ETV Bharat / sports

ಬಾಂಗ್ಲಾದೇಶ 2ನೇ ಟೆಸ್ಟ್​ನಿಂದಲೂ ಗಾಯಾಳು ರೋಹಿತ್​ ಶರ್ಮಾ ಔಟ್​ - ಕೆಎಲ್ ರಾಹುಲ್ ನಾಯಕತ್ವ

ಗಾಯ ಮಾಡಿಕೊಂಡಿರುವ ಭಾರತ ತಂಡದ ನಾಯಕ ರೋಹಿತ್​ ಶರ್ಮಾರನ್ನು ಬಾಂಗ್ಲಾದೇಶ ಎದುರಿನ 2ನೇ ಟೆಸ್ಟ್​ನಿಂದ ಹೊರಗಿಡಲಾಗಿದೆ.

injured-rohit-sharma-ruled-out
ಗಾಯಾಳು ರೋಹಿತ್​ ಶರ್ಮಾ ಔಟ್​
author img

By

Published : Dec 20, 2022, 2:58 PM IST

ನವದೆಹಲಿ: ಕೈಬೆರಳಿಗೆ ಗಾಯ ಮಾಡಿಕೊಂಡಿರುವ ಭಾರತ ತಂಡದ ನಾಯಕ ರೋಹಿತ್​ ಶರ್ಮಾ ಬಾಂಗ್ಲಾದೇಶದ ವಿರುದ್ಧದ 2ನೇ ಟೆಸ್ಟ್​ನಿಂದಲೂ ಹೊರಬಿದ್ದಿದ್ದಾರೆ. ಡಿಸೆಂಬರ್​ 22 ರಂದು ಢಾಕಾದ ಮೀರ್‌ಪುರದ ಶೇರ್-ಎ-ಬಾಂಗ್ಲಾ ಸ್ಟೇಡಿಯಂನಲ್ಲಿ ನಡೆಯಲಿದ್ದು, ಕೆಎಲ್ ರಾಹುಲ್ ನಾಯಕತ್ವ ಮುಂದುವರಿಸಲಿದ್ದಾರೆ.

ಗಾಯಗೊಂಡಿರುವ ರೋಹಿತ್ ಶರ್ಮಾ ಚಿಕಿತ್ಸೆಗಾಗಿ ಭಾರತಕ್ಕೆ ಮರಳಿದ್ದು, ಎರಡನೇ ಟೆಸ್ಟ್ ಪಂದ್ಯಕ್ಕೂ ಮುನ್ನ ಅವರು ಢಾಕಾಗೆ ವಾಪಸಾಗಲಿದ್ದಾರೆ ಎಂದು ಹೇಳಲಾಗಿತ್ತು. ಆದರೆ, ಗಾಯ ವಾಸಿಯಾಗದ ಕಾರಣ ಟೆಸ್ಟ್​​ನಿಂದ ವಿಶ್ರಾಂತಿ ನೀಡಲಾಗಿದೆ.

ಎರಡು ಟೆಸ್ಟ್‌ಗಳ ಸರಣಿಯಲ್ಲಿ ಭಾರತ 1-0 ಮುನ್ನಡೆಯಲ್ಲಿದೆ. ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ ಫೈನಲ್​ಗೇರಲು ಭಾರತ ಮುಂದಿನ ಎಲ್ಲ ಟೆಸ್ಟ್​ಗಳನ್ನು ಗೆಲ್ಲಬೇಕಿದ್ದು, ಈ ಸರಣಿಯನ್ನು 2-0 ಅಂತರದಲ್ಲಿ ಗೆಲ್ಲುವ ಹುಮ್ಮಸ್ಸಿನಲ್ಲಿದೆ.

ಬಾಂಗ್ಲಾದೇಶ ಪ್ರವಾಸದ ಬಳಿಕ ಭಾರತ ತಂಡ ಹೊಸ ವರ್ಷದ 3ನೇ ತಾರೀಖಿನಿಂದ ಸ್ವದೇಶದಲ್ಲಿ ಶ್ರೀಲಂಕಾ ವಿರುದ್ಧ ಏಕದಿನ, ಟಿ20 ಸರಣಿ ಆಡಲಿದೆ. ಈ ದೂರದೃಷ್ಟಿಯಿಂದಾಗಿ ರೋಹಿತ್​ ಶರ್ಮಾ ಅವರನ್ನು ಬಾಂಗ್ಲಾದೇಶ ಎದುರಿನ ಟೆಸ್ಟ್​ ಪಂದ್ಯದಿಂದ ಹೊರಗಿಡಲಾಗಿದೆ.

ಓದಿ: ಮಹೇಂದ್ರ ಸಿಂಗ್​ ಧೋನಿ ಹೆಸರಲ್ಲಿ ಸೈಬರ್​ ಕ್ರೈಂ ... ಇಬ್ಬರ ಬಂಧನ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.