ಮುಂಬೈ (ಮಹಾರಾಷ್ಟ್ರ): ಆಸ್ಟ್ರೇಲಿಯಾ ವಿರುದ್ಧದ ಏಕೈಕ ಟೆಸ್ಟ್ ಪಂದ್ಯ ಡ್ರಾದತ್ತ ಸಾಗುತ್ತಿದೆ. ಮೂರನೇ ದಿನದಾಟದ ಅಂತ್ಯಕ್ಕೆ 5 ವಿಕೆಟ್ ಕಳೆದುಕೊಂಡಿರುವ ಆಸೀಸ್ ವನಿತೆಯರು 46 ರನ್ಗಳ ಮುನ್ನಡೆ ಸಾಧಿಸಿದ್ದಾರೆ. ಭಾನುವಾರ ಒಂದು ದಿನದ ಪಂದ್ಯ ಬಾಕಿ ಇದ್ದು, ಆಸ್ಟ್ರೇಲಿಯಾವನ್ನು ಭಾರತ ಮೊದಲ ಸೆಷನ್ ಮುಕ್ತಾಯಕ್ಕೂ ಮುನ್ನ 100 ರನ್ ಒಳಗೆ ನಿಯಂತ್ರಿಸಿದಲ್ಲಿ ಗೆಲುವಿನ ಸಾಧ್ಯತೆ ಇದೆ. ಇಲ್ಲವಾದಲ್ಲಿ ಪಂದ್ಯ ಡ್ರಾದತ್ತ ಸಾಗಲಿದೆ. ಸದ್ಯ ಕ್ರೀಸ್ನಲ್ಲಿ ಅನ್ನಾಬೆಲ್ ಸದರ್ಲ್ಯಾಂಡ್ (12) ಮತ್ತು ಆಶ್ಲೀ ಗಾರ್ಡ್ನರ್ (7) ಇದ್ದಾರೆ.
-
An exciting Day 4 awaits in the Test! 🏟️🙌
— BCCI Women (@BCCIWomen) December 23, 2023 " class="align-text-top noRightClick twitterSection" data="
Australia finish Day 3 at 233/5, with a lead of 46 runs.
See you tomorrow for Day 4 action 👋
Scorecard ▶️ https://t.co/8qTsM8XSpd #TeamIndia | #INDvAUS | @IDFCFIRSTBank pic.twitter.com/mV8xxIlUv5
">An exciting Day 4 awaits in the Test! 🏟️🙌
— BCCI Women (@BCCIWomen) December 23, 2023
Australia finish Day 3 at 233/5, with a lead of 46 runs.
See you tomorrow for Day 4 action 👋
Scorecard ▶️ https://t.co/8qTsM8XSpd #TeamIndia | #INDvAUS | @IDFCFIRSTBank pic.twitter.com/mV8xxIlUv5An exciting Day 4 awaits in the Test! 🏟️🙌
— BCCI Women (@BCCIWomen) December 23, 2023
Australia finish Day 3 at 233/5, with a lead of 46 runs.
See you tomorrow for Day 4 action 👋
Scorecard ▶️ https://t.co/8qTsM8XSpd #TeamIndia | #INDvAUS | @IDFCFIRSTBank pic.twitter.com/mV8xxIlUv5
ಎರಡನೇ ದಿನದ ಅಂತ್ಯಕ್ಕೆ ಭಾರತ ಮೊದಲ ಇನ್ನಿಂಗ್ಸ್ಗೆ 7 ವಿಕೆಟ್ ಕಳೆದುಕೊಂಡು 367 ಕೆಲೆಹಾಕಿತ್ತು. ಶನಿವಾರ ಮೂರನೇ ದಿನದ ಆರಂಭದಲ್ಲೇ ಭಾರತ ಉಳಿದ ವಿಕೆಟ್ಗಳನ್ನು ಕಳೆದುಕೊಂಡಿತು. ಇದರಿಂದ ಭಾರತ ಮೊದಲ ಇನ್ನಿಂಗ್ಸ್ನಲ್ಲಿ 406 ರನ್ ಕಲೆಹಾಕಿತು. ಎರಡನೇ ದಿನ ದ ಅಂತ್ಯಕ್ಕೆ 70 ರನ್ಗಳಿಸಿ ಅಜೇಯವಾಗಿದ್ದ ದೀಪ್ತಿ ಶರ್ಮಾ ಅದಕ್ಕೆ 8 ರನ್ ಸೇರಿಸಿ ವಿಕೆಟ್ ಕೊಟ್ಟರು. ಪೂಜಾ ವಸ್ತ್ರಾಕರ್ 14 ರನ್ ಸೇರಿಸಿ ಔಟ್ ಆದರು. ಇನ್ನಿಂಗ್ಸ್ ದೀಪ್ತಿ 171 ಬಾಲ್ ಆಡಿ 9 ಬೌಂಡರಿ ಸಹಾಯದಿಂದ 78 ರನ್ ಕಲೆಹಾಕಿದರೆ, ಪೂಜಾ 126 ಬಾಲ್ ಆಡಿ 47 ರನ್ ಗಳಿಸಿದರು.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ್ದ ಆಸ್ಟ್ರೇಲಿಯಾ ಮೊದಲ ಇನ್ನಿಂಗ್ಸ್ನಲ್ಲಿ 219 ರನ್ಗಳಿಸಿ ಆಲ್ಔಟ್ ಆಗಿತ್ತು. ಭಾರತ ಮೊದಲ ಇನ್ನಿಂಗ್ಸ್ನಲ್ಲಿ ಸ್ಮೃತಿ ಮಂಧಾನ (74), ಜೆಮಿಮಾ ರಾಡ್ರಿಗಸ್ (73), ರಿಚಾ ಘೋಷ್ (52) ಮತ್ತು ದೀಪ್ತಿ ಶರ್ಮಾ (78) ಅವರ ಅರ್ಧಶತಕದ ನೆರವಿನಿಂದ 406 ರನ್ ಕಲೆಹಾಕಿತು. ಇದರಿಂದ 187 ರನ್ಗಳ ಮುನ್ನಡೆಯನ್ನು ಭಾರತದ ವನಿತೆಯರು ಸಾಧಿಸಿದರು.
-
𝙇. 𝘽. 𝙒!
— BCCI Women (@BCCIWomen) December 23, 2023 " class="align-text-top noRightClick twitterSection" data="
Captain Harmanpreet Kaur:
Strike 1⃣ ✅
Strike 2⃣ ✅
Australia 5 down as Alyssa Healy departs.
Follow the Match ▶️ https://t.co/8qTsM8XSpd #TeamIndia | #INDvAUS | @ImHarmanpreet | @IDFCFIRSTBank pic.twitter.com/aQD1eI2UYC
">𝙇. 𝘽. 𝙒!
— BCCI Women (@BCCIWomen) December 23, 2023
Captain Harmanpreet Kaur:
Strike 1⃣ ✅
Strike 2⃣ ✅
Australia 5 down as Alyssa Healy departs.
Follow the Match ▶️ https://t.co/8qTsM8XSpd #TeamIndia | #INDvAUS | @ImHarmanpreet | @IDFCFIRSTBank pic.twitter.com/aQD1eI2UYC𝙇. 𝘽. 𝙒!
— BCCI Women (@BCCIWomen) December 23, 2023
Captain Harmanpreet Kaur:
Strike 1⃣ ✅
Strike 2⃣ ✅
Australia 5 down as Alyssa Healy departs.
Follow the Match ▶️ https://t.co/8qTsM8XSpd #TeamIndia | #INDvAUS | @ImHarmanpreet | @IDFCFIRSTBank pic.twitter.com/aQD1eI2UYC
ಭಾರತವನ್ನು ಆಲ್ಔಟ್ ಮಾಡಿದ ನಂತರ ಎರಡನೇ ಇನ್ನಿಂಗ್ಸ್ಗೆ ಮೈದಾನಕ್ಕಿಳಿದ ಆಸ್ಟ್ರೇಲಿಯಾ 90 ಓವರ್ ಆಡಿ 5 ವಿಕೆಟ್ ನಷ್ಟಕ್ಕೆ 233 ರನ್ ಗಳಿಸಿದೆ. 187 ರನ್ಗಳ ಹಿನ್ನಡೆಯಿಂದ ಪಂದ್ಯ ಆರಂಭಿಸಿದ್ದ ತಂಡ ದಿನದಾಟದ ಮುಕ್ತಾಯಕ್ಕೆ 46 ರನ್ಗಳ ಮುನ್ನಡೆ ಪಡೆದಿದೆ. ಬೆತ್ ಮೂನಿ (33) ರನ್ ಔಟ್ಗೆ ಬಲಿಯಾದರೆ, ಸ್ನೇಹ ಬಾಲ್ಗೆ ಫೋಬೆ ಲಿಚ್‌ಫೀಲ್ಡ್ ಕ್ಲೀನ್ ಬೌಲ್ಡ್ ಆದರು.
-
... and there we go! 👏 👏
— BCCI Women (@BCCIWomen) December 23, 2023 " class="align-text-top noRightClick twitterSection" data="
Captain Harmanpreet Kaur does the trick & how! 👌 👌
She strikes in her first over! 🙌 🙌
Australia lose Tahlia McGrath for 73.
Follow the Match ▶️ https://t.co/8qTsM8XSpd #TeamIndia | #INDvAUS | @ImHarmanpreet | @IDFCFIRSTBank pic.twitter.com/tFMUnlPfJ8
">... and there we go! 👏 👏
— BCCI Women (@BCCIWomen) December 23, 2023
Captain Harmanpreet Kaur does the trick & how! 👌 👌
She strikes in her first over! 🙌 🙌
Australia lose Tahlia McGrath for 73.
Follow the Match ▶️ https://t.co/8qTsM8XSpd #TeamIndia | #INDvAUS | @ImHarmanpreet | @IDFCFIRSTBank pic.twitter.com/tFMUnlPfJ8... and there we go! 👏 👏
— BCCI Women (@BCCIWomen) December 23, 2023
Captain Harmanpreet Kaur does the trick & how! 👌 👌
She strikes in her first over! 🙌 🙌
Australia lose Tahlia McGrath for 73.
Follow the Match ▶️ https://t.co/8qTsM8XSpd #TeamIndia | #INDvAUS | @ImHarmanpreet | @IDFCFIRSTBank pic.twitter.com/tFMUnlPfJ8
ಎಲ್ಲಿಸ್ ಪೆರ್ರಿ ಮತ್ತು ತಹ್ಲಿಯಾ ಮೆಕ್‌ಗ್ರಾತ್ 3ನೇ ವಿಕೆಟ್ಗೆ 50ಕ್ಕೂ ಹೆಚ್ಚು ರನ್ಗಳ ಪಾಲುದಾರಿಗೆ ಮಾಡಿದರು. ಈ ಇಬ್ಬರ ಜೊತೆಯಾಟಕ್ಕೆ ಬ್ರೇಕ್ ಹಾಕಿದ್ದು ಸ್ನೇಹ ರಾಣಾ. 45 ರನ್ ಗಳಿಸಿ ಅರ್ಧಶತಕದತ್ತ ಹೊರಳುತ್ತಿದ್ದ ಪೆರ್ರಿ ಕ್ಯಾಚ್ಕೊಟ್ಟು ಔಟ್ ಆದರು. ನಂತರ ಮೆಕ್‌ಗ್ರಾತ್ ಜೊತೆಗೆ ನಾಯಕಿ ಅಲಿಸ್ಸಾ ಹೀಲಿ ಜೊತೆಯಾಟ ಆಡಿದರು. ಜೋಡಿ ತಂಡಕ್ಕೆ ಮುನ್ನಡೆಯ ರನ್ ಗಳಿಸಿಕೊಟ್ಟಿತು. 177 ಬಾಲ್ ಎದುರಿಸಿದ ತಹ್ಲಿಯಾ ಮೆಕ್‌ಗ್ರಾತ್ 73 ರನ್ ಗಳಿಸಿ ಔಟ್ ಆದರೂ ಅವರ ಬೆನ್ನಲ್ಲೇ ಅಲಿಸ್ಸಾ ಹೀಲಿ (32) ಕೂಡಾ ಪೆವಿಲಿಯನ್ ಹಾದಿ ಹಿಡಿದರು.
ಗೆಲುವಿನ ಅವಕಾಶ: ಐದು ವಿಕೆಟ್ ಕಳೆದುಕೊಂಡಿರುವ ಆಸ್ಟ್ರೇಲಿಯಾ ನಾಳೆ ಆಲ್ಔಟ್ ಆಗುವ ಮುನ್ನ 150+ ರನ್ ಗಳಿಸುವ ಗುರಿಯಲ್ಲಿ ಮೈದಾನಕ್ಕಿಳಿಯಲಿದೆ. ಭಾರತ 100ರ ಒಳಗೆ ಆಸೀಸ್ ಪಡೆಯನ್ನು ಕಟ್ಟಿಹಾಕುವ ರಣ ತಂತ್ರ ರೂಪಿಸಲಿದೆ. ಉಭಯ ತಂಡಕ್ಕೂ ಗೆಲುವಿನ ಅವಕಾಶ ಇದೆ.
ಇದನ್ನೂ ಓದಿ: ಗಾಯದಿಂದ ಚೇತರಿಸಿಕೊಳ್ಳದ ಸೂರ್ಯ: ಆಫ್ಘನ್ ಸರಣಿಯಲ್ಲಿ 'ಸ್ಕೈ' ಆಡುವುದು ಅನುಮಾನ