ETV Bharat / sports

ಕ್ರಿಕೆಟ್​ಗೆ ಭಾರತದ ಅಗತ್ಯವಿದೆ, ಅವರ ಪ್ರದರ್ಶನದಿಂದಲೇ ಟೆಸ್ಟ್​ ಇನ್ನೂ ಜೀವಂತವಾಗಿದೆ : ರಿಚರ್ಡ್​ ಹ್ಯಾಡ್ಲಿ - ಕ್ರಿಕೆಟ್​ಗೆ ಭಾರತದ ಅಗತ್ಯವಿದೆ

ಟೆಸ್ಟ್‌ ಕ್ರಿಕೆಟ್‌ಗೆ ಭಾರತದ ಕೊಡುಗೆ ಅಪಾರ. ಆಸ್ಟ್ರೇಲಿಯಾ ಪ್ರವಾಸದಲ್ಲಿ ಮೊದಲ ಟೆಸ್ಟ್‌ನಲ್ಲಿ 36 ರನ್​ಗಳಿಗೆ ಆಲೌಟ್ ಆಗಿ ಅತ್ಯಂತ ಹೀನಾಯವಾಗಿ ಸೋಲು ಕಂಡಿದೆ. ಆದರೂ, ಉತ್ಸಾಹದಿಂದ ಪುಟಿದೆದ್ದು ಐತಿಹಾಸಿಕ ಟೆಸ್ಟ್‌ ಸರಣಿ ಗೆದ್ದಿದೆ. ನಿಜಕ್ಕೂ ಅದ್ಭುತ. ಅಲ್ಲಿ ಟೆಸ್ಟ್​ ಕ್ರಿಕೆಟ್​ಗೆ​ ಮತ್ತೆ ಜೀವ ಬಂದಿತ್ತು. ಅದರಲ್ಲೂ ತಂಡಕ್ಕೆ ಕೆಲವು ಯುವ ಆಟಗಾರರು ಸೇರಿಕೊಂಡರು ಮತ್ತು ಅದ್ಭುತ ಪ್ರದರ್ಶನ ತೋರಿದರು..

ರಿಚರ್ಡ್​ ಹ್ಯಾಡ್ಲೀ
ರಿಚರ್ಡ್​ ಹ್ಯಾಡ್ಲೀ
author img

By

Published : May 25, 2021, 4:31 PM IST

ಆಕ್ಲೆಂಡ್ ​: ಕ್ರಿಕೆಟ್​ಗೆ ಭಾರತದ ಅಗತ್ಯವಿದೆ, ಭಾರತದಿಂದಲೇ ವಿಶ್ವದಲ್ಲಿ ಕ್ರಿಕೆಟ್​ ಆದಾಯ ಕಾಣುವಂತಾಗಿದೆ ಎಂದು ನ್ಯೂಜಿಲ್ಯಾಂಡ್​ ಕಂಡಂತಹ ಶ್ರೇಷ್ಟ ಕ್ರಿಕೆಟಿಗರ ರಿಚರ್ಡ್​ ಹ್ಯಾಡ್ಲಿ ಐಸಿಸಿ ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಭಾರತ ಇಲ್ಲದಿದ್ದರೆ ವಿಶ್ವಕ್ರಿಕೆಟ್​ ವಿಭಿನ್ನವಾಗಿರುತ್ತಿತ್ತು. ಭಾರತ ಕ್ರಿಕೆಟ್​ನಲ್ಲಿ ಸಾಕಷ್ಟು ಆದಾಯ ಉಂಟು ಮಾಡುತ್ತಿದೆ. ವಿಶೇಷವಾಗಿ ಟೆಲಿವಿಸನ್​ ರೈಟ್ಸ್​ಮ ಸ್ಪಾನ್ಸರ್​ಷಿಪ್​, ಜಾಹೀರಾತು, ಐಪಿಎಲ್​ನಂತಹ ಲೀಗ್ ಆಯೋಜಿಸುವ ಮೂಲಕ ಪ್ರೇಕ್ಷಕರನ್ನು ಆಕರ್ಷಿಸುತ್ತಿದೆ.

ಇನ್ನು, ವಿವಿಧ ರೀತಿಯಲ್ಲಿ ಭಾರತ ಕ್ರಿಕೆಟ್​ಗೆ ನೆರವಾಗುತ್ತಿದೆ. ಭಾರತವಿಲ್ಲದೆ, ವಿಶ್ವ ಕ್ರಿಕೆಟ್​ನ ಮುಖ ಬೇರೆ ರೀತಿಯೇ ಇರುತ್ತಿತ್ತು, ಹಾಗಾಗಿ, ಕ್ರಿಕೆಟ್​ಗೆ ಭಾರತದ ಅಗತ್ಯ ಖಂಡಿತಾ ಇದೆ ಎಂದು 70ರ ದಶಕದ ಶ್ರೇಷ್ಠ ಆಟಗಾರ ತಿಳಿಸಿದ್ದಾರೆ.

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನಂತಹ ಹಣ ಸಂಪಾದಿಸುವ ದೊಡ್ಡ ಲೀಗ್​ ಇದ್ದರೂ, ಟೆಸ್ಟ್ ಕ್ರಿಕೆಟ್‌ನತ್ತ ಭಾರತದ ಕೊಡುಗೆ ಬಗ್ಗೆ ಕೇಳಿದಾಗ, "ಟೆಸ್ಟ್ ಕ್ರಿಕೆಟ್‌ಗೆ ಭಾರತವು ಅತ್ಯುತ್ತಮ ಕೊಡುಗೆ ನೀಡಿದೆ, ವಾಸ್ತವವಾಗಿ, ಆಟದ ಎಲ್ಲಾ ಸ್ವರೂಪಗಳಲ್ಲೂ ಅದರ ಕೊಡುಗೆ ಅಪಾರ " ಎಂದು ಹ್ಯಾಡ್ಲಿ ಹೇಳಿದರು.

"ಟೆಸ್ಟ್‌ ಕ್ರಿಕೆಟ್‌ಗೆ ಭಾರತದ ಕೊಡುಗೆ ಅಪಾರ. ಆಸ್ಟ್ರೇಲಿಯಾ ಪ್ರವಾಸದಲ್ಲಿ ಮೊದಲ ಟೆಸ್ಟ್‌ನಲ್ಲಿ 36 ರನ್​ಗಳಿಗೆ ಆಲೌಟ್ ಆಗಿ ಅತ್ಯಂತ ಹೀನಾಯವಾಗಿ ಸೋಲು ಕಂಡಿದೆ. ಆದರೂ, ಉತ್ಸಾಹದಿಂದ ಪುಟಿದೆದ್ದು ಐತಿಹಾಸಿಕ ಟೆಸ್ಟ್‌ ಸರಣಿ ಗೆದ್ದಿದೆ.

ನಿಜಕ್ಕೂ ಅದ್ಭುತ. ಅಲ್ಲಿ ಟೆಸ್ಟ್​ ಕ್ರಿಕೆಟ್​ಗೆ​ ಮತ್ತೆ ಜೀವ ಬಂದಿತ್ತು. ಅದರಲ್ಲೂ ತಂಡಕ್ಕೆ ಕೆಲವು ಯುವ ಆಟಗಾರರು ಸೇರಿಕೊಂಡರು ಮತ್ತು ಅದ್ಭುತ ಪ್ರದರ್ಶನ ತೋರಿದರು" ಎಂದು ಭಾರತ ತಂಡವನ್ನು ಗುಣಗಾನ ಮಾಡಿದ್ದಾರೆ.

ಇದನ್ನು ಓದಿ:ಇಂಗ್ಲೆಂಡ್ ಪ್ರವಾಸ: ಭಾರತದ ಮಹಿಳಾ-ಪುರುಷ ತಂಡಗಳಿಗೆ ಕಠಿಣ ಕ್ವಾರಂಟೈನ್​​​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.