ETV Bharat / sports

ವಿಶ್ವಕಪ್​ಗೆ ಆಸ್ಟ್ರೇಲಿಯಾ​ ತಂಡ ಪ್ರಕಟ: ಗಾಯಾಳು ನಾಯಕ ಪ್ಯಾಟ್​ ಕಮ್ಮಿನ್ಸ್​, ಮ್ಯಾಕ್ಸಿ, ಸ್ಟಾರ್ಕ್​, ಸ್ಮಿತ್​ಗೂ ಸ್ಥಾನ - ಗಾಯಾಳು ನಾಯಕ ಪ್ಯಾಟ್​ ಕಮ್ಮಿನ್ಸ್

5 ಬಾರಿಯ ಏಕದಿನ ವಿಶ್ವಕಪ್​ ಚಾಂಪಿಯನ್​ ಆಸ್ಟ್ರೇಲಿಯಾ 15 ಆಟಗಾರರ ತಂಡವನ್ನು ಬುಧವಾರ ಪ್ರಕಟಿಸಿದೆ. ಸೀನ್​ ಅಬಾಟ್​ಗೆ ಮೊದಲ ಸಲ ಅವಕಾಶ ನೀಡಲಾಗಿದೆ.

ವಿಶ್ವಕಪ್​ಗೆ ಆಸ್ಟ್ರೇಲಿಯಾ​ ತಂಡ ಪ್ರಕಟ
ವಿಶ್ವಕಪ್​ಗೆ ಆಸ್ಟ್ರೇಲಿಯಾ​ ತಂಡ ಪ್ರಕಟ
author img

By ETV Bharat Karnataka Team

Published : Sep 6, 2023, 5:07 PM IST

ಮೆಲ್ಬೋರ್ನ್: ಭಾರತದಲ್ಲಿ ಅಕ್ಟೋಬರ್​ 5 ರಿಂದ ನಡೆಯುವ ಏಕದಿನ ವಿಶ್ವಕಪ್​ಗೆ ಆಸ್ಟ್ರೇಲಿಯಾ 15 ಆಟಗಾರರ ತಾತ್ಕಾಲಿಕ ತಂಡವನ್ನು ಪ್ರಕಟಿಸಿದ್ದು, ಗಾಯಗೊಂಡಿರುವ ನಾಯಕ ಪ್ಯಾಟ್ ಕಮ್ಮಿನ್ಸ್, ಸ್ಟೀವ್ ಸ್ಮಿತ್, ಮಿಚೆಲ್ ಸ್ಟಾರ್ಕ್ ಮತ್ತು ಗ್ಲೆನ್ ಮ್ಯಾಕ್ಸ್‌ವೆಲ್​ಗೂ ಸ್ಥಾನ ನೀಡಲಾಗಿದೆ. ಇದೇ ಮೊದಲ ಬಾರಿಗೆ ಆಲ್​ರೌಂಡರ್ ಸೀನ್ ಅಬಾಟ್​ಗೂ ಅವಕಾಶ ಕಲ್ಪಿಸಲಾಗಿದೆ.

  • Presenting your 15-player men’s provisional squad for the 2023 World Cup!

    The final 15-player squad will be confirmed later this month 🇦🇺 #CWC23 pic.twitter.com/wO0gBbadKi

    — Cricket Australia (@CricketAus) September 6, 2023 " class="align-text-top noRightClick twitterSection" data=" ">

ಆ್ಯಶಸ್​ ಟೆಸ್ಟ್​ ಸರಣಿಯಲ್ಲಿ ನಾಯಕ ಪ್ಯಾಟ್ ಕಮ್ಮಿನ್ಸ್, ಸ್ಟೀವ್​ ಸ್ಮಿತ್ ಅವರು ಮಣಿಕಟ್ಟಿನ ಗಾಯಕ್ಕೆ ತುತ್ತಾದರೆ, ಬೌಲರ್​ ಮಿಚೆಲ್​ ಸ್ಟಾರ್ಕ್ ಮತ್ತು ಡ್ಯಾಶಿಂಗ್​ ಬ್ಯಾಟರ್​ ಗ್ಲೆನ್​ ಮ್ಯಾಕ್ಸ್‌ವೆಲ್ ತೊಡೆಸಂದು ಮತ್ತು ಪಾದದ ನೋವಿನಿಂದಾಗಿ ಸರಣಿಯಿಂದಲೇ ಹೊರಗುಳಿದಿದ್ದರು.

ವಿಶ್ವಕಪ್​ಗೂ ಮೊದಲು ಆಸ್ಟ್ರೇಲಿಯಾ ತಂಡ ದಕ್ಷಿಣ ಆಫ್ರಿಕಾ ಮತ್ತು ಭಾರತದ ವಿರುದ್ಧ ಏಕದಿನ ಸರಣಿ ಆಡಲಿದೆ. ಆದರೆ, ಸರಣಿಯಲ್ಲಿ ಗಾಯಾಳು ಕಮ್ಮಿನ್ಸ್​ ಆಡುವುದು ಅನುಮಾನವಾಗಿದೆ. ಸ್ವೀವ್​ ಸ್ಮಿತ್​, ಮ್ಯಾಕ್ಸ್​​ವೆಲ್​, ಸ್ಟಾರ್ಕ್​ ಅವರನ್ನು ಸರಣಿಯಿಂದ ಕೈಬಿಟ್ಟು ಚೇತರಿಕೆಗೆ ಅವಕಾಶ ನೀಡಲಾಗಿದೆ.

ಭಾರತ ಸರಣಿ ವೇಳೆಗೆ ಎಲ್ಲರೂ ಫಿಟ್​ ಆಗುವ ಸಾಧ್ಯತೆಯಿದೆ. ಹೀಗಾಗಿ ದಕ್ಷಿಣ ಆಫ್ರಿಕಾ ವಿರುದ್ಧ ಗಾಯಾಳುಗಳನ್ನ ಆಡಿಸುತ್ತಿಲ್ಲ. ವಿಶ್ವಕಪ್​ಗೆ ಅಂತಿಮ ತಂಡವನ್ನು ಘೋಷಿಸುವ ಮೊದಲು ದಕ್ಷಿಣ ಆಫ್ರಿಕಾ ಮತ್ತು ಭಾರತದಲ್ಲಿ ಎಂಟು ಏಕದಿನ ಪಂದ್ಯಗಳು ನಡೆಯಲಿವೆ. ಎರಡೂ ಸರಣಿಗಳು ವಿಶ್ವಕಪ್​ಗೆ ಸಿದ್ಧತೆ ನಡೆಸಲು ತಂಡಕ್ಕೆ ಅತ್ಯುತ್ತಮ ಅವಕಾಶ ಒದಗಿಸಿಕೊಡಲಿದೆ ಎಂದು ಆಯ್ಕೆ ಸಮಿತಿ ಮುಖ್ಯಸ್ಥ ಜಾರ್ಜ್ ಬೈಲಿ ಹೇಳಿದ್ದಾರೆ.

ಅಬ್ಬಾಟ್​ ಇನ್​ ಎಲ್ಲಿಸ್​ ಔಟ್​: 31ರ ಹರೆಯದ ಸೀನ್​ ಅಬ್ಬಾಟ್ ವಿಶ್ವಕಪ್​ ತಂಡದಲ್ಲಿ ಸ್ಥಾನ ಪಡೆಯುವ ಮೂಲಕ ಇನ್ನೊಬ್ಬ ವೇಗಿ ನಾಥನ್ ಎಲ್ಲಿಸ್​ರನ್ನು ತಂಡದಿಂದ ಹೊರದಬ್ಬಿದ್ದಾರೆ. ಜೊತೆಗೆ ತಂಡದ ಸ್ಥಾನ ನಿರೀಕ್ಷೆ ಹೊಂದಿದ್ದ ಆರನ್ ಹಾರ್ಡಿ ಮತ್ತು ಲೆಗ್ ಸ್ಪಿನ್ನರ್ ತನ್ವೀರ್ ಸಂಘ ಅವರ ಪ್ರಯತ್ನ ವಿಫಲವಾಗಿದೆ.

ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ಆಲ್‌ರೌಂಡರ್‌ಗಳು ಪ್ರಮುಖ ಪಾತ್ರ ವಹಿಸುವ ಕಾರಣ ಕ್ರಿಕೆಟ್​ ಆಸೀಸ್​ ಪ್ರತಿಭಾವಂತ ಆಟಗಾರರಿಗೆ ಮಣೆ ಹಾಕಿದೆ. ಸೀನ್​ ಅಬಾಟ್ ಜೊತೆಗೆ ಮಿಚೆಲ್ ಮಾರ್ಷ್, ಕ್ಯಾಮರೂನ್ ಗ್ರೀನ್, ಮಾರ್ಕಸ್ ಸ್ಟೊಯಿನಿಸ್ ಅವರನ್ನು ವೇಗದ ಬೌಲಿಂಗ್ ಆಲ್‌ರೌಂಡರ್‌ಗಳಾಗಿ ಆಯ್ಕೆ ಮಾಡಿದೆ. ಆ್ಯಡಂ ಜಂಪಾ ಮತ್ತು ಆಸ್ಟನ್ ಅಗರ್ ಸ್ಪಿನ್​ ಸ್ಪೆಷಲಿಸ್ಟ್​ಗಳಾಗಿದ್ದಾರೆ. ಜೋಶ್ ಇಂಗ್ಲಿಸ್ ಎರಡನೇ ವಿಕೆಟ್​ ಕೀಪರ್​ ಆಗಿ ಸೇರಿಕೊಂಡಿದ್ದಾರೆ.

ತಂಡದ ತಾತ್ಕಾಲಿಕ ಪಟ್ಟಿ ಇದಾಗಿದ್ದು, ಇದನ್ನು ಮಾರ್ಪಡಿಸಲು ಸೆಪ್ಟೆಂಬರ್ 28 ರವರೆಗೆ ಅವಕಾಶವಿದೆ. ಆಸ್ಟ್ರೇಲಿಯಾ ತಂಡ ದಕ್ಷಿಣ ಆಫ್ರಿಕಾ ವಿರುದ್ಧ ನಾಳೆಯಿಂದ 5 ಪಂದ್ಯಗಳ ಏಕದಿನ ಸರಣಿ ಆರಂಭವಾದರೆ, ಸೆಪ್ಟೆಂಬರ್ 22 ರಿಂದ ಭಾರತ ವಿರುದ್ಧ ಮೂರು ಏಕದಿನ ಪಂದ್ಯಗಳನ್ನು ಆಡಲು ಭಾರತಕ್ಕೆ ಪ್ರಯಾಣಿಸಲಿದೆ.

ಆಸ್ಟ್ರೇಲಿಯಾ ವಿಶ್ವಕಪ್​ ತಂಡ ಹೀಗಿದೆ: ಪ್ಯಾಟ್ ಕಮ್ಮಿನ್ಸ್ (ನಾಯಕ), ಸೀನ್ ಅಬಾಟ್, ಆಸ್ಟ್​ನ್ ಅಗರ್, ಅಲೆಕ್ಸ್ ಕ್ಯಾರಿ, ಕ್ಯಾಮರೂನ್ ಗ್ರೀನ್, ಜೋಶ್ ಹೇಜಲ್‌ವುಡ್, ಟ್ರೇವಿಸ್ ಹೆಡ್, ಜೋಶ್ ಇಂಗ್ಲಿಸ್, ಮಿಚೆಲ್ ಮಾರ್ಷ್, ಗ್ಲೆನ್ ಮ್ಯಾಕ್ಸ್‌ವೆಲ್, ಸ್ಟೀವ್ ಸ್ಮಿತ್, ಮಿಚೆಲ್ ಸ್ಟಾರ್ಕ್, ಮಾರ್ಕಸ್ ಸ್ಟೊಯಿನಿಸ್, ಡೇವಿಡ್ ವಾರ್ನರ್, ಆ್ಯಡಂ ಜಂಪಾ (ಪಿಟಿಐ)

ಇದನ್ನೂ ಓದಿ: World Cup 2023: ವಿಶ್ವಕಪ್​ಗೆ ಟೀಂ ಇಂಡಿಯಾ ಪ್ರಕಟ.. ಕೆಎಲ್ ರಾಹುಲ್​ಗೆ ಸ್ಥಾನ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.