ಅಡಿಲೇಡ್: ಗುಲಾಬಿ ಬಣ್ಣದ ಚೆಂಡನ್ನು ದೀಪಗಳ ಅಡಿಯಲ್ಲಿ ನೋಡುವುದು ಅಷ್ಟು ಸುಲಭವಲ್ಲ ಎಂದು ಆಸ್ಟ್ರೇಲಿಯಾ ತಂಡದ ನಾಯಕ ಟಿಮ್ ಪೈನ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಪಿಂಕ್ ಬೌಲಿಂಗ್ ಸಾಧಾರಣ ಟೆಸ್ಟ್ ಬಾಲ್ನಂತೆ ಇರುವುದಿಲ್ಲ. ಈ ಬೌಲಿಂಗ್ ಎದುರಿಸುವುದು ಖಂಡಿತವಾಗಿಯೂ ಅಷ್ಟು ಸುಲಭವಲ್ಲ. ಕ್ರೀಸ್ನಲ್ಲಿ ಪಿಂಕ್ ಬಾಲ್ಗೆ ಹೊಂದಿಕೊಳ್ಳಬೇಕೆಂದರೆ ಬ್ಯಾಟ್ಸಮನ್ ಸಮಯ ತೆಗೆದುಕೊಳ್ಳುತ್ತಾನೆ. ಹೀಗಾಗಿ, ಬ್ಯಾಟಿಂಗ್ ಮಾಡುವುದು ಅಷ್ಟೊಂದು ಸರಳವಾಗಿ ಇರಲಿಲ್ಲ. ಕೆಲವು ಬ್ಯಾಟ್ಸ್ಮನ್ಗಳು ಅತ್ಯುತ್ತಮ ರಕ್ಷಣಾತ್ಮಕ ಆಟದ ಮೊರೆ ಹೋಗಿದ್ದರೆ ಫಲಿತಾಂಶ ಬೇರೆಯೇ ಆಗಿರುತ್ತಿತ್ತು ಎಂದು ದಿನದ ಪಂದ್ಯದ ಬಳಿಕ ಸುದ್ದಿಗೋಷ್ಠಿಯಲ್ಲಿ ಫೈನ್ ತಮ್ಮ ಅಭಿಪ್ರಾಯ ಹಂಚಿಕೊಂಡರು.
ಖಂಡಿತವಾಗಿಯೂ ಇದು ನಮ್ಮ ಅತ್ಯುತ್ತಮ ಪ್ರದರ್ಶನವಲ್ಲ. ಆದರೆ, ಆಕ್ರಮಣಕಾರಿ ಬೌಲಿಂಗ್ ಗುಣಮಟ್ಟವನ್ನು ಹೊಂದಿರುವ ಆಸ್ಟ್ರೇಲಿಯಾ ಪುನರಾಗಮನ ಮಾಡಲು ಖಂಡಿತವಾಗಿಯೂ ಪ್ರಯತ್ನಿಸುತ್ತದೆ ಎಂದಿದ್ದಾರೆ. ಭಾರತ ತಂಡದ ಬೌರಲ್ಗಳ ಆಕ್ರಮಣಕಾರಿಯುತ ಬೌಲಿಂಗ್ ನಮ್ಮನ್ನು ಒತ್ತಡಕ್ಕೆ ಸಿಲುಕಿಸಿದೆ. ಉತ್ತಮ ಪ್ರದರ್ಶ ತೋರಲು ನಮಗೆ ಸಾಧ್ಯವಾಗಲಿಲ್ಲ. ಒತ್ತಡದ ನಡುವೆ ನಮ್ಮ ತಂಡ ಉತ್ತಮ ಸ್ಥಿತಿಯಲ್ಲಿದೆ ಎಂದಿದ್ದಾರೆ.
ಇಂದಿನ ಪರಿಸ್ಥಿತಿ ನೋಡಿದರೆ ನಾಳೆ ಏನು ಬೇಕಾದರೂ ಆಗಬಹುದು. ಅವರ ನೀಡಿದ ಸವಾಲನ್ನು ಬೆನ್ನಟ್ಟಬೇಕಾಗಿದೆ ಎಂದಿದ್ದಾರೆ. ರನ್ಗಳ ನಿಯಂತ್ರಣದ ಜೊತೆಗೆ ನಾಳೆಯ ದಿನ ವಿಕೆಟ್ ಕೆಡವಲು ನಾವು ಪ್ರಯತ್ನಿಸುತ್ತೇವೆ ಎಂದೂ ಅವರು ಹೇಳಿದ್ದಾರೆ.
ಇದನ್ನೂ ಓದಿ : ಟೆಸ್ಟ್ ಪಂದ್ಯ: ಮತ್ತೆ ವೈಫಲ್ಯ ಅನುಭವಿಸಿದ ಪೃಥ್ವಿ ಶಾ, ದಿನದಾಟದ ಅಂತ್ಯಕ್ಕೆ 62 ರನ್ಗಳ ಮುನ್ನಡೆ
ಶುಕ್ರವಾರ ಇಲ್ಲಿ ನಡೆದ ಮೊದಲ ಅಹರ್ನಶಿ ಟೆಸ್ಟ್ನಲ್ಲಿ ಆಕ್ರಮಣಕಾರಿ ಬೌಲಿಂಗ್ ನಡುವೆಯೂ ಟೀಂ ಇಂಡಿಯಾ ವಿರುದ್ಧ ಎರಡನೇ ದಿನದಂದು ಪೈನ್ ಅಜೇಯ ಅರ್ಧಶತಕ (73) ಗಳಿಸಿದ್ದಾರೆ.
ಭಾರತ - ಆಸ್ಟ್ರೇಲಿಯಾ ನಡುವಿನ ಬಾರ್ಡರ್-ಗವಾಸ್ಕರ್ ಸರಣಿಯ ಐತಿಹಾಸಿಕ ಪಿಂಕ್ ಬಾಲ್ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದ ಟೀಂ ಇಂಡಿಯಾ ಬ್ಯಾಟಿಂಗ್ ಆಯ್ದುಕೊಂಡಿತ್ತು. ಮೊದಲ ಇನಿಂಗ್ಸ್ನಲ್ಲಿ ಭಾರತ 244ಕ್ಕೆ ಆಲೌಟ್ ಆಗಿದ್ದು, ಎಡರನೇ ದಿನದ ಆಟದ ಅಂತ್ಯದ ವೇಳೆಗೆ 62 ರನ್ಗಳ ಮುನ್ನಡೆ ಸಾಧಿಸಿದೆ.