ಬ್ರಿಸ್ಟೋಲ್: ಭಾರತ ಮಹಿಳಾ ತಂಡ 7 ವರ್ಷಗಳ ಕಾಯುವಿಕೆಯ ನಂತರ ಮತ್ತೆ ಟೆಸ್ಟ್ ಕ್ರಿಕೆಟ್ಗೆ ಮರಳಲಿದೆ. ಬುಧವಾರದಿಂದ ಬ್ರಿಸ್ಟೋಲ್ನಲ್ಲಿ ಅತಿಥೇಯ ಇಂಗ್ಲೆಂಡ್ ವನಿತೆಯರ ವಿರುದ್ಧ ಏಕೈಕ ಟೆಸ್ಟ್ ಪಂದ್ಯಕ್ಕೆ ಚಾಲನೆ ದೊರೆಯಲಿದೆ. ಭಾರತ ತಂಡ 2014ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ದ ತನ್ನ ಕೊನೆಯ ಟೆಸ್ಟ್ ಪಂದ್ಯವನ್ನಾಡಿತ್ತು.
ಇಂಗ್ಲೆಂಡ್ನಲ್ಲಿ ಟೆಸ್ಟ್ ಗೆದ್ದಿರುವ ದಾಖಲೆಯೊಂದಿಗೆ ಭಾರತದ ಮಹಿಳೆಯರು 7 ವರ್ಷಗಳ ಬಳಿಕ ಬಿಳಿ ಜರ್ಸಿಯಲ್ಲಿ ಆಡಲಿದ್ದಾರೆ. ಮಿಥಾಲಿ ರಾಜ್ ಮತ್ತು ಜೂಲನ್ ಗೋಸ್ವಾಮಿ ತಲಾ 10 ಟೆಸ್ಟ್ ಪಂದ್ಯಗಳನ್ನಾಡಿರುವ ಅನುಭವ ಹೊಂದಿದ್ದಾರೆ. ಕೆಲವೊಬ್ಬರು ಒಂದು ಅಥವಾ ಎರಡು ಪಂದ್ಯಗಳನ್ನಾಡಿದ್ದರೆ, ಅರ್ಧಕ್ಕೂ ಹೆಚ್ಚು ಆಟಗಾರ್ತಿಯರು ರೆಡ್ ಬಾಲ್ ಪಂದ್ಯಗಳಿಗೆ ಪದಾರ್ಪಣೆ ಮಾಡಬೇಕಿದೆ.
ಭಾರತ ಮತ್ತು ಇಂಗ್ಲೆಂಡ್ನಲ್ಲಿ ಸತತ ಕ್ವಾರಂಟೈನ್ ಮುಗಿಸಿ ಕೇವಲ ಒಂದು ವಾರ ಅಭ್ಯಾಸ ಮಾಡಿದೆ. ಭಾರತ ತಂಡ ಮೈಸೂರಿನಲ್ಲಿ ಕೊನೆಯ ಬಾರಿ ದಕ್ಷಿಣ ಆಫ್ರಿಕಾ ವಿರುದ್ಧ ಟೆಸ್ಟ್ ಪಂದ್ಯವನ್ನಾಡಿತ್ತು. ಇನ್ನು ದೇಶಿ ಕ್ರಿಕೆಟ್ನಲ್ಲೂ ರೆಡ್ ಬಾಲ್ನಲ್ಲಿ ಆಡದವರು ಬುಧವಾರ ಅದೃಷ್ಟ ಪರೀಕ್ಷೆಗೆ ಇಳಿಯಲಿದ್ದಾರೆ.
ಈಗಾಗಲೇ ಟೀಮ್ ಇಂಡಿಯಾ ಉಪನಾಯಕಿ ಹರ್ಮನ್ ಪ್ರೀತ್ ಕೌರ್, ನಾವು ಹೆಚ್ಚೇನು ತಯಾರಿ ನಡೆಸಿಲ್ಲ, ಕೇವಲ ಮಾನಸಿಕವಾಗಿ ಸಿದ್ಧರಾಗಿದ್ದೇವೆ. ಪುರುಷರ ತಂಡದ ಉಪನಾಯಕ ಅಜಿಂಕ್ಯ ರಹಾನೆ ಅವರಿಂದ ಕೆಲವೊಂದು ಮೌಲ್ಯಯುತ ಸಲಹೆ ಪಡೆದುಕೊಂಡಿದ್ದೇವೆ ಎಂದು ತಿಳಿಸಿದ್ದಾರೆ.
ಇದನ್ನು ಓದಿ:ಬ್ಯಾಟಿಂಗ್ ಸಲಹೆಗೆ ರಹಾನೆ ಮೊರೆ ಹೋದ ಭಾರತ ಮಹಿಳಾ ತಂಡ
ಇನ್ನು ಅನುಭವಿ ಮಿಥಾಲಿ, ಕೌರ್ ಮತ್ತು ಪೂನಮ್ ರಾವುತ್ ಅಂತಹ ಅನುಭವಿಗಳು ಮಧ್ಯಮ ಕ್ರಮಾಂಕದ ಬಲವಾಗಲಿದ್ದಾರೆ. ಆರಂಭಿಕರಾಗಿರುವ ಮಂಧಾನ ಜೊತೆಗೆ ಕಣಕ್ಕಿಳಿಯುತ್ತಿರುವ 17 ವರ್ಷದ ಯುವ ಆಟಗಾರ್ತಿ ಶೆಫಾಲಿಗೆ ಇದು ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿಕೊಳ್ಳಲು ಉತ್ತಮ ಅವಕಾಶ ಸಿಕ್ಕಂತಾಗಿದೆ.
ಜೂಲನ್ ಗೋಸ್ವಾಮಿ ಮತ್ತು ಶಿಖಾ ಪಾಂಡೆ ತಂಡದ ಬೌಲಿಂಗ್ ಶಕ್ತಿಯಾಗಲಿದ್ದಾರೆ, ಉಳಿದಂತೆ ಸಪ್ಇನ್ನರ್ ವಿಭಾಗದಲ್ಲಿ ಪೂನಂ ಯಾದವ್ , ಎಕ್ತಾ ಬಿಷ್ತ್ ಮತ್ತು ರಾಧ ಯಾದವ್ ಹಾಗೂ ದೀಪ್ತಿ ಶರ್ಮಾ ಆಡುವ ಸಾಧ್ಯತೆಯಿದೆ.
ಭಾರತ: ಮಿಥಾಲಿ ರಾಜ್ (ನಾಯಕಿ), ಸ್ಮೃತಿ ಮಂದಾನ, ಹರ್ಮನ್‌ಪ್ರೀತ್ ಕೌರ್ (ಉಪನಾಯಕಿ), ಪೂನಮ್ ರೌತ್, ಪ್ರಿಯಾ ಪೂನಿಯಾ, ದೀಪ್ತಿ ಶರ್ಮಾ, ಜೆಮಿಮಾ ರೊಡ್ರಿಗಸ್, ಶೆಫಾಲಿ ವರ್ಮಾ, ಸ್ನೇಹ ರಾಣಾ, ತಾನಿಯಾ ಭಾಟಿಯಾ (ವಿಕೆಟ್ ಕೀಪರ್), ಇಂದ್ರಾಣಿ ಗೋಸ್ ಜಮ್ , ಶಿಖಾ ಪಾಂಡೆ, ಪೂಜಾ ವಸ್ತ್ರಾಕರ್, ಅರುಂಧತಿ ರೆಡ್ಡಿ, ಪೂನಂ ಯಾದವ್, ಏಕ್ತಾ ಬಿಷ್ತ್, ರಾಧಾ ಯಾದವ್.
ಇಂಗ್ಲೆಂಡ್: ಹೀದರ್ ನೈಟ್ (ನಾಯಕಿ), ಎಮಿಲಿ ಅರ್ಲಾಟ್, ಟಮ್ಮಿ ಬ್ಯೂಮಾಂಟ್, ಕ್ಯಾಥರೀನ್ ಬ್ರಂಟ್, ಕೇಟ್ ಕ್ರಾಸ್, ಫ್ರೇಯಾ ಡೇವಿಸ್, ಸೋಫಿಯಾ ಡಂಕ್ಲೆ, ಸೋಫಿ ಎಕ್ಲೆಸ್ಟೋನ್, ಜಾರ್ಜಿಯಾ ಎಲ್ವಿಸ್, ಟ್ಯಾಶ್ ಫಾರಂಟ್, ಸಾರಾ ಗ್ಲೆನ್, ಆಮಿ ಜೋನ್ಸ್, ನ್ಯಾಟ್ ಸೀವರ್ (ಉಪನಾಯಕಿ), ಅನ್ಯಾ ಶ್ರಬ್ಸೋಲ್, ಮ್ಯಾಡಿ ವಿಲಿಯರ್ಸ್, ಫ್ರಾನ್ ವಿಲ್ಸನ್, ಲಾರೆನ್ ವಿನ್ಫೀಲ್ಡ್