ಬ್ರಿಸ್ಟಲ್: ಇಂಗ್ಲೆಂಡ್ ಮಹಿಳಾ ತಂಡದ ವಿರುದ್ಧ ನಡೆಯುತ್ತಿರುವ ಏಕೈಕ ಟೆಸ್ಟ್ ಪಂದ್ಯದಲ್ಲಿ 17 ವರ್ಷದ ಹುಡುಗಿ ಶೆಫಾಲಿ ವರ್ಮಾ ಅದ್ಭುತ ಸಾಧನೆ ಮಾಡಿದರು.
ಈ ಪಂದ್ಯದಲ್ಲಿ ಶೆಫಾಲಿ ವರ್ಮಾ ಹಾಗೂ ಸ್ಮೃತಿ ಮಂಧಾನ ಹೊಸ ದಾಖಲೆ ಬರೆದರು. 1984ರಲ್ಲಿ ಮುಂಬೈನಲ್ಲಿ ಆಸ್ಟ್ರೇಲಿಯಾ ವಿರುದ್ಧ ಗಾರ್ಗಿ ಬ್ಯಾನರ್ಜಿ ಮತ್ತು ಸಂಧ್ಯಾ ಅಗರ್ವಾಲ್ ಮೊದಲ ವಿಕೆಟ್ಗೆ 153 ರನ್ಗಳ ಜೊತೆಯಾಟ ನೀಡಿದ್ದರು. ಈಗ ಸ್ಮೃತಿ ಮತ್ತು ಶಫಾಲಿ ಜೋಡಿ 167 ರನ್ಗಳ ಪಾರ್ಟ್‌ನರ್‌ಶಿಪ್ ಮೂಲಕ ಹೊಸ ದಾಖಲೆ ಸೃಷ್ಟಿಸಿದ್ದಾರೆ.
ಇದರ ಜೊತೆಗೆ, ಶಫಾಲಿ ಚೊಚ್ಚಲ ಟೆಸ್ಟ್ ಪಂದ್ಯದಲ್ಲಿ ಅತ್ಯಧಿಕ ರನ್ (96) ಗಳಿಸಿದ ಸಾಧನೆ ಮಾಡಿದರು. ಈ ಹಿಂದೆ 1995ರಲ್ಲಿ ನ್ಯೂಜಿಲೆಂಡ್ ವಿರುದ್ಧದ ಚೊಚ್ಚಲ ಟೆಸ್ಟ್ ಪಂದ್ಯದಲ್ಲಿ ಚಂದೇರಿಕಂಠ ಕೌಲ್ 75 ರನ್ಗಳಿಕೆ ಮಾಡಿದ್ದರು.