ಮುಂಬೈ: ಗಾಯದ ಸಮಸ್ಯೆಯಿಂದ ಬೆತ್ ಮೂನಿ ಅವರು ವುಮೆನ್ಸ್ ಪ್ರೀಮಿಯರ್ ಲೀಗ್ (ಡಬ್ಲ್ಯುಪಿಎಲ್) ಟೂರ್ನಿಯ ಉಳಿದ ಪಂದ್ಯಗಳಿಂದ ಹೊರಗುಳಿದಿದ್ದಾರೆ. ಹೀಗಾಗಿ ಭಾರತೀಯ ಆಲ್‌ರೌಂಡರ್ ಸ್ನೇಹ್ ರಾಣಾ ಅವರನ್ನು ಗುಜರಾತ್ ಜೈಂಟ್ಸ್ ತಂಡದ ನೂತನ ನಾಯಕಿಯಾಗಿ ಗುರುವಾರ ನೇಮಿಸಲಾಗಿದೆ. ಮಾರ್ಚ್ 4 ರಂದು ಡಿವೈ ಪಾಟೀಲ್ ಸ್ಟೇಡಿಯಂನಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯಾವಳಿಯ ಆರಂಭಿಕ ಪಂದ್ಯದಲ್ಲಿ ಬ್ಯಾಟಿಂಗ್ ಮಾಡುವಾಗ ಆಸ್ಟ್ರೇಲಿಯಾದ ಮೂನಿ ಗಾಯಗೊಂಡು ಪೆವಲಿಯನ್ ಸೇರಿದ್ದರು.
-
🚨 Beth Mooney has been ruled out of the inaugural season of the Women’s Premier League due to an injury. Laura Wolvaardt has been drafted in as her replacement.#WPL2023 #GujaratGiants #AdaniSportsline #Adani
— Gujarat Giants (@GujaratGiants) March 9, 2023 " class="align-text-top noRightClick twitterSection" data="
">🚨 Beth Mooney has been ruled out of the inaugural season of the Women’s Premier League due to an injury. Laura Wolvaardt has been drafted in as her replacement.#WPL2023 #GujaratGiants #AdaniSportsline #Adani
— Gujarat Giants (@GujaratGiants) March 9, 2023🚨 Beth Mooney has been ruled out of the inaugural season of the Women’s Premier League due to an injury. Laura Wolvaardt has been drafted in as her replacement.#WPL2023 #GujaratGiants #AdaniSportsline #Adani
— Gujarat Giants (@GujaratGiants) March 9, 2023
ಮೂನಿ ಸಂಪೂರ್ಣ ಫಿಟ್ನೆಸ್ ಮರಳಿ ಪಡೆಯಲು ನಾಲ್ಕರಿಂದ ಆರು ವಾರಗಳನ್ನು ತೆಗೆದುಕೊಳ್ಳುವ ನಿರೀಕ್ಷೆಯಿದೆ. ಗುಜರಾತ್ ಜೈಂಟ್ಸ್ ಜೊತೆಗಿನ ಮೊದಲ WPL ಋತುವಿಗಾಗಿ ನಾನು ನಿಜವಾಗಿಯೂ ಎದುರು ನೋಡುತ್ತಿದ್ದೆ. ಆದರೆ, ದುರದೃಷ್ಟವಶಾತ್ ಗಾಯಗಳು ಆಟದ ಭಾಗವಾಗಿದೆ. ಹೀಗಾಗಿ ನಾನು ಉಳಿದ ಪಂದ್ಯಗಳಿಂದ ಹೊರಗುಳಿಯುತ್ತಿದ್ದೇನೆ ಎಂದು ನಿರಾಶೆಗೊಳ್ಳುತ್ತಿದ್ದೇನೆ ಅಂತಾ ಮೂನಿ ಹೇಳಿದರು. ಆದ್ರೂ ಸಹ ನಾನು ತಂಡದ ಪ್ರದರ್ಶನದ ಮೇಲೆ ನಿಗಾವಹಿಸುತ್ತೇನೆ. ಅಷ್ಟೇ ಅಲ್ಲ ನಿತ್ಯ ಅವರನ್ನು ಹುರಿದುಂಬಿಸುವ ಕಾರ್ಯ ಮಾಡುತ್ತೇನೆ ಎಂದು ಮೂನಿ ಹೇಳಿದರು.
ಮೂನಿ ಬದಲಿಗೆ, ಗುಜರಾತ್ ಜೈಂಟ್ಸ್ ದಕ್ಷಿಣ ಆಫ್ರಿಕಾದ ಲಾರಾ ವೊಲ್ವಾರ್ಡ್ ಅವರನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಅವರು ಇತ್ತೀಚೆಗೆ ಮುಕ್ತಾಯಗೊಂಡ 2023 ರ ಮಹಿಳಾ ಟಿ 20 ವಿಶ್ವಕಪ್‌ನ ಫೈನಲ್‌ಗೆ ದಕ್ಷಿಣ ಆಫ್ರಿಕಾದ ಆಟದಲ್ಲಿ ಭರ್ಜರಿ ಪ್ರದರ್ಶನ ತೋರಿದ್ದರು. ಆತಿಥೇಯ ದಕ್ಷಿಣ ಆಫ್ರಿಕಾ T20 ವಿಶ್ವಕಪ್‌ನ ಫೈನಲ್‌ಗೆ ತಲುಪಿದಾಗ ಆಸ್ಟ್ರೇಲಿಯ ವಿರುದ್ಧ ಸೋತಿದ್ದ ಆರು ಪಂದ್ಯಗಳಲ್ಲಿ ಮೂರು ಅರ್ಧಶತಕಗಳೊಂದಿಗೆ ವೊಲ್ವಾರ್ಡ್ ಅಗ್ರ ಸ್ಕೋರರ್ ಆಗಿರುವುದು ಗಮನಾರ್ಹ.
ಇನ್ನು ಭಾರತದ ಸ್ನೇಹ ರಾಣಾ ನಾಯಕರಾಗಿದ್ದರೆ, ಆಸ್ಟ್ರೇಲಿಯಾದ ಆಶ್ಲೇ ಗಾರ್ಡ್ನರ್ ಉಪನಾಯಕರಾಗಿದ್ದಾರೆ. ಮಾರ್ಚ್ 11 ರಂದು ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಗುಜರಾತ್ ಜೈಂಟ್ಸ್ ಸೆಣಸಲಿದೆ.
ಗುಜರಾತ್ ಜೈಂಟ್ಸ್ ಬಳಗ: ಸ್ನೇಹ ರಾಣಾ (ನಾಯಕಿ), ಆಶ್ಲೀಗ್ ಗಾರ್ಡ್ನರ್ (ವಿಕೆಟ್ ಕೀಪರ್), ಲಾರಾ ವೋಲ್ವಾರ್ಡ್, ಸೋಫಿಯಾ ಡಂಕ್ಲೆ, ಅನ್ನಾಬೆಲ್ ಸದರ್ಲ್ಯಾಂಡ್, ಹರ್ಲೀನ್ ಡಿಯೋಲ್, ಕಿಮ್ ಗಾರ್ತ್, ಎಸ್ ಮೇಘನಾ, ಜಾರ್ಜಿಯಾ ವೇರ್ಹ್ಯಾಮ್, ಮಾನ್ಸಿ ಜೋಶಿ, ದಯಾಲನ್ ಹೇಮಲತಾ, ಮೋನಿಕಾ ಪಟೇಲ್, ತನುಜಾ ಕನ್ವರ್, ಸುಷ್ಮಾ ವರ್ಮಾ, ಹರ್ಲಿ ಗಾಲಾ, ಅಶ್ವನಿ ಕುಮಾರಿ, ಪರುಣಿಕಾ ಸಿಸೋಡಿಯಾ, ಶಬ್ನಮ್ ಶಕಿಲ್.
ಸ್ನೇಹ್ ರಾಣಾ ಗುಜರಾತ್ ಜೈಂಟ್ಸ್ ನಾಯಕತ್ವ ಪಡೆಯುವುದರೊಂದಿಗೆ ವುಮೆನ್ಸ್ ಪ್ರೀಮಿಯರ್ ಲೀಗ್‌ನಲ್ಲಿ ಮೂವರು ಭಾರತೀಯ ತಂಡದ ನಾಯಕಿಯರು ಇದ್ದಾರೆ. ಆದರೆ, ದೆಹಲಿ ಮತ್ತು ಯುಪಿ ಇನ್ನೂ ವಿದೇಶಿ ಆಟಗಾರರ ಕೈಯಲ್ಲಿದೆ. ರಾಣಾ ಹೊರತುಪಡಿಸಿ, ಹರ್ಮನ್‌ಪ್ರೀತ್ ಕೌರ್ ಮತ್ತು ಸ್ಮೃತಿ ಮಂಧಾನ ಈ ಲೀಗ್‌ನಲ್ಲಿ ನಾಯಕಿಯಾಗಿರುವ ಇತರ ಭಾರತೀಯ ಆಟಗಾರರಾಗಿದ್ದಾರೆ. ಮುಂಬೈ ಇಂಡಿಯನ್ಸ್ ತಂಡದ ನಾಯಕಿ ಹರ್ಮನ್‌ಪ್ರೀತ್ ಕೌರ್ ಮತ್ತು ಆರ್‌ಸಿಬಿ ನಾಯಕಿ ಸ್ಮೃತಿ ಮಂಧಾನ. ಈಗ ಗುಜರಾತ್ ಜೈಂಟ್ಸ್ ತಂದ ನಾಯಕಿಯಾಗಿ ಸ್ನೇಹಾ ರಾಣಾ ಆಯ್ಕೆಯಾಗಿರುವುದು ಗುಜರಾತ್ ತಂಡದ ಅಭಿಮಾಗಳಿಗೆ ಸಂತಸ ತಂದಿದೆ.