಬರ್ ಅಜಾಮ್ 77, ದಿನದಂತ್ಯಕ್ಕೆ ಪಾಕ್ 145/3
8ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ ಆಲ್‌ರೌಂಡರ್ ಮೆಹಿದಿ, 168 ಎಸೆತಗಳಲ್ಲಿ 103 ರನ್ ಗಳಿಸಿದರು. ಅದರಲ್ಲಿ 13 ಬೌಂಡರಿಗಳು ಸೇರಿವೆ. ಈ ಮೂಲಕ ತಂಡದ ಮೊತ್ತ 400ರ ಗಡಿ ದಾಟಲು ನೆರವಾದರು. ಅಲ್ಲದೆ, ಮೂರು ಪ್ರಮುಖ ಜೊತೆಯಾಟಗಳಲ್ಲಿ ಭಾಗಿಯಾದರು. 17 ತಿಂಗಳ ನಂತರ ತಂಡಕ್ಕೆ ಮರಳಿದ ಶಕೀಬ್ ಹಲ್ ಹಸನ್ ಅದ್ಭುತ ಪ್ರದರ್ಶನ ತೋರಿದರು.
-
Stumps in Chattogram 🏏
— ICC (@ICC) February 4, 2021 " class="align-text-top noRightClick twitterSection" data="
An unbroken half-century stand between Kraigg Brathwaite and Nkurmah Bonner has taken West Indies to 75/2.
They trail by 355 runs.#BANvWI ➡️ https://t.co/OYKP4vYfsj pic.twitter.com/BlcsUdwKMJ
">Stumps in Chattogram 🏏
— ICC (@ICC) February 4, 2021
An unbroken half-century stand between Kraigg Brathwaite and Nkurmah Bonner has taken West Indies to 75/2.
They trail by 355 runs.#BANvWI ➡️ https://t.co/OYKP4vYfsj pic.twitter.com/BlcsUdwKMJStumps in Chattogram 🏏
— ICC (@ICC) February 4, 2021
An unbroken half-century stand between Kraigg Brathwaite and Nkurmah Bonner has taken West Indies to 75/2.
They trail by 355 runs.#BANvWI ➡️ https://t.co/OYKP4vYfsj pic.twitter.com/BlcsUdwKMJ
7ನೇ ವಿಕೆಟ್ಗೆ ಶಕೀಬ್ (68) ಜೊತೆ 67 ರನ್, 8ನೇ ವಿಕೆಟ್ಗೆ ತೈಜುಲ್ ಇಸ್ಲಾಂ ಜೊತೆ 45 ರನ್, 9ನೇ ವಿಕೆಟ್ಗೆ ನಯೀಮ್ ಹಸನ್ ಜೊತೆ (24) 67 ರನ್ಗಳ ಜೊತೆಯಾಟವಾಡಿದರು. ಮೊದಲ ದಿನದ ಅಂತ್ಯಕ್ಕೆ ಬಾಂಗ್ಲಾ 245ಕ್ಕೆ 5 ವಿಕೆಟ್ ಕಳೆದುಕೊಂಡಿತ್ತು. ಶಕೀಬ್ ಮತ್ತು ಲಿತ್ತನ್ ದಾಸ್ ಇನ್ನೂ ಕ್ರೀಸ್ನಲ್ಲಿದ್ದರು. ಆದರೆ, ಇಂದು ಇನ್ನಿಂಗ್ಸ್ ಮುಂದುವರೆಸಿದ ದಾಸ್ ಬೇಗನೇ ವಿಕೆಟ್ ಒಪ್ಪಿಸಿದರು. ವಿಂಡೀಸ್ ಪರ ಜೊಮೆಲ್ ವಾರಿಕನ್ 133ಕ್ಕೆ 4, ರಖೀಮ್ ಕಾರ್ನವಾಲ್ 114ಕ್ಕೆ 2, ಕ್ರುಮಾ ಬೊನ್ನರ್ 16ಕ್ಕೆ 1 ವಿಕೆಟ್ ಪಡೆದುಕೊಂಡರು.