ETV Bharat / sports

ನನ್ನ ಮಗನ ಆಗಮನ ನನ್ನ ಯೋಚನಾ ಲಹರಿ ಬದಲಿಸಿದೆ ; ಅಗ್ರೆಸ್ಸಿವ್ ಆಟಕ್ಕೆ ಕಾರಣ ಕೊಟ್ಟ ಪಾಂಡ್ಯ - ಆಸ್ಟ್ರೇಲಿಯಾ ವಿರುದ್ದ ಏಕದಿನ ಪಂದ್ಯ

ಮಗನ ಜನನದ ಬಳಿಕ ತಾವು ಬೇರೆ ರೀತಿಯಲ್ಲಿಯೇ ಯೋಚಿಸಲು ಪ್ರಾರಂಭಿಸಿರುವುದಾಗಿ ಪಾಂಡ್ಯ ತಿಳಿಸಿದ್ದಾರೆ. ಜೂನಿಯರ್ ಪಾಂಡ್ಯ ಆಗಮನದಿಂದ ನಾನು ಇನ್ನೂ ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಗಿಲ್ಲ ಎಂದು ಮಗನ ಜೊತೆಗಿನ ತುಂಟಾಟದ ಕ್ಷಣಗಳನ್ನು ನೆನಪಿಸಿಕೊಂಡರು..

Having a son has changed my perspective of life: Hardik Pandya
ಆಲ್‌ರೌಂಡರ್ ಹಾರ್ದಿಕ್ ಪಾಂಡ್
author img

By

Published : Nov 27, 2020, 10:50 PM IST

ನವದೆಹಲಿ : ಆಸ್ಟ್ರೇಲಿಯಾ ವಿರುದ್ಧ ಇಂದು ನಡೆದ ಮೊದಲ ಏಕದಿನ ಪಂದ್ಯದಲ್ಲಿ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ತಮ್ಮ ಈ ಬಲ ಪ್ರದರ್ಶನಕ್ಕೆ ಕಾರಣ ತಿಳಿಸಿದ್ದಾರೆ.

76 ಎಸೆತಗಳಲ್ಲಿ 90 ರನ್ ಸಿಡಿಸಿದ ಹಾರ್ದಿಕ್ ಪಾಂಡ್ಯ ಚೊಚ್ಚಲ ಶತಕ ಬಾರಿಸುವ ಅವಕಾಶದಿಂದ ವಂಚಿತರಾದರೂ ತಂಡದ ಅಗ್ರೆಸ್ಸಿವ್​ ಅಟಗಾರರಾಗಿ ಹೊರಹೊಮ್ಮಿದ್ದಾರೆ. ಇಂದಿನ ಈ ಸ್ಫೋಟಕ ಬ್ಯಾಟಿಂಗ್​ಗೆ ಅಸಲಿ ಕಾರಣವನ್ನು ಸಹ ಬಹಿರಂಗಪಡಿಸಿದ್ದಾರೆ.

Having a son has changed my perspective of life: Hardik Pandya
ಮಗನೊಂದಿಗೆ ಆಲ್‌ರೌಂಡರ್ ಹಾರ್ದಿಕ್ ಪಾಂಡ್

ಸಿಡ್ನಿ ಕ್ರಿಡಾಂಗಣದಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಬಲಿಷ್ಟ ಆಸ್ಟ್ರೇಲಿಯಾ ವಿರುದ್ಧ 90 ರನ್ ಗಳಿಸಲು ಕಾರಣ ನನ್ನ ಜೀವನದಲ್ಲಾದ ಬದಲಾವಣೆ. ಈ ಉತ್ತಮ ಪ್ರದರ್ಶನಕ್ಕೆ ನನ್ನ ಮಗನ ಆಗಮನವೇ ಪ್ರೇರಣೆ. ತಂದೆಯಾದ ಬಳಿಕ ನನ್ನ ಜೀವನದ ದೃಷ್ಟಿಕೋನವೇ ಬದಲಾಗಿದೆ. ತಂಡಕ್ಕೆ ಇಷ್ಟು ಮೊತ್ತ ಸೇರಿಸಲು ಇತ್ತೀಚೆಗೆ ನನ್ನ ಜೀವನದಲ್ಲಾದ ಪರಿವರ್ತನೆಯೇ ಕಾರಣ ಎಂದಿದ್ದಾರೆ.

ಇದನ್ನೂ ಓದಿ: ಪಾಂಡ್ಯ, ಧವನ್ ಹೋರಾಟ ವ್ಯರ್ಥ.. ಮೊದಲ ಏಕದಿನ ಪಂದ್ಯ ಗೆದ್ದು ಬೀಗಿದ ಆಸೀಸ್

ಪತ್ನಿ, ನಟಿ ಹಾಗೂ ರೂಪದರ್ಶಿ ನತಾಶಾ ಸ್ಟ್ಯಾನ್‌ಕೊವಿಚ್‌ ಜುಲೈ 30ರಂದು ಗಂಡು ಮಗುವಿಗೆ ಜನ್ಮ ನೀಡಿದ್ದು, ತನ್ನ ಜೀವನದ ಪರಿವರ್ತನೆಗೆ ಇದೇ ಕಾರಣ ಎಂದಿದ್ದಾರೆ ಹಾರ್ದಿಕ್‌. ಈ ದಂಪತಿ ತಮ್ಮ ಮಗುವಿಗೆ ಅಗಸ್ತ್ಯ ಎಂದು ನಾಮಕಾರಣ ಮಾಡಿದ್ದಾರೆ.

ಮಗನ ಜನನದ ಬಳಿಕ ತಾವು ಬೇರೆ ರೀತಿಯಲ್ಲಿಯೇ ಯೋಚಿಸಲು ಪ್ರಾರಂಭಿಸಿರುವುದಾಗಿ ಪಾಂಡ್ಯ ತಿಳಿಸಿದ್ದಾರೆ. ಜೂನಿಯರ್ ಪಾಂಡ್ಯ ಆಗಮನದಿಂದ ನಾನು ಇನ್ನೂ ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಗಿಲ್ಲ ಎಂದು ಮಗನ ಜೊತೆಗಿನ ತುಂಟಾಟದ ಕ್ಷಣಗಳನ್ನು ನೆನಪಿಸಿಕೊಂಡರು.

ಪಾಂಡ್ಯ ಅವರ ಸಿಡಿಲಬ್ಬರದ ಬ್ಯಾಟಿಂಗ್ ಹೊರತಾಗಿಯೂ ಟೀಂ ಇಂಡಿಯಾ ಆಸ್ಟ್ರೇಲಿಯಾ ವಿರುದ್ಧ 66 ರನ್​ಗಳಿಂದ ಮುಗ್ಗರಿಸಿತು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.