ETV Bharat / sports

ಹಾರ್ದಿಕ್​ಗೆ ಟಿ20 ನಾಯಕತ್ವ ಮುಂದುವರಿಕೆ: ನ್ಯೂಜಿಲ್ಯಾಂಡ್​ - ಆಸ್ಟ್ರೇಲಿಯಾ ವಿರುದ್ಧದ ಪಂದ್ಯಕ್ಕೆ ಟೀಮ್ ಇಂಡಿಯಾ​ ಪ್ರಕಟ

ನ್ಯೂಜಿಲ್ಯಾಂಡ್​​ ಮತ್ತು ಆಸ್ಟ್ರೇಲಿಯಾ ವಿರುದ್ಧದ ಪಂದ್ಯಕ್ಕೆ ಟೀಮ್​ ಪ್ರಕಟ - ರಾಹುಲ್​ ಮತ್ತು ಅಕ್ಷರ್​ ಪಟೇಲ್​ ಟಿ20 ತಂಡದಿಂದ ವೈಯುಕ್ತಿಕ ಕಾರಣಕ್ಕೆ ಹೊರಗುಳಿದಿದ್ದಾರೆ.

author img

By

Published : Jan 13, 2023, 10:59 PM IST

indias squad for tests vs austrailia
ಹಾರ್ದಿಕ್​ಗೆ ಟಿ20 ನಾಯಕತ್ವ ಮುಂದುವರಿಕೆ:

ಮುಂಬೈ: 18ರಿಂದ ಆರಂಭವಾಗಲಿರುವ ನ್ಯೂಜಿಲ್ಯಾಂಡ್​ ವಿರುದ್ಧದ ಏಕದಿನ, ಟಿ 20 ಸರಣಿ ಮತ್ತು ಆಸ್ಟ್ರೇಲಿಯಾದ ಮೇಲೆ ಆಡಲಿರುವ ಬಾರ್ಡರ್​ ಗವಾಸ್ಕರ್​ ಟ್ರೋಫಿಯ ಎರಡು ಪಂದ್ಯಗಳಿಗೆ ಬಿಸಿಸಿಐ ತಂಡವನ್ನು ಪ್ರಕಟಿಸಿದೆ. ನ್ಯೂಜಿಲ್ಯಾಂಡ್​​ ವಿರುದ್ಧದ ಟಿ20 ಪಂದ್ಯಕ್ಕೆ ಹಾರ್ದಿಕ್​ ಪಾಂಡ್ಯಗೆ ನಾಯಕತ್ವ ಮುಂದುವರೆದಿದೆ. ಲಂಕಾ ಎದುರು ಯಶಸ್ವಿಯಾಗಿ ಚುಟುಕು ಕ್ರಿಕೆಟ್​ ಉತ್ತಮವಾಗಿ ಹಾರ್ದಿಕ್​ ಮುನ್ನಡೆಸಿದ್ದು, ಹೆಚ್ಚು ಕಮ್ಮಿ ಅದೇ ತಂಡವನ್ನೇ ನ್ಯೂಜಿಲ್ಯಾಂಡ್​ ವಿರುದ್ಧವೂ ಆಡಿಸಲಾಗುತ್ತಿದೆ.

ನ್ಯೂಜಿಲ್ಯಾಂಡ್ ವಿರುದ್ಧದ ಪಂದ್ಯದಿಂದ ಕೆಎಲ್​ ರಾಹುಲ್​ ಮತ್ತು ಅಕ್ಷರ್​ ಪಟೇಲ್​ ಹೊರಗುಳಿದಿದ್ದಾರೆ. ರಾಹುಲ್​ಗೆ ಮತ್ತು ಅಕ್ಷರ್ ಕೌಟುಂಬಿಕ ಹಿನ್ನೆಲೆಯಿಂದಾಗಿ ಪಂದ್ಯದಿಂದ ಹೊರಗುಳಿದಿದ್ದಾರೆ ಎಂದು ಬಿಸಿಐ ತಿಳಿಸಿದೆ. ರಾಹುಲ್​ ಮತ್ತು ಅಥಿಯಾ ಶೆಟ್ಟಿ ವಿವಾಹ ಇದೇ 21 ರಿಂದ 23ರ ವರೆಗೆ ನಡೆಯಲಿದೆ ಎನ್ನಲಾಗಿದೆ. ಈ ಟೂರ್ನಿಯಿಂದ ರಾಹುಲ್​ ಹೊರಗುಳಿದಿರುವುದು ಇದೇ ಕಾರಣಕ್ಕೆ ಎಂದು ಹೇಳಲಾಗುತ್ತಿದೆ. ಅಕ್ಷರ್​ ಮತ್ತು ರಾಹುಲ್​ ಬದಲಿಗೆ ತಂಡದಲ್ಲಿ ರಣಜಿಯಲ್ಲಿ 379 ರನ್ ದಾಖಲಿಸಿದ ​ಪೃಥ್ವಿ ಶಾಗೆ ಅವಕಾಶ ಸಿಕ್ಕಿದೆ. ಹಾಗೇ ಮುಖೇಶ್ ಕುಮಾರ್ ಮತ್ತು ಜಿತೇಶ್ ಶರ್ಮಾ ತಂಡಕ್ಕೆ ಪದಾರ್ಪಣೆ ಆಗಲಿದ್ದಾರೆ.

ಆಸ್ಟ್ರೇಲೀಯಾ ಎದುರಿನ ಬಾರ್ಡರ್​ ಗವಾಸ್ಕರ್​ ಟ್ರೋಪೀಗೂ ತಂಡ ಪ್ರಕಟಿಸಲಾಗಿದೆ. ಆದರೆ ಕೇವಲ ಎರಡು ಪಂದ್ಯಗಳಿಗೆ ತಂಡಗಳನ್ನು ಘೋಷಿಸಿದ್ದಾರೆ. ಫೆಬ್ರುವರಿ 9ರಿಂದ ಪಂದ್ಯಗಳು ಆರಂಭವಾಗಲಿದೆ. ರವೀಂದ್ರ ಜಡೇಜಾ ಅವರು ಫಿಟ್​ ಆದಲ್ಲಿ ಅವರನ್ನು ಆಸ್ಟ್ರೇಲಿಯಾ ಎದುರಿನ ಟೆಸ್ಟ್​ಗೆ ಆಡಿಸಲಾಗುವುದು ಎಂದು ತಿಳಿಸಿದ್ದಾರೆ.

ನ್ಯೂಜಿಲ್ಯಾಂಡ್ ವಿರುದ್ಧದ ಟಿ20ಗೆ ಭಾರತ ತಂಡ: ಹಾರ್ದಿಕ್ ಪಾಂಡ್ಯ (ನಾಯಕ), ಸೂರ್ಯಕುಮಾರ್ ಯಾದವ್ (ಉಪನಾಯಕ), ಇಶಾನ್ ಕಿಶನ್ (ವಿಕೆಟ್​ ಕಿಪರ್​), ಆರ್ ಗಾಯಕ್ವಾಡ್, ಶುಭಮನ್ ಗಿಲ್, ದೀಪಕ್ ಹೂಡಾ, ರಾಹುಲ್ ತ್ರಿಪಾಠಿ, ಜಿತೇಶ್ ಶರ್ಮಾ (ವಿಕೆಟ್​ ಕಿಪರ್​), ವಾಷಿಂಗ್ಟನ್ ಸುಂದರ್, ಕುಲದೀಪ್ ಯಾದವ್, ವೈ ಚಾಹಲ್, ಅರ್ಶ್ದೀಪ್ ಸಿಂಗ್, ಉಮ್ರಾನ್ ಮಲಿಕ್ , ಶಿವಂ ಮಾವಿ, ಪೃಥ್ವಿ ಶಾ, ಮುಖೇಶ್ ಕುಮಾರ್

ನ್ಯೂಜಿಲ್ಯಾಂಡ್​ ವಿರುದ್ಧದ ಏಕದಿನ ಸರಣಿಗೆ ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ಇಶಾನ್ ಕಿಶನ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಸೂರ್ಯಕುಮಾರ್ ಯಾದವ್, ಕೆಎಸ್ ಭರತ್ (ಉಪನಾಯಕ), ಹಾರ್ದಿಕ್ ಪಾಂಡ್ಯ (ವಿಕೆಟ್​ ಕಿಪರ್), ವಾಷಿಂಗ್ಟನ್ ಸುಂದರ್, ಶಹಬಾಜ್ ಅಹ್ಮದ್, ಶಾರ್ದೂಲ್ ಠಾಕೂರ್, ಯುಜ್ವೇಂದ್ರ ಚಾಹಲ್, ಕುಲದೀಪ್ ಯಾದವ್, ಮೊಹಮ್ಮದ್. ಶಮಿ, ಮೊಹಮ್ಮದ್ ಸಿರಾಜ್, ಉಮ್ರಾನ್ ಮಲಿಕ್

ಬಾರ್ಡರ್​ ಗವಾಸ್ಕರ್​ ಟ್ರೋಫಿಯ ಎರಡು ಪಂದ್ಯಕ್ಕೆ ತಂಡ ಪ್ರಕಟ: ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್ (ಉಪನಾಯಕ), ಶುಭಮನ್ ಗಿಲ್, ಚೇತೇಶ್ವ ಪೂಜಾರ, ವಿರಾಟ್​ ಕೊಹ್ಲಿ, ಎಸ್ ಅಯ್ಯರ್, ಕೆಎಸ್ ಭರತ್ (ವಿಕೆಟ್​ ಕಿಪರ್), ಇಶಾನ್ ಕಿಶನ್ (ವಿಕೆಟ್​ ಕಿಪರ್), ಆರ್ ಅಶ್ವಿನ್, ಅಕ್ಷರ್ ಪಟೇಲ್, ಕುಲದೀಪ್ ಯಾದವ್, ರವೀಂದ್ರ ಜಡೇಜಾ, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಉಮೇಶ್ ಯಾದವ್, ಜಯದೇವ್ ಉನದ್ಕಟ್, ಸೂರ್ಯಕುಮಾರ್ ಯಾದವ್

ಇದನ್ನೂ ಓದಿ: ಅನಾರೋಗ್ಯದ ಕಾರಣ ಬೆಂಗಳೂರಿಗೆ ಮರಳಿದ ದ್ರಾವಿಡ್​: ಮೂರನೇ ಏಕ ದಿನಕ್ಕೆ ಕೋಚ್​ ಯಾರು?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.