ETV Bharat / sports

ಇಂದು ಭಾರತದ ವಿರುದ್ಧ 2ನೇ ಟಿ-20... ಶ್ರೀಲಂಕಾಕ್ಕೆ ಮಾಡು ಇಲ್ಲವೆ ಮಡಿ ಪಂದ್ಯ!

ಭಾರತ-ಶ್ರೀಲಂಕಾ ತಂಡಗಳ ನಡುವಿನ ನಿನ್ನೆಯ ಪಂದ್ಯಕ್ಕೆ ಕೊರೊನಾ ಕಾಟ ಉಂಟಾಗಿದ್ದು, ಪಂದ್ಯ ಮುಂದೂಡಿಕೆಯಾಗಿತ್ತು. ಇದಕ್ಕೆ ಸಂಬಂಧಿಸಿದಂತೆ ಬಿಸಿಸಿಐ ಖಚಿತ ಮಾಹಿತಿ ನೀಡಿದ್ದು, ಪಂದ್ಯ ಇಂದು ನಡೆಯಲಿದೆ.

india vs sri lanka 2nd t20i, india vs sri lanka 2nd t20i match, india vs sri lanka 2nd t20i match today, ಇಂದು ಭಾರತ ವಿರುದ್ಧ ಶ್ರೀಲಂಕಾಕ್ಕೆ 2ನೇ ಟಿ20, ಇಂದು ಭಾರತ ವಿರುದ್ಧ ಶ್ರೀಲಂಕಾಕ್ಕೆ 2ನೇ ಟಿ20 ಪಂದ್ಯ, ಇಂದು ಭಾರತ ವಿರುದ್ಧ ಶ್ರೀಲಂಕಾಕ್ಕೆ 2ನೇ ಟಿ20 ಪಂದ್ಯ ಸುದ್ದಿ,
ಶ್ರೀಲಂಕಾಕ್ಕೆ ಮಾಡು ಇಲ್ಲವೆ ಮಡಿ ಪಂದ್ಯ
author img

By

Published : Jul 28, 2021, 8:59 AM IST

ಕೊಲಂಬೊ: ಭಾರತ-ಶ್ರೀಲಂಕಾ ನಡುವಿನ ಟಿ20 ಕ್ರಿಕೆಟ್ ಸರಣಿಗೆ ಇದೀಗ ಮತ್ತೊಮ್ಮೆ ಕೊರೊನಾ ವೈರಸ್​ ಹಾವಳಿ ತಟ್ಟಿದೆ. ಅದೇ ಕಾರಣಕ್ಕಾಗಿ ಉಭಯ ತಂಡಗಳ ನಡುವಿನ ಎರಡನೇ ಟಿ-20 ಪಂದ್ಯವನ್ನು ಮುಂದೂಡಿಕೆ ಮಾಡಲಾಗಿತ್ತು. ಇದಕ್ಕೆ ಸಂಬಂಧಿಸಿದಂತೆ ಭಾರತೀಯ ಕ್ರಿಕೆಟ್ ಮಂಡಳಿ ಕೂಡ ಟ್ವಿಟರ್​ನಲ್ಲಿ ಮಾಹಿತಿ ಹಂಚಿಕೊಂಡಿತ್ತು. ಈಗ ಇದಕ್ಕೆ ಸಂಬಂಧಿಸಿದಂತೆ ಬಿಸಿಸಿಐ ಖಚಿತ ಮಾಹಿತಿ ನೀಡಿದೆ.

ಟೀಂ ಇಂಡಿಯಾ ಆಲ್​ರೌಂಡರ್ ಕೃನಾಲ್ ಪಾಂಡ್ಯಾಗೆ ಕೊರೊನಾ ಸೋಂಕು ದೃಢಗೊಂಡಿರುವ ಕಾರಣ ಪಂದ್ಯ ಮುಂದೂಡುವ ನಿರ್ಧಾರ ಕೈಗೊಳ್ಳಲಾಗಿತ್ತು. ಕೃನಾಲ್ ಪಾಂಡ್ಯಾಗೆ ಕೊರೊನಾ ಸೋಂಕು ದೃಢಗೊಳ್ಳುತ್ತಿದ್ದಂತೆ ಇದೀಗ ಎಲ್ಲ ಪ್ಲೇಯರ್ಸ್​ ಹಾಗೂ ಸಹಾಯಕ ಸಿಬ್ಬಂದಿ ಆರ್​ಟಿ-ಪಿಸಿಆರ್​ ಟೆಸ್ಟ್​ಗೊಳಪಡಿಸಲಾಗಿತ್ತು.

ಇದೀಗ ಎಲ್ಲರಿಗೂ ನೆಗೆಟಿವ್ ವರದಿ ಬಂದಿದ್ದು ಬುಧವಾರ ನಡೆಯುವ ಪಂದ್ಯಕ್ಕೆ ಹಾಜರಾಗಲಿದ್ದಾರೆ. ಭಾರತೀಯ ಕಾಲಮಾನದ ಪ್ರಕಾರ ಕೊಲಂಬೊದ ಆರ್​. ಪ್ರೇಮ್​ದಾಸ್​ ಕ್ರೀಡಾಂಗಣದಲ್ಲಿ ಪಂದ್ಯ ರಾತ್ರಿ 8ಕ್ಕೆ ನಡೆಯಲಿದ್ದು, ಸರಣಿ ಜೀವಂತವಾಗಿಸಿಟ್ಟುಕೊಳ್ಳಬೇಕಾದರೇ ಶ್ರೀಲಂಕಾಕ್ಕೆ ಈ ಪಂದ್ಯ ಮಾಡು ಇಲ್ಲವೇ ಮಡಿಯಾಗಿದೆ.

ಈಗಾಗಲೇ ಮುಕ್ತಾಯಗೊಂಡಿರುವ ಮೂರು ಏಕದಿನ ಪಂದ್ಯಗಳ ಸರಣಿಯಲ್ಲಿ ಭಾರತ 2-1 ಅಂತರದಿಂದ ಜಯ ಸಾಧಿಸಿದೆ. ಜೊತೆಗೆ ಮೊದಲ ಟಿ-20 ಪಂದ್ಯದಲ್ಲಿ 38 ರನ್​ಗಳ ಜಯ ದಾಖಲು ಮಾಡಿದೆ.

ಏಕದಿನ ಸರಣಿ ಆರಂಭಗೊಳ್ಳುವುದಕ್ಕೂ ಮುಂಚಿತವಾಗಿ ಲಂಕಾ ತಂಡದ ಕೆಲ ಪ್ಲೇಯರ್ಸ್‌ಗೆ ಸೋಂಕು ದೃಢಗೊಂಡಿತ್ತು. ಹೀಗಾಗಿ ಜುಲೈ 13ರ ಬದಲು ಜುಲೈ 17ರಿಂದ ಟೂರ್ನಿ ಆರಂಭಗೊಂಡಿತ್ತು. ಇದೀಗ ಇನ್ನು ಎರಡು ಟಿ-20 ಪಂದ್ಯ ನಡೆಯುವುದು ಬಾಕಿ ಉಳಿದಿದ್ದು, ಇದರ ಬೆನ್ನಲ್ಲೇ ಪಾಂಡ್ಯಾಗೆ ಸೋಂಕು ಪತ್ತೆಯಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.