ETV Bharat / sports

ಅಂತರಾಷ್ಟ್ರೀಯ ಕ್ರಿಕೆಟ್​​ನಲ್ಲಿ ಇತಿಹಾಸ ನಿರ್ಮಿಸಿದ ಆಸ್ಟ್ರೇಲಿಯಾ ಮಹಿಳಾ ತಂಡ​

author img

By

Published : Apr 4, 2021, 1:02 PM IST

ಈ ಮೊದಲು ರಿಕಿ ಪಾಂಟಿಂಗ್ ನೇತೃತ್ವದ ಆಸ್ಟ್ರೇಲಿಯಾ ಪುರುಷರ ತಂಡ ಸತತ 21 ಏಕದಿನ ಪಂದ್ಯ ಗೆದ್ದು ಈ ದಾಖಲೆ ನಿರ್ಮಿಸಿತ್ತು.

Australia Women's cricket team creates record of winning most consecutive ODIs
ಆಸ್ಟ್ರೇಲಿಯಾ ಮಹಿಳಾ ತಂಡ​

ಮೌಂಟ್ ಮೌಂಗನ್ಯುಯಿ: ಆಸ್ಟ್ರೇಲಿಯಾ ಮತ್ತು ನ್ಯೂಜಿಲ್ಯಾಂಡ್​​ ಮಹಿಳಾ ತಂಡಗಳ ನಡುವೆ ನಡೆಯುತ್ತಿರುವ ಮೂರು ಪಂದ್ಯಗಳ ಏಕದಿನ ಕ್ರಿಕೆಟ್‌‌ ಸರಣಿಯಲ್ಲಿ ಆಸ್ಟ್ರೇಲಿಯಾ ಭರ್ಜರಿ ಜಯಗಳಿಸುವ ಮೂಲಕ ವಿಶೇಷ ದಾಖಲೆಯೊಂದನ್ನು ಬರೆದಿದೆ.

ಮೆಗ್ ಲ್ಯಾನಿಂಗ್ ನೇತೃತ್ವದ ಆಸೀಸ್ ತಂಡವು ಕಿವೀಸ್​​ ವಿರುದ್ಧ 6 ವಿಕೆಟ್​ಗಳ ಗೆಲುವು ಪಡೆದಿದೆ. ಈ ಗೆಲುವಿನೊಂದಿಗೆ ಏಕದಿನ ಮಾದರಿ ಕ್ರಿಕೆಟ್​ನಲ್ಲಿ ಸತತ 22 ಪಂದ್ಯ ಗೆದ್ದ ವಿಶೇಷ ಗೌರವಕ್ಕೆ ಕಾಂಗರೂ ಪಡೆ ಪಾತ್ರವಾಗಿದೆ.

ಈ ಮೊದಲು ರಿಕಿ ಪಾಂಟಿಂಗ್ ನೇತೃತ್ವದ ಆಸ್ಟ್ರೇಲಿಯಾ ಪುರುಷರ ತಂಡ ಸತತ 21 ಏಕದಿನ ಪಂದ್ಯ ಗೆದ್ದು ದಾಖಲೆ ನಿರ್ಮಿಸಿತ್ತು.

Six-wicket win ✅
ODI world record ✅

A good day at the office for @AusWomenCricket to kick-start the Rose Bowl series.#NZvAUS https://t.co/KCSyAd8n0w

— ICC (@ICC) April 4, 2021 ">

ಮೊದಲ ಏಕದಿನ ಪಂದ್ಯದಲ್ಲಿ ಅಲೆಕ್ಸ್​ ಹೇಲಿ, ಪೆರ್ರಿ ಮತ್ತು ಗಾರ್ಡನರ್ ಅರ್ಧಶತಕದ ನೆರವಿನಿಂದ ಆಸಿಸ್​ ತಂಡ 6 ವಿಕೆಟ್​ಗಳ ಅಮೋಘ ಜಯ ಸಾಧಿಸಿದೆ.

ಇದನ್ನೂ ಓದಿ: ನಾಟ್​ವೆಸ್ಟ್​ ಸರಣಿ ವೇಳೆ ಹಠಮಾರಿ ಸೆಹ್ವಾಗ್​ರಿಂದ ಮಹತ್ವದ ನಾಯಕತ್ವ ಪಾಠ ಕಲಿತಿದ್ದೆ : ದಾದಾ

ಸಂಕ್ಷಿಪ್ತ ಸ್ಕೋರ್​

ನ್ಯೂಜಿಲ್ಯಾಂಡ್ ಮಹಿಳೆಯರು​ 50 ಓವರ್​ಗಳಲ್ಲಿ 212/10 (ಲಾರೆನ್ ಡೌನ್ 90, ಅಮೇಲಿ ಕೇರ್ 33, ಸ್ಕಾಟ್ 4/32, ನಿಕೋಲಾ ಕ್ಯಾರಿ 3/34)

ಆಸ್ಟ್ರೇಲಿಯಾ ಮಹಿಳೆಯರು 38.3 ಓವರ್​ಗಳಲ್ಲಿ 212/4 (ಅಲೆಕ್ಸ್​ ಹೇಲಿ 65, ಪೆರ್ರಿ 56* , ಗಾರ್ಡನರ್ 53 *)

ಮೌಂಟ್ ಮೌಂಗನ್ಯುಯಿ: ಆಸ್ಟ್ರೇಲಿಯಾ ಮತ್ತು ನ್ಯೂಜಿಲ್ಯಾಂಡ್​​ ಮಹಿಳಾ ತಂಡಗಳ ನಡುವೆ ನಡೆಯುತ್ತಿರುವ ಮೂರು ಪಂದ್ಯಗಳ ಏಕದಿನ ಕ್ರಿಕೆಟ್‌‌ ಸರಣಿಯಲ್ಲಿ ಆಸ್ಟ್ರೇಲಿಯಾ ಭರ್ಜರಿ ಜಯಗಳಿಸುವ ಮೂಲಕ ವಿಶೇಷ ದಾಖಲೆಯೊಂದನ್ನು ಬರೆದಿದೆ.

ಮೆಗ್ ಲ್ಯಾನಿಂಗ್ ನೇತೃತ್ವದ ಆಸೀಸ್ ತಂಡವು ಕಿವೀಸ್​​ ವಿರುದ್ಧ 6 ವಿಕೆಟ್​ಗಳ ಗೆಲುವು ಪಡೆದಿದೆ. ಈ ಗೆಲುವಿನೊಂದಿಗೆ ಏಕದಿನ ಮಾದರಿ ಕ್ರಿಕೆಟ್​ನಲ್ಲಿ ಸತತ 22 ಪಂದ್ಯ ಗೆದ್ದ ವಿಶೇಷ ಗೌರವಕ್ಕೆ ಕಾಂಗರೂ ಪಡೆ ಪಾತ್ರವಾಗಿದೆ.

ಈ ಮೊದಲು ರಿಕಿ ಪಾಂಟಿಂಗ್ ನೇತೃತ್ವದ ಆಸ್ಟ್ರೇಲಿಯಾ ಪುರುಷರ ತಂಡ ಸತತ 21 ಏಕದಿನ ಪಂದ್ಯ ಗೆದ್ದು ದಾಖಲೆ ನಿರ್ಮಿಸಿತ್ತು.

ಮೊದಲ ಏಕದಿನ ಪಂದ್ಯದಲ್ಲಿ ಅಲೆಕ್ಸ್​ ಹೇಲಿ, ಪೆರ್ರಿ ಮತ್ತು ಗಾರ್ಡನರ್ ಅರ್ಧಶತಕದ ನೆರವಿನಿಂದ ಆಸಿಸ್​ ತಂಡ 6 ವಿಕೆಟ್​ಗಳ ಅಮೋಘ ಜಯ ಸಾಧಿಸಿದೆ.

ಇದನ್ನೂ ಓದಿ: ನಾಟ್​ವೆಸ್ಟ್​ ಸರಣಿ ವೇಳೆ ಹಠಮಾರಿ ಸೆಹ್ವಾಗ್​ರಿಂದ ಮಹತ್ವದ ನಾಯಕತ್ವ ಪಾಠ ಕಲಿತಿದ್ದೆ : ದಾದಾ

ಸಂಕ್ಷಿಪ್ತ ಸ್ಕೋರ್​

ನ್ಯೂಜಿಲ್ಯಾಂಡ್ ಮಹಿಳೆಯರು​ 50 ಓವರ್​ಗಳಲ್ಲಿ 212/10 (ಲಾರೆನ್ ಡೌನ್ 90, ಅಮೇಲಿ ಕೇರ್ 33, ಸ್ಕಾಟ್ 4/32, ನಿಕೋಲಾ ಕ್ಯಾರಿ 3/34)

ಆಸ್ಟ್ರೇಲಿಯಾ ಮಹಿಳೆಯರು 38.3 ಓವರ್​ಗಳಲ್ಲಿ 212/4 (ಅಲೆಕ್ಸ್​ ಹೇಲಿ 65, ಪೆರ್ರಿ 56* , ಗಾರ್ಡನರ್ 53 *)

ETV Bharat Logo

Copyright © 2024 Ushodaya Enterprises Pvt. Ltd., All Rights Reserved.