ETV Bharat / sports

watch : ಸೋಫಿ ಡಿವೈನ್ ಔಟ್​ ಮಾಡಲು ಸ್ಮೃತಿ ಮಂಧಾನ ಸ್ಟನ್ನಿಂಗ್​ ಕ್ಯಾಚ್ - women's ODI between India and New Zealand

ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ನಾಲ್ಕನೇ ಮಹಿಳಾ ಏಕದಿನ ಪಂದ್ಯದಲ್ಲಿ ರೇಣುಕಾ ಸಿಂಗ್ ಎಸೆದ ಬಾಲ್​ಗೆ ಬ್ಯಾಟ್​ ಬೀಸಿದ ಸೋಫಿ ಡಿವೈನ್ ಅವರನ್ನು ಔಟ್​ ಮಾಡಲು ಸ್ಮೃತಿ ಮಂಧಾನ ಹಿಡಿದ ಸ್ಟನ್ನಿಂಗ್​ ಕ್ಯಾಚ್ ಎಲ್ಲರ ಗಮನ ಸೆಳೆಯಿತು..

ಸೋಫಿ ಡಿವೈನ್ ಔಟ್​ ಮಾಡಲು ಸ್ಮೃತಿ ಮಂಧಾನ ಸ್ಟನ್ನಿಂಗ್​ ಕ್ಯಾಚ್

author img

By

Published : Feb 22, 2022, 1:47 PM IST

ಮಳೆಯಿಂದಾಗಿ ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ನಾಲ್ಕನೇ ಮಹಿಳಾ ಏಕದಿನ ಪಂದ್ಯವನ್ನು 20 ಓವರ್‌ಗಳಿಗೆ ಇಳಿಸಬೇಕಾಯಿತು. ಕ್ವೀನ್ಸ್​ಟೌನ್​ನಲ್ಲಿ ನಡೆದ ಪಂದ್ಯದಲ್ಲಿ ಭಾರತದ ವಿರುದ್ಧ ಆತಿಥೇಯ ನ್ಯೂಜಿಲೆಂಡ್ ತಂಡ 63 ರನ್​ಗಳಿಂದ ಭರ್ಜರಿ ಜಯ ಸಾಧಿಸಿದೆ. ಈ ಮೂಲಕ 5 ಪಂದ್ಯಗಳ ಸರಣಿಯಲ್ಲಿ ನ್ಯೂಜಿಲ್ಯಾಂಡ್​ ತಂಡ 4-0 ಅಂತರದಲ್ಲಿ ಮುನ್ನಡೆ ಪಡೆದಿದೆ.

ಇನ್ನು ಇಂದಿನ ಪಂದ್ಯದಲ್ಲಿ ನ್ಯೂಜಿಲೆಂಡ್ ನಾಯಕಿ ಸೋಫಿ ಡಿವೈನ್ ಅವರನ್ನು ಔಟ್​ ಮಾಡಲು ಸ್ಮೃತಿ ಮಂಧಾನ ಹಿಡಿದ ಸ್ಟನ್ನಿಂಗ್​ ಕ್ಯಾಚ್ ಎಲ್ಲರ ಗಮನ ಸೆಳೆಯಿತು. ಈ ಕ್ಯಾಚ್​ ದೃಶ್ಯ ಈಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್​ ವೈರಲ್​ ಆಗಿದೆ.

ಇದನ್ನೂ ಓದಿ: ವನಿತೆಯರ ಏಕದಿನ ಕ್ರಿಕೆಟ್ ​: 4ನೇ ಪಂದ್ಯದಲ್ಲೂ ಸೋತ ಭಾರತ ವನಿತೆಯರು, ನ್ಯೂಜಿಲ್ಯಾಂಡ್​ಗೆ 63 ರನ್​ಗಳ ಭರ್ಜರಿ ಜಯ

ರೇಣುಕಾ ಸಿಂಗ್ ಎಸೆದ ಬಾಲ್​ಗೆ ಬ್ಯಾಟ್​ ಬೀಸಿದ ಡಿವೈನ್ ಬೌಂಡರಿ ತಲುಪುವ ನಿರೀಕ್ಷೆಯಲ್ಲಿದ್ದರೇನೋ.. ಆದರೆ, ಆ ನಿರೀಕ್ಷೆಯನ್ನ ಮಂಧಾನ ಹುಸಿಯಾಗಿಸಿದ್ದಾರೆ. ಎಡಕ್ಕೆ ಡೈವ್ ಮಾಡಿ ಎರಡೂ ಕೈಗಳಿಂದ ಚೆಂಡನ್ನು ಹಿಡಿದಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.