ETV Bharat / sports

ಆಸ್ಟ್ರೇಲಿಯಾದಲ್ಲಿ ಮೊದಲ ಪಿಂಕ್ ಬಾಲ್ ಟೆಸ್ಟ್​ ಆಡಲಿದೆ ಭಾರತ ಮಹಿಳಾ ತಂಡ - ಬಿಸಿಸಿಐ ಕಾರ್ಯದರ್ಶಿ ಜಯ್ ಶಾ

ಮಹಿಳಾ ಆಟವನ್ನು ಉತ್ತೇಜಿಸುವುದು ಬಿಸಿಸಿಐನ ಬದ್ಧತೆಯ ಭಾಗವಾಗಿದೆ ಎಂದು ಈ ಪಿಂಕ್ ಬಾಲ್ ಟೆಸ್ಟ್​ ಆಯೋಜಿಸಲಾಗುವುದು ಎಂದು ಶಾ ತಮ್ಮ ಟ್ವಿಟ್ಟರ್​ನಲ್ಲಿ ಪ್ರಕಟಿಸಿದ್ದಾರೆ.

ಭಾರತ ಮತ್ತು ಆಸ್ಟ್ರೇಲಿಯಾ ವನಿತೆಯರ ವಿರುದ್ಧ ಪಿಂಕ್ ಬಾಲ್ ಟೆಸ್ಟ್​

author img

By

Published : May 20, 2021, 3:01 PM IST

ಮುಂಬೈ: ಭಾರತ ಮಹಿಳಾ ತಂಡ ಈ ವರ್ಷ ಆಸ್ಟ್ರೇಲಿಯಾ ಪ್ರವಾಸ ಕೈಗೊಳ್ಳಲಿದ್ದು, ಈ ವೇಳೆ ತಮ್ಮ ಮೊದಲ ಡೇ ಅಂಡ್ ನೈಟ್ ಟೆಸ್ಟ್​ ಪಂದ್ಯವನ್ನಾಡಲಿದೆ ಎಂದು ಗುರುವಾರ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಹೇಳಿದ್ದಾರೆ.

ಮಹಿಳಾ ಆಟವನ್ನು ಉತ್ತೇಜಿಸುವುದು ಬಿಸಿಸಿಐನ ಬದ್ಧತೆಯ ಭಾಗವಾಗಿದೆ ಎಂದು ಈ ಪಿಂಕ್ ಬಾಲ್ ಟೆಸ್ಟ್​ ಆಯೋಜಿಸಲಾಗುವುದು ಎಂದು ಶಾ ತಮ್ಮ ಟ್ವಿಟ್ಟರ್​ನಲ್ಲಿ ಪ್ರಕಟಿಸಿದ್ದಾರೆ.

ಮಹಿಳಾ ಕ್ರಿಕೆಟ್​ಅನ್ನು ಉತ್ತೇಜಿಸುವ ನಮ್ಮ ಬದ್ಧ​​ತೆಯಿಂದ ಆಸ್ಟ್ರೇಲಿಯಾದಲ್ಲಿ ಭಾರತ ಮಹಿಳಾ ತಂಡ ಅವರ ಮೊದಲ ಪಿಂಕ್ ಬಾಲ್ ಟೆಸ್ಟ್​ ಪಂದ್ಯವನ್ನಾಡಲಿದೆ ಎಂದು ಘೋಷಿಸುತ್ತಿರುವುದಕ್ಕೆ ನನಗೆ ತುಂಬಾ ಖುಷಿಯಾಗಿದೆ ಎಂದು ಜಯ್​ ಶಾ ಟ್ವೀಟ್​ ಮಾಡಿದ್ದಾರೆ.

  • Taking forward our commitment towards women's cricket, I am extremely pleased to announce that Team India @BCCIwomen will play in their first-ever pink ball day-night Test later this year in Australia.

    — Jay Shah (@JayShah) May 20, 2021 " class="align-text-top noRightClick twitterSection" data=" ">

ಭಾರತ ಮಹಿಳಾ ತಂಡ ಜೂನ್​ 16ರಿಂದ ಇಂಗ್ಲೆಂಡ್ ವಿರುದ್ಧ 6 ವರ್ಷಗಳ ಬಳಿಕ ತಮ್ಮ ಮೊದಲ ಟೆಸ್ಟ್​ ಪಂದ್ಯವನ್ನಾಡುತ್ತಿದೆ. ಈ ಪ್ರವಾಸ ಮುಗಿದ ಮೇಲೆ ಆಸ್ಟ್ರೇಲಿಯಾ ವಿರುದ್ಧ ಸೆಪ್ಟೆಂಬರ್​ನಲ್ಲಿ ಮತ್ತೊಂದು ಟೆಸ್ಟ್​ ಪಂದ್ಯವನ್ನಾಡಲಿದೆ. ಭಾರತ ವನಿತೆಯರ ತಂಡ 2006ರಲ್ಲಿ ಆಸ್ಟ್ರೇಲಿಯಾ ವಿರುದ್ಧ ತನ್ನ ಕೊನೆಯ ಟೆಸ್ಟ್ ಪಂದ್ಯ ಆಡಿತ್ತು.

ಭಾರತ ಮತ್ತು ಆಸ್ಟ್ರೇಲಿಯಾ ವನಿತೆಯರ ನಡುವೆ ನಡೆಯುವ ಈ ಟೆಸ್ಟ್ ಪಂದ್ಯ ಮಹಿಳಾ ಕ್ರಿಕೆಟ್ ಇತಿಹಾಸದ 2ನೇ ಟೆಸ್ಟ್​ ಪಂದ್ಯವಾಗಲಿದೆ. 2017ರಲ್ಲಿ ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ತಂಡ ಸಿಡ್ನಿಯಲ್ಲಿ ಮೊದಲ ಅಹರ್ನಿಶಿ ಟೆಸ್ಟ್ ಪಂದ್ಯವನ್ನಾಡಿದ್ದವು.​

ಇದನ್ನು ಓದಿ:ಮಹಿಳಾ ಕ್ರಿಕೆಟಿಗರ ವಾರ್ಷಿಕ ಗುತ್ತಿಗೆ: ವೇದಾಗಿಲ್ಲ ಅವಕಾಶ, A ಗ್ರೇಡ್​ನಲ್ಲಿ ಸ್ಮೃತಿ - ಹರ್ಮನ್, Bಗೆ ಬಡ್ತಿಪಡೆದ ಶೆಫಾಲಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.