ಹರಾರೆ(ಜಿಂಬಾಬ್ವೆ): ಐರ್ಲೆಂಡ್ನ ಕ್ರಿಕೆಟ್ ಆಟಗಾರ್ತಿ ಆ್ಯಮಿ ಹಂಟರ್ ಅಪರೂಪದ ದಾಖಲೆ ಮಾಡಿದ್ದಾರೆ. ಜಿಂಬಾಬ್ವೆ ವಿರುದ್ಧದ ಏಕದಿನ ಪಂದ್ಯದಲ್ಲಿ ಶತಕ ಬಾರಿಸುವ ಮೂಲಕ ಅತ್ಯಂತ ಕಿರಿಯ ವಯಸ್ಸಿಗೆ ಶತಕ ದಾಖಲಿಸಿದ ರೆಕಾರ್ಡ್ ಮಾಡಿದ್ದಾರೆ.
ಕೇವಲ 16 ವರ್ಷ ವಯಸ್ಸಿನ ಆ್ಯಮಿ ಹಂಟರ್ ಹರಾರೆಯಲ್ಲಿ ನಡೆದ ಏಕದಿನ ಪಂದ್ಯದಲ್ಲಿ ಈ ದಾಖಲೆ ಮಾಡಿದ್ದು, ಭಾರತೀಯ ಕ್ರಿಕೆಟ್ ಆಟಗಾರ್ತಿ ಮಿಥಾಲಿ ರಾಜ್ ಅವರ ದಾಖಲೆಯನ್ನು ಮುರಿದಿದ್ದಾರೆ.
ಮಿಥಾಲಿ ರಾಜ್ 1999ರಲ್ಲಿ ಐರ್ಲೆಂಡ್ ವಿರುದ್ಧ ಅಜೇಯ 114 ರನ್ ಗಳಿಸುವ ಮೂಲಕ ದಾಖಲೆ ಬರೆದಿದ್ದರು. ಆಗ 16 ವರ್ಷ 205 ದಿನಗಳಾಗಿತ್ತು. ತಮ್ಮ 16ನೇ ವರ್ಷದ ಹುಟ್ಟುಹಬ್ಬದಂದೇ ಆ್ಯಮಿ ಹಂಟರ್ ದಾಖಲೆ ಮುರಿದಿದ್ದಾರೆ.
ಐರ್ಲೆಂಡ್ ಮತ್ತು ಜಿಂಬಾಬ್ವೆ ನಡುವೆ ನಾಲ್ಕು ಪಂದ್ಯಗಳ ಸರಣಿ ನಡೆದಿದ್ದು, ಜಿಂಬಾಬ್ವೆ ಎರಡು ಪಂದ್ಯಗಳನ್ನು ಗೆದ್ದರೆ, ಐರ್ಲೆಂಡ್ ಒಂದು ಪಂದ್ಯ ಗೆದ್ದಿತ್ತು. ಈ ಪಂದ್ಯ ಕೊನೆಯದಾಗಿದ್ದು, ಈ ಪಂದ್ಯವನ್ನು ಗೆಲ್ಲುವ ಅನಿವಾರ್ಯತೆಯಲ್ಲಿ ಐರ್ಲೆಂಡ್ ಇತ್ತು.
ಟಾಸ್ ಸೋತು ಮೊದಲ ಬ್ಯಾಟಿಂಗ್ ಮಾಡಿದ ಐರ್ಲೆಂಡ್ 50 ಓವರ್ಗಳಲ್ಲಿ 3 ವಿಕೆಟ್ ನಷ್ಟಕ್ಕೆ 312 ರನ್ ಗಳಿಸಿತ್ತು. ಈ ಪಂದ್ಯದಲ್ಲಿ ಆ್ಯಮಿ ಹಂಟರ್ 127 ಎಸೆತಗಳಲ್ಲಿ 121 ರನ್ಗಳಿಸಿದ್ದರು. ಮತ್ತೊಬ್ಬ ಆಟಗಾರ್ತಿ ಗ್ಯಾಬಿ ಲೆವಿಸ್ 86 ಎಸೆತಗಳಲ್ಲಿ 78 ರನ್, ನಾಯಕಿ ಲಾರಾ ಡೆಲಾನಿ 53 ಎಸೆತಗಳಲ್ಲಿ 68 ಗಳಿಸಿ ತಂಡ ಬೃಹತ್ ಮೊತ್ತ ದಾಖಲಿಸಲು ನೆರವಾಗಿದ್ದರು.
-
What. A. Knock. pic.twitter.com/FWeMI3zxuV
— Ireland Women’s Cricket (@IrishWomensCric) October 11, 2021 " class="align-text-top noRightClick twitterSection" data="
">What. A. Knock. pic.twitter.com/FWeMI3zxuV
— Ireland Women’s Cricket (@IrishWomensCric) October 11, 2021What. A. Knock. pic.twitter.com/FWeMI3zxuV
— Ireland Women’s Cricket (@IrishWomensCric) October 11, 2021
ಇದನ್ನು ಬೆನ್ನಟ್ಟಿದ ಜಿಂಬಾಬ್ವೆ 50 ಓವರ್ಗಳಿಗೆ 8 ವಿಕೆಟ್ ನಷ್ಟಕ್ಕೆ ಕೇವಲ 227 ರನ್ ಗಳಿಸಲು ಮಾತ್ರ ಸಾಧ್ಯವಾಯಿತು. ಜೊಸೆಫಿನೋ ಕೊಮೊ ಅವರ 106 ಎಸೆತಕ್ಕೆ 66 ರನ್ ಗಳಿಸಿದ್ದು, ವ್ಯರ್ಥವಾಗಿತ್ತು.
ಇದನ್ನೂ ಓದಿ: ದುಷ್ಕೃತ್ಯಕ್ಕೆ ಸಂಚು ರೂಪಿಸಿದ್ದ ಪಾಕ್ ಉಗ್ರ ದೆಹಲಿಯಲ್ಲಿ ಸೆರೆ; ಎಕೆ 47, ಗ್ರೆನೇಡ್ ವಶ