ಲೀಡ್ಸ್: ಇಂಗ್ಲೆಂಡ್ ವಿರುದ್ಧ 3ನೇ ಟೆಸ್ಟ್ನಲ್ಲಿ ಭಾರತ ತಂಡ ಇನ್ನಿಂಗ್ಸ್ ಮತ್ತು 76 ರನ್ಗಳ ಅಂತರದಿಂದ ಸೋಲು ಕಂಡಿದ್ದು, 5 ಪಂದ್ಯಗಳ ಸರಣಿಯಲ್ಲಿ ಎರಡು ತಂಡಗಳು 1-1ರಲ್ಲಿ ಸಮಬಲ ಸಾಧಿಸಿವೆ.
3ನೇ ದಿನ ಅದ್ಭುತ ಬ್ಯಾಟಿಂಗ್ ಪ್ರದರ್ಶನ ತೋರಿದ್ದ ಭಾರತ 2 ವಿಕೆಟ್ ಕಳೆದುಕೊಂಡು 215ರನ್ಗಳಿಸಿತ್ತು. ಆದರೆ 4ನೇ ದಿನ ಮೊದಲ ಸೆಷನ್ನಲ್ಲೆ ರಾಬಿನ್ಸನ್ ದಾಳಿಗೆ ತತ್ತರಿಸಿ ನಿನ್ನೆಯ ಮೊತ್ತಕ್ಕೆ ಕೇವಲ 63 ರನ್ ಸೇರಿಸಿ 99.3 ಓವರ್ಗಳಲ್ಲಿ 278ಕ್ಕೆ ಆಲೌಟ್ ಆಗುವ ಮೂಲಕ ಇನ್ನಿಂಗ್ಸ್ ಹಾಗೂ 76 ರನ್ಗಳ ಹೀನಾಯ ಸೋಲು ಕಂಡಿತು.
ಶುಕ್ರವಾರ 3ನೇ ದಿನದಂತ್ಯಕ್ಕೆ 180 ಎಸೆತಗಳಲ್ಲಿ ಅಜೆಯ 91 ರನ್ಗಳಿಸಿದ್ದ ಚೇತೇಶ್ವರ್ ಪೂಜಾರ ಇಂದು ಕೇವಲ 9 ಎಸೆತಗಳನ್ನೆದುರಿಸಿ ಅದೇ ಮೊತ್ತಕ್ಕೆ ಔಟಾದರು. ಇವರ ಬೆನ್ನಲ್ಲೇ ನಿನ್ನೆ 45 ರನ್ಗಳಿಸಿದ್ದ ಕೊಹ್ಲಿ ಇಂದು ಆ ಮೊತ್ತವನ್ನು 55ಕ್ಕೇರಿಸಿಕೊಂಡು ನಿರ್ಗಮಿಸಿದರು. ಇವರಿಬ್ಬರು ರಾಬಿನ್ಸನ್ಗೆ ವಿಕೆಟ್ ಒಪ್ಪಿಸಿದರು.
ಇನ್ನು ಉಪನಾಯಕ ಅಜಿಂಕ್ಯ ರಹಾನೆ (10) ಜೇಮ್ಸ್ ಆ್ಯಂಡರ್ಸನ್ ಬೌಲಿಂಗ್ನಲ್ಲಿ ಕೀಪರ್ ಬಟ್ಲರ್ಗೆ ಕ್ಯಾಚ್ ನೀಡಿ ಔಟಾದರೆ, ರಿಷಭ್ ಪಂತ್ ಕೇವಲ 1ರನ್ಗಳಿಸಿ ರಾಬಿನ್ಸನ್ಗೆ 4ನೇ ಬಲಿಯಾದರು.
-
India lose eight wickets on the morning of day four to set up an England victory by an innings and 76 runs!#WTC23 | #ENGvIND | https://t.co/qmnhRc14r1 pic.twitter.com/8sEWj8z1ZW
— ICC (@ICC) August 28, 2021 " class="align-text-top noRightClick twitterSection" data="
">India lose eight wickets on the morning of day four to set up an England victory by an innings and 76 runs!#WTC23 | #ENGvIND | https://t.co/qmnhRc14r1 pic.twitter.com/8sEWj8z1ZW
— ICC (@ICC) August 28, 2021India lose eight wickets on the morning of day four to set up an England victory by an innings and 76 runs!#WTC23 | #ENGvIND | https://t.co/qmnhRc14r1 pic.twitter.com/8sEWj8z1ZW
— ICC (@ICC) August 28, 2021
ಆದರೆ ರವೀಂದ್ರ ಜಡೇಜಾ 25 ಎಸೆತಗಳಲ್ಲಿ 5 ಬೌಂಡರಿ ಮತ್ತು 1 ಸಿಕ್ಸರ್ ಸಹಿತ 30 ರನ್ಗಳಿಸಿ ಸೋಲನ್ನು ಸ್ವಲ್ಪ ಸಮಯ ಮುಂದೂಡಿದರು. ಆದರೆ ಇನ್ನಿಂಗ್ಸ್ ಸೋಲು ತಪ್ಪಿಸಲಾಗಲಿಲ್ಲ. ಉಳಿದಂತೆ ಶಮಿ 6, ಇಶಾಂತ್ ಶರ್ಮಾ 2, ಸಿರಾಜ್ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದರು.
ಇಂಗ್ಲೆಂಡ್ ಪರ ಮಾರಕ ಬೌಲಿಂಗ್ ದಾಳಿ ನಡೆಸಿದ ಒಲ್ಲಿ ರಾಬಿನ್ಸನ್ 65ಕ್ಕೆ 5, ಕ್ರೈಗ್ ಓವರ್ಟನ್ 47ಕ್ಕೆ 3, ಮೊಯೀನ್ ಅಲಿ ಮತ್ತು ಆ್ಯಂಡರ್ಸನ್ ತಲಾ ಒಂದು ವಿಕೆಟ್ ಪಡೆದು ಭಾರತವನ್ನು ಅಂದು ಕೊಂಡಿದ್ದ ಸಮಯಕ್ಕಿಂತಲೂ ವೇಗವಾಗಿ ಆಲೌಟ್ ಮಾಡಿ ಸರಣಿಯನ್ನು 1-1ರಲ್ಲಿ ಸಮಬಲ ಸಾಧಿಸಲು ನೆರವಾದರು.
ಭಾರತ ಮತ್ತು ಇಂಗ್ಲೆಂಡ್ ನಡುವಿನ 4ನೇ ಟೆಸ್ಟ್ ಲಂಡನ್ ಕೆನ್ನಿಂಗ್ಟನ್ ಓವಲ್ನಲ್ಲಿ ಸೆಪ್ಟೆಂಬರ್ 2ರಿಂದ ಆರಂಭವಾಗಲಿದೆ.
ಸಂಕ್ಷಿಪ್ತ ಸ್ಕೋರ್: ಭಾರತ 78 ಆಲೌಟ್ ಮತ್ತು 278 ಆಲೌಟ್( ಚೇತೇಶ್ವರ್ ಪೂಜಾರ 91,ಕೊಹ್ಲಿ 55, ರೋಹಿತ್ ಶರ್ಮಾ 59, ಒಲ್ಲಿ ರಾಬಿನ್ಸನ್ 65ಕ್ಕೆ 5)
ಇಂಗ್ಲೆಂಡ್ ಮೊದಲ ಇನ್ನಿಂಗ್ಸ್: 432 ಕ್ಕೆ ಆಲೌಟ್( ಜೋ ರೂಟ್ 121, ಡೇವಿಡ್ ಮಲನ್ 70, ಹಮೀದ್ 68, ಮೊಹಮ್ಮದ್ ಶಮಿ 95ಕ್ಕೆ4 )