ETV Bharat / sports

ಇಂಗ್ಲೆಂಡ್ ವಿರುದ್ಧ ಮೊದಲ ಏಕದಿನ ಪಂದ್ಯವಾಡಲಿದ್ದಾರೆ ಶೆಫಾಲಿ ವರ್ಮಾ!!

ಮಧ್ಯಮ ಕ್ರಮಾಂಕದಲ್ಲಿ ಇಂದ್ರಾಣಿ ರಾಯ್​ ಹಾಗೂ ಹರ್ಮನ್​ಪ್ರಿತ್ ಕೌರ್ ತಂಡಕ್ಕೆ ಬಲ ತುಂಬಲಿದ್ದಾರೆ. ಇತ್ತ ಬೌಲಿಂಗ್ ವಿಚಾರದಲ್ಲಿ ಭಾರತ ತಂಡ ಬಲಿಷ್ಟ ಪಡೆಯನ್ನ ಕಣಕ್ಕಿಸಲಿದೆ. ಜುಲಾನ್​ ಗೋಸ್ವಾಮಿ ತಂಡ ಮೊದಲ ಆಯ್ಕೆಯಾದರೆ, ಶಿಖಾ ಪಾಂಡೆ, ಪೂಜಾ ವಸ್ತ್ರಕರ್ ಮತ್ತು ಅರುಂಧತಿ ರೆಡ್ಡಿ ಅವರಲ್ಲಿ ಇಬ್ಬರು ತಂಡ ಸೇರಲಿದ್ದಾರೆ..

shafali
ಶಫಾಲಿ ವರ್ಮಾ
author img

By

Published : Jun 26, 2021, 7:56 PM IST

ಬ್ರಿಸ್ಟಲ್(ಇಂಗ್ಲೆಂಡ್) : ಇಂಗ್ಲೆಂಡ್​ ವಿರುದ್ಧದ ಪಾದಾರ್ಪಣಾ ಪಂದ್ಯದಲ್ಲೇ ಉತ್ತಮ ಪ್ರದರ್ಶನ ತೋರಿದ್ದ ಶೆಫಾಲಿ ವರ್ಮಾ ಇದೀಗ ಮುಂಬರುವ ಏಕದಿನ ಪಂದ್ಯಕ್ಕಾಗಿ ಎದುರು ನೋಡುತ್ತಿದ್ದಾರೆ. ವಿಶ್ವ ಚಾಂಪಿಯನ್ ಇಂಗ್ಲೆಂಡ್ ವಿರುದ್ಧ ಮೊದಲ ಏಕದಿನ ಪಂದ್ಯವಾಡಲಿದ್ದಾರೆ. ಇದಕ್ಕೂ ಮೊದಲು 22 ಅಂತಾರಾಷ್ಟ್ರೀಯ ಟಿ-20 ಪಂದ್ಯವಾಡಿರುವ ಶೆಫಾಲಿ ಉತ್ತಮ ಪ್ರದರ್ಶನ ತೋರಿದ್ದಾರೆ.

ಆದರೆ, ಕಳೆದ ಸೌತ್ ಆಫ್ರಿಕಾ ವಿರುದ್ಧ ಏಕದಿನ ಟೂರ್ನಿಗೆ ಅವರನ್ನ ಆಡಿಸದೆ. ಹೊರಗುಳಿಸಲಾಗಿತ್ತು. ಈ ಟೂರ್ನಿಯಲ್ಲಿ ಭಾರತ 1-4ರಿಂದ ಸೋಲುಂಡು ತೀವ್ರ ಟೀಕೆಗೂ ಗುರಿಯಾಗಿತ್ತು. ಶೆಫಾಲಿ ವರ್ಮಾರನ್ನ ಆಡುವ 11ರ ಬಳಗದಲ್ಲಿ ಆಯ್ಕೆ ಮಾಡದ ಕ್ರಮಕ್ಕೆ ತೀವ್ರ ಟೀಕೆ ಕೇಳಿ ಬಂದಿತ್ತು.

ಆದ್ರೆ, ಮುಂಬರುವ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಗೆ ಆಯ್ಕೆ ಮಾಡಲಾಗಿತ್ತು. ಈ ಸರಣಿಯಲ್ಲಿ ಶೆಫಾಲಿ 96 ಹಾಗೂ 63 ರನ್ ಸಿಡಿಸಿ ತನ್ನ ಸಾಮರ್ಥ್ಯ ಪ್ರದರ್ಶಿಸಿ ಈಗ ಏಕದಿನ ಪಂದ್ಯಕ್ಕೂ ಸಿದ್ಧತೆ ನಡೆಸಿದ್ದಾರೆ. ಏಕದಿನ ಪಂದ್ಯದಲ್ಲಿ ಸ್ಮೃತಿ ಮಂದಾನ ಮತ್ತು ಶೆಫಾಲಿ ಆರಂಭಿಕರಾಗಿ ಕಣಕ್ಕಿಳಿಯುವುದು ಬಹುತೇಕ ಖಚಿತವಾಗಿದೆ.

ಮಧ್ಯಮ ಕ್ರಮಾಂಕದಲ್ಲಿ ಇಂದ್ರಾಣಿ ರಾಯ್​ ಹಾಗೂ ಹರ್ಮನ್​ಪ್ರಿತ್ ಕೌರ್ ತಂಡಕ್ಕೆ ಬಲ ತುಂಬಲಿದ್ದಾರೆ. ಇತ್ತ ಬೌಲಿಂಗ್ ವಿಚಾರದಲ್ಲಿ ಭಾರತ ತಂಡ ಬಲಿಷ್ಟ ಪಡೆಯನ್ನ ಕಣಕ್ಕಿಸಲಿದೆ. ಜುಲಾನ್​ ಗೋಸ್ವಾಮಿ ತಂಡ ಮೊದಲ ಆಯ್ಕೆಯಾದರೆ, ಶಿಖಾ ಪಾಂಡೆ, ಪೂಜಾ ವಸ್ತ್ರಕರ್ ಮತ್ತು ಅರುಂಧತಿ ರೆಡ್ಡಿ ಅವರಲ್ಲಿ ಇಬ್ಬರು ತಂಡ ಸೇರಲಿದ್ದಾರೆ.

ಆದರೆ, ಏಕೈಕ ಟೆಸ್ಟ್ ಪಂದ್ಯದಲ್ಲಿ ಮಾರಕ ದಾಳಿ ನಡೆಸಿದ್ದ ಎಕ್ಲೆಸ್ಟೋನ್ ಭಾರತೀಯ ಆಟಗಾರರ ಹಿನ್ನಡೆಗೆ ಕಾರಣರಾಗಿದ್ದರು. ಈಗ ಭಾರತದ ಏಕ್ತಾ ಬಿಶ್ತ್​ ಹಾಗೂ ರಾಧಾ ಯಾದವ್ ಸಹ ಇಂತಹ ಕೌಶಲ್ಯ ಕಲಿಕೆಗೆ ಮುಂದಾಗಿದ್ದಾರೆ.

ಸಂಭಾವ್ಯ ತಂಡ

ಭಾರತ: ಮಿಥಾಲಿ ರಾಜ್ (ನಾಯಕಿ), ಸ್ಮೃತಿ ಮಂಧಾನ, ಶಫಾಲಿ ವರ್ಮಾ, ಪುನಮ್ ರೌತ್, ಹರ್ಮನ್‌ಪ್ರೀತ್​ಕೌರ್ (ವಿಸಿ), ದೀಪ್ತಿ ಶರ್ಮಾ, ತಾನಿಯಾ ಭಾಟಿಯಾ (ಕೀಪರ್), ಸ್ನೇಹ್ ರಾಣಾ, ಜುಲಾನ್ ಗೋಸ್ವಾಮಿ, ಶಿಖಾ ಪಾಂಡೆ, ಜೆಮಿಮಾ ರೊಡ್ರಿಗಸ್, ಅರುಂಧಾ ರೆಡ್ರ್ಯಾ ರಾಧಾ ಯಾದವ್, ಪೂನಮ್ ಯಾದವ್, ಪ್ರಿಯಾ ಪುನಿಯಾ, ಇಂದ್ರಾಣಿ ರಾಯ್ (ಕೀಪರ್)

ಇಂಗ್ಲೆಂಡ್: ಹೀದರ್ ನೈಟ್ (ನಾಯಕಿ), ಟಮ್ಮಿ ಬ್ಯೂಮಾಂಟ್, ಕೇಟ್ ಕ್ರಾಸ್, ನ್ಯಾಟ್ ಸ್ಕಿವರ್, ಸೋಫಿಯಾ ಡಂಕ್ಲೆ, ಲಾರೆನ್ ವಿನ್ಫೀಲ್ಡ್-ಹಿಲ್, ಅನ್ಯಾ ಶ್ರಬ್ಸೋಲ್, ಕ್ಯಾಥರೀನ್ ಬ್ರಂಟ್, ಸೋಫಿ ಎಕ್ಲೆಸ್ಟೋನ್, ಆಮಿ ಜೋನ್ಸ್ (ಕೀಪರ್), ಫ್ರೇಯಾ ಡೇವಿಸ್, ತಾಶ್ ಫಾರಂಟ್, ಸಾರಾ ಗ್ಲೆನ್, ಮ್ಯಾಡಿ ವಿಲಿಯರ್ಸ್, ಫ್ರಾನ್ ವಿಲ್ಸನ್, ಸಾರಾ ಗ್ಲೆನ್, ಎಮಿಲಿ ಅರ್ಲಾಟ್, ತಾಶ್ ಫಾರಂಟ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.