ETV Bharat / sports

ಕೋಚ್​ ಆಗಿದ್ದಾಗ ಕಾಮೆಂಟರಿ ಮಾಡಲು ನಿರ್ಬಂಧ: ಬಿಸಿಸಿಐ ನಡೆಗೆ ರವಿಶಾಸ್ತ್ರಿ ಬೇಸರ - ಬಿಸಿಸಿಐ ರೂಲ್ಸ್​ ಬಗ್ಗೆ ರವಿಶಾಸ್ತ್ರಿ ಬೇಸರ

ಭಾರತ ತಂಡದ ಮುಖ್ಯ ಕೋಚ್​ ಆಗಿದ್ದಾಗ ಕಾಮೆಂಟರಿ ಮಾಡಬಾರದು ಎಂಬ ನಿರ್ಬಂಧಕ್ಕೆ ರವಿಶಾಸ್ತ್ರಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ravi-shastri
ರವಿಶಾಸ್ತ್ರಿ
author img

By

Published : Mar 22, 2022, 9:30 PM IST

ನವದೆಹಲಿ: ಭಾರತದ ತಂಡದ ಮುಖ್ಯ ಕೋಚ್​ ಹುದ್ದೆಯಿಂದ ಕೆಳಗಿಳಿದಿರುವ ರವಿಶಾಸ್ತ್ರಿ ಐಪಿಎಲ್​ನ 15ನೇ ಆವೃತ್ತಿಯಲ್ಲಿ ವೀಕ್ಷಕ ವಿವರಣೆ ನೀಡಲು ಸಜ್ಜಾಗಿದ್ದಾರೆ. ಅಲ್ಲದೇ, ಭಾರತದ ತಂಡದ ಹೆಡ್​ ಕೋಚ್ ಆಗಿದ್ದ ವೇಳೆ ತಮಗೆ ಐಪಿಎಲ್​ನಲ್ಲಿ ಕಾಮೆಂಟರಿ ಮಾಡಲು ಅವಕಾಶ ನೀಡದ್ದಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಸ್ಟಾರ್​ ಸ್ಪೋರ್ಟ್ಸ್​ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ರವಿಶಾಸ್ತ್ರಿ, ಈ ಹಿಂದಿನ ಐಪಿಎಲ್​ನ 11 ಆವೃತ್ತಿಯಲ್ಲಿ ವೀಕ್ಷಕ ವಿವರಣೆ ನೀಡಿದ್ದೇನೆ. ಭಾರತದ ತಂಡದ ಮುಖ್ಯ ಕೋಚ್​ ಆಗಿದ್ದಾಗ ನಿರ್ಬಂಧಗಳ ಹಿನ್ನೆಲೆಯಲ್ಲಿ ಆ ಕೆಲಸ ಮಾಡಲಾಗಿಲ್ಲ. ಕ್ರಿಕೆಟ್​ನಲ್ಲಿನ ಕೆಲ ಕೆಟ್ಟ ನಿಯಮಗಳು ಬದಲಾಗಬೇಕಿದೆ ಎಂದು ಬಿಸಿಸಿಐ ನೀತಿಯ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇನ್ನು ರವಿಶಾಸ್ತ್ರಿ ಅಲ್ಲದೇ, ಐಪಿಎಲ್​ನ ಸ್ಟಾರ್​ ಆಟಗಾರರಾಗಿದ್ದ ಸುರೇಶ್​ ರೈನಾ ಕೂಡ ಈ ಬಾರಿ ಕಾಮೆಂಟರಿ ಬಾಕ್ಸ್​ನಲ್ಲಿ ಮೈಕ್​ ಹಿಡಿಯಲಿದ್ದಾರೆ. 'ಸುರೇಶ್​ ರೈನಾರನ್ನು 'ಮಿಸ್ಟರ್​ ಐಪಿಎಲ್​' ಎಂದು ಕರೆಯಲಾಗುತ್ತದೆ. ಅವರು ಬರೀ ಮಿಸ್ಟರ್​ ಐಪಿಎಲ್​ ಅಲ್ಲ. ಐಪಿಎಲ್​ನ ಪ್ರಮುಖ ಆಟಗಾರರಾಗಿದ್ದರು. ಟೂರ್ನಿಯ ಚರಿತ್ರೆಯಲ್ಲಿ ಅತಿಹೆಚ್ಚು ರನ್​ ಬಾರಿಸಿದ ಆಟಗಾರ ರೈನಾ ಆಗಿದ್ದಾರೆ ಎಂದು ಗುಣಗಾನ ಮಾಡಿದ್ದಾರೆ.

ಇದೇ 26 ರಿಂದ 15 ನೇ ಆವೃತ್ತಿಯ ಐಪಿಎಲ್​ ಆರಂಭಗೊಳ್ಳಲಿದೆ. ಮುಂಬೈನಲ್ಲಿ ಹಾಲಿ ಚಾಂಪಿಯನ್​ ಚೆನ್ನೈ ಸೂಪರ್​ ಕಿಂಗ್ಸ್​ ಮತ್ತು ಕೋಲ್ಕತ್ತಾ ನೈಟ್​ ರೈಡರ್ಸ್​ ವಿರುದ್ಧ ಉದ್ಘಾಟನಾ ಪಂದ್ಯ ನಡೆಯಲಿದೆ.

ಇದನ್ನೂ ಓದಿ: ಎಟಿಪಿ ಶ್ರೇಯಾಂಕ​: ಮತ್ತೆ ಅಗ್ರಸ್ಥಾನಕ್ಕೆ ಮರಳಿದ ನೊವಾಕ್​ ಜೊಕೊವಿಕ್​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.