ಮುಂಬೈ: ನ್ಯೂಜಿಲ್ಯಾಂಡ್ ವಿರುದ್ಧದ 2ನೇ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡ ಭರ್ಜರಿ ಗೆಲುವು ದಾಖಲಿಸಿದೆ.
-
CHAMPIONS 👏👏
— BCCI (@BCCI) December 6, 2021 " class="align-text-top noRightClick twitterSection" data="
This is #TeamIndia's 14th consecutive Test series win at home.#INDvNZ @Paytm pic.twitter.com/FtKIKVCzt8
">CHAMPIONS 👏👏
— BCCI (@BCCI) December 6, 2021
This is #TeamIndia's 14th consecutive Test series win at home.#INDvNZ @Paytm pic.twitter.com/FtKIKVCzt8CHAMPIONS 👏👏
— BCCI (@BCCI) December 6, 2021
This is #TeamIndia's 14th consecutive Test series win at home.#INDvNZ @Paytm pic.twitter.com/FtKIKVCzt8
ಕೊಹ್ಲಿ ಪಡೆ ನೀಡಿದ 540 ರನ್ ಗುರಿ ಬೆನ್ನಟ್ಟಿದ್ದ ನ್ಯೂಜಿಲ್ಯಾಂಡ್ 4ನೇ ದಿನದಾಟದ ಆರಂಭದ ಕೆಲವೇ ಹೊತ್ತಿನಲ್ಲಿ ತನ್ನೆಲ್ಲಾ ವಿಕೆಟ್ ಕಳೆದುಕೊಂಡು 167 ರನ್ಗಳಿಸಲಷ್ಟೇ ಶಕ್ತವಾಯಿತು. ಹೀಗಾಗಿ, ಭಾರತ 372 ರನ್ಗಳ ಬೃಹತ್ ಅಂತರದಿಂದ ಸರಣಿಯನ್ನು 1-0 ರಿಂದ ಗೆದ್ದು ಬೀಗಿತು.
ಭಾರತ ಮೊದಲ ಇನ್ನಿಂಗ್ಸ್ನಲ್ಲಿ 325 ರನ್ಗಳಿಗೆ ಆಲೌಟ್ ಆದರೆ, ಕಿವೀಸ್ ತನ್ನ ಮೊದಲ ಇನ್ನಿಂಗ್ಸ್ನಲ್ಲಿ ಅಶ್ವಿನ್ (8ಕ್ಕೆ4) ಮತ್ತು ಸಿರಾಜ್ (19ಕ್ಕೆ3) ದಾಳಿಗೆ ಸಿಲುಕಿ ಕೇವಲ 62 ರನ್ಗಳಿಗೆ ಸರ್ವಪತನ ಕಂಡಿತ್ತು. ಮೊದಲ ಇನ್ನಿಂಗ್ಸ್ನಲ್ಲಿ ಸಿಕ್ಕಿರುವ 263 ರನ್ಗಳ ಬೃಹತ್ ಮುನ್ನಡೆಯೊಂದಿಗೆ 2ನೇ ಇನ್ನಿಂಗ್ಸ್ ಆರಂಭಿಸಿದ್ದ ಭಾರತ 7 ವಿಕೆಟ್ ಕಳೆದುಕೊಂಡು 276 ರನ್ಗಳಿಸಿದ್ದ ವೇಳೆ ಡಿಕ್ಲೇರ್ ಘೋಷಿಸಿಕೊಂಡಿತು. ಈ ಮೂಲಕ ಪ್ರವಾಸಿ ತಂಡಕ್ಕೆ 540 ರನ್ಗಳ ಬೃಹತ್ ಟಾರ್ಗೆಟ್ ನೀಡಿತು.
ಇದನ್ನೂ ಓದಿ: ಮಾಸ್ಕ್, ಸಾಮಾಜಿಕ ಅಂತರವಿಲ್ಲದೇ ಕಾಲೇಜು ವಾರ್ಷಿಕೋತ್ಸವ: 42 ವೈದ್ಯಕೀಯ ವಿದ್ಯಾರ್ಥಿಗಳಿಗೆ ಕೋವಿಡ್
ಮಯಾಂಕ್ ಅಗರ್ವಾಲ್ 62, ಪೂಜಾರ 47, ಶುಬ್ಮನ್ ಗಿಲ್ 47, ಕೊಹ್ಲಿ 36 ಮತ್ತು ಅಕ್ಷರ್ ಪಟೇಲ್ 41 ರನ್ಗಳಿಸಿದ್ದರು. ಕಿವೀಸ್ ಪರ ಮೊದಲ ಇನ್ನಿಂಗ್ಸ್ನಲ್ಲಿ ಎಲ್ಲಾ 10 ವಿಕೆಟ್ ಪಡೆದಿದ್ದ ಅಜಾಜ್ ಮತ್ತೆ 4 ವಿಕೆಟ್ ಪಡೆದರೆ, ರಚಿನ್ ರವೀಂದ್ರ 3 ವಿಕೆಟ್ ಪಡೆದರು.
ಆರಂಭಿಕ ಆಘಾತ:
540 ರನ್ಗಳ ಗುರಿ ಬೆನ್ನಟ್ಟಿದ ಕಿವೀಸ್ ರವಿಚಂದ್ರನ್ ಅಶ್ವಿನ್ ಮತ್ತು ಅಕ್ಷರ್ ಪಟೇಲ್ ದಾಳಿಗೆ ಸಿಲುಕಿ 55 ರನ್ಗಳಾಗುಷ್ಟರಲ್ಲಿ 3 ವಿಕೆಟ್ ಕಳೆದುಕೊಂಡಿತು. ನಾಯಕ ಟಾಮ್ ಲೇಥಮ್(6), ವಿಲ್ ಯಂಗ್(20) ಮತ್ತು ರಾಸ್ ಟೇಲರ್(6) ಅಶ್ವಿನ್ ಸ್ಪಿನ್ ಮೋಡಿಗೆ ಬಲಿಯಾದರು.
ಡೇರಿಲ್ ಮಿಚೆಲ್ - ನಿಕೋಲ್ಸ್ ಜೊತೆಯಾಟ:
ಆದರೆ, 4ನೇ ವಿಕೆಟ್ಗೆ ಒಂದಾದ ಡೇರಿಲ್ ಮಿಚೆಲ್ ಮತ್ತು ಹೆನ್ರಿ ನಿಕೋಲ್ಸ್ 73 ರನ್ ಸೇರಿಸಿ ಭಾರತೀಯ ಬೌಲರ್ಗಳನ್ನು ಸ್ವಲ್ಪ ಸಮಯ ಕಾಡಿದರು. ಆದರೆ 2ನೇ ಸ್ಪೆಲ್ನಲ್ಲಿ ದಾಳಿಗಿಳಿದ ಅಕ್ಷರ್ ಪಟೇಲ್ 92 ಎಸೆತಗಳಲ್ಲಿ 2 ಸಿಕ್ಸರ್ ಮತ್ತು 7 ಬೌಂಡರಿ ಸಹಿತ 60 ರನ್ಗಳಿಸಿದ್ದ ಮಿಚೆಲ್ ವಿಕೆಟ್ ಪಡೆದು ಬ್ರೇಕ್ ನೀಡಿದರು. ಇವರ ಬೆನ್ನಲ್ಲೇ ಬಂದ ವಿಕೆಟ್ ಕೀಪರ್ ಟಾಮ್ ಬ್ಲಂಡೆಲ್ ಖಾತೆ ತೆರೆಯುವ ಮುನ್ನವೇ ರನ್ಔಟ್ ಆಗಿ ವಾಪಸ್ ಆದರು.
ಹೆನ್ರಿ ನಿಕೋಲ್ಸ್ ಅಜೇಯ 36 ಮ್ತು ರಚಿನ್ ರವೀಂದ್ರ 2 ರನ್ಗಳಿಸಿ 4ನೇ ದಿನಕ್ಕೆ ಬ್ಯಾಟಿಂಗ್ ಆರಂಭಿಸಿದ್ದರು. ಆದ್ರೆ ಭಾರತದ ದಾಳಿಗೆ ನಲುಗಿದ ಕಿವೀಸ್ ಪಡೆ ಇಂದಿನ ದಿನ ಕೇವಲ 27 ರನ್ಗಳಿಸಿ ತನ್ನೆಲ್ಲ ವಿಕೆಟ್ ಕಳೆದುಕೊಂಡು ಹೀನಾಯ ಸೋಲು ಕಂಡಿತು.
ಭಾರತದ ಪರ ಆರ್.ಅಶ್ವಿನ್ 27ಕ್ಕೆ 4, ಜಯಂತ್ ಯಾದವ್ 49ಕ್ಕೆ 4, ಅಕ್ಷರ್ ಪಟೇಲ್ 42ಕ್ಕೆ 1 ವಿಕೆಟ್ ಪಡೆದು ಮಿಂಚಿದರು.