ಬೆಂಗಳೂರು: ರಿಷಭ್ ಪಂತ್ ಅವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಭಾರತ ತಂಡವು ಶ್ರೀಲಂಕಾ ವಿರುದ್ಧದ 2ನೇ ಟೆಸ್ಟ್ ಪಂದ್ಯದಲ್ಲಿ ಭೋಜನ ವಿರಾಮದ ವೇಳೆಗೆ 5 ವಿಕೆಟ್ ಕಳೆದುಕೊಂಡು 199ರನ್ಗಳಿಸಿ 342 ರನ್ಗಳ ಮುನ್ನಡೆ ಸಾಧಿಸಿದೆ. ಶನಿವಾರ 6 ವಿಕೆಟ್ ಕಳೆದುಕೊಂಡು 86ರನ್ಗಳಿಸಿದ್ದ ಶ್ರೀಲಂಕಾ ಇಂದು ಆ ಮೊತ್ತವನ್ನು 109ಕ್ಕೇರಿಸುವಷ್ಟರಲ್ಲಿ ತನ್ನೆಲ್ಲಾ ವಿಕೆಟ್ ಕಳೆದುಕೊಂಡು 143 ರನ್ಗಳ ಹಿನ್ನಡೆ ಅನುಭವಿಸಿತು.
ಎರಡನೇ ಇನ್ನಿಂಗ್ಸ್ ಆರಂಭಿಸಿದ ಭಾರತ ತಂಡ ಮೊದಲ ವಿಕೆಟ್ಗೆ 42 ರನ್ ಸೇರಿಸುವಷ್ಟರಲ್ಲಿ ಆರಂಭಿಕ ಮಯಾಂಕ್ ಅಗರ್ವಾಲ್(22) ವಿಕೆಟ್ ಕಳೆದುಕೊಂಡಿತು. ನಂತರ ಬಂದ ವಿಹಾರಿ 2ನೇ ವಿಕೆಟ್ಗೆ ರೋಹಿತ್ ಶರ್ಮಾ(46) ಜೊತೆಗೆ 56 ರನ್ ಸೇರಿಸಿದರು. 79 ಎಸೆತಗಳನ್ನು ಎದುರಿಸಿದ ರೋಹಿತ್ 46 ರನ್ಗಳಿಸಿ ಧನಂಜಯ ಡಿ ಸಿಲ್ವಾಗೆ ವಿಕೆಟ್ ಒಪ್ಪಿಸಿದರು. ಇದರ ಬೆನ್ನಲ್ಲೇ 35 ರನ್ಗಳಿಸಿದ್ದ ವಿಹಾರಿ ಮತ್ತು 13 ರನ್ಗಳಿಸಿದ್ದ ಕೊಹ್ಲಿ ಅವರನ್ನು ಸ್ಪಿನ್ನರ್ ಪ್ರವೀಣ್ ಜಯವಿಕ್ರಮ ಪೆವಿಲಿಯನ್ಗಟ್ಟುವಲ್ಲಿ ಯಶಸ್ವಿಯಾದರು.
-
That's the Dinner break on Day 2 of the 2nd Test.#TeamIndia have a huge lead of 342 runs.
— BCCI (@BCCI) March 13, 2022 " class="align-text-top noRightClick twitterSection" data="
Scorecard - https://t.co/loTQPg3SYl #INDvSL @Paytm pic.twitter.com/c1p1JQ7bwy
">That's the Dinner break on Day 2 of the 2nd Test.#TeamIndia have a huge lead of 342 runs.
— BCCI (@BCCI) March 13, 2022
Scorecard - https://t.co/loTQPg3SYl #INDvSL @Paytm pic.twitter.com/c1p1JQ7bwyThat's the Dinner break on Day 2 of the 2nd Test.#TeamIndia have a huge lead of 342 runs.
— BCCI (@BCCI) March 13, 2022
Scorecard - https://t.co/loTQPg3SYl #INDvSL @Paytm pic.twitter.com/c1p1JQ7bwy
ಆದರೆ ಸ್ಫೋಟಕ ಬ್ಯಾಟಿಂಗ್ ಮಾಡಿದ ವಿಕೆಟ್ ಕೀಪರ್ ರಿಷಭ್ ಪಂತ್ 28 ಎಸೆತಗಳಲ್ಲಿ ದಾಖಲೆಯ ಅರ್ಧಶತಕ ಸಿಡಿಸಿದರು. ಆದರೆ ತಮಗೆ ಸಿಕ್ಕ ಆರಂಭವನ್ನು ಮೂರಂಕಿಯಾಗಿ ಪರಿವರ್ತಿಸಲು ವಿಫಲರಾದರು.
ಭೋಜನ ವಿರಾಮಕ್ಕೆ ಭಾರತ 47 ಓವರ್ಗಳಲ್ಲಿ 199 ರನ್ಗಳಿಸಿದ್ದು, ಶ್ರೇಯಸ್ ಅಯ್ಯರ್ 18 ಮತ್ತು ಜಡೇಜಾ 10 ರನ್ಗಳಿಸಿ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.
ಇದನ್ನೂ ಓದಿ:ಗ್ರೇಮ್ ಸ್ಮಿತ್, ಧೋನಿ ನಾಯಕತ್ವದಲ್ಲಿ ಆಡಿರುವುದಕ್ಕೆ ನಾನು ಅದೃಷ್ಟವಂತ: ಫಾಫ್ ಡು ಪ್ಲೆಸಿಸ್