ಬ್ರಿಸ್ಬೇನ್: ಭಾರತ ಸ್ಟಾರ್ ಕ್ರಿಕೆಟರ್ಗಳಾದ ಸ್ಮೃತಿ ಮಂಧಾನ ಮತ್ತು ದೀಪ್ತಿ ಶರ್ಮಾ ಮುಂಬರುವ ವುಮೆನ್ಸ್ ಬಿಗ್ಬ್ಯಾಶ್ನಲ್ಲಿ ಸಿಡ್ನಿ ಥಂಡರ್ ತಂಡದಲ್ಲಿ ಆಡಲಿದ್ದಾರೆ. ಇವರಿಬ್ಬರೂ ಇಂಗ್ಲೆಂಡ್ನ ಹೀದರ್ ನೈಟ್ ಮತ್ತು ಟಮ್ಮಿ ಬ್ಯೂಮಂಟ್ ಬದಲಿ ಆಟಗಾರರಾಗಿ ಥಂಡರ್ ಜೊತೆಗೆ ಒಪ್ಪಂದ ಮಾಡಿಕೊಂಡಿದ್ದಾರೆ.
ಮಂದಾನ ಹಿಂದಿನ ಆವೃತ್ತಿಗಳಲ್ಲಿ ಬ್ರಿಸ್ಬೇನ್ ಹೀಟ್ ಮತ್ತು ಹೋಬರ್ಟ್ ಹರಿಕೇನ್ಸ್ ತಂಡದಲ್ಲಿ ಆಡಿದ್ದರು. ದೀಪ್ತಿ ಇದೇ ಮೊದಲ ಬಾರಿಗೆ ಆಸ್ಟ್ರೇಲಿಯನ್ ಟಿ20 ಲೀಗ್ನಲ್ಲಿ ಆಡಲಿದ್ದಾರೆ. ಈ ಆಟಗಾರ್ತಿ ಇತ್ತೀಚೆಗೆ ಮುಗಿದ ಇಂಗ್ಲೆಂಡ್ ದಿ ಹಂಡ್ರೆಡ್ ಲೀಗ್ನಲ್ಲಿ ಲಂಡನ್ ಸ್ಪಿರಿಟ್ಸ್ ತಂಡದಲ್ಲಿ ಆಡಿದ್ದರು. ದೀಪ್ತಿ 5.26ರ ಎಕಾನಮಿಯಲ್ಲಿ 10 ವಿಕೆಟ್ ಪಡೆದಿದ್ದರು.
-
A message from our new recruits! 💭🇮🇳@mandhana_smriti @Deepti_Sharma06 #ThunderNation pic.twitter.com/X1YqLixMOq
— Sydney Thunder (@ThunderBBL) September 26, 2021 " class="align-text-top noRightClick twitterSection" data="
">A message from our new recruits! 💭🇮🇳@mandhana_smriti @Deepti_Sharma06 #ThunderNation pic.twitter.com/X1YqLixMOq
— Sydney Thunder (@ThunderBBL) September 26, 2021A message from our new recruits! 💭🇮🇳@mandhana_smriti @Deepti_Sharma06 #ThunderNation pic.twitter.com/X1YqLixMOq
— Sydney Thunder (@ThunderBBL) September 26, 2021
ಮಂಧಾನ-ದೀಪ್ತಿ ಜೋಡಿ ಈ ಹಿಂದೆ ಕಿಯಾ ಸೂಪರ್ ಲೀಗ್ನಲ್ಲಿ ವೆಸ್ಟರ್ನ್ ಸ್ಟಾರ್ಮ್ ತಂಡದಲ್ಲಿ ಆಡಿದ್ದರು.
ಈ ಕುರಿತು ಮಾತನಾಡಿರುವ ಮಂಧಾನ, ವಿದೇಶಿ ಟಿ20 ಲೀಗ್ಗಳಲ್ಲಿ, ಅದರಲ್ಲೂ ಟಿ20 ಮಾದರಿಯಲ್ಲಿ ಆಡುವುದರಿಂದ ಸಾಕಷ್ಟು ಅನುಭವ ದೊರೆಯಲಿದೆ. ಅಲ್ಲಿ ವಿಶ್ವದಾದ್ಯಂತ ಬರುವ ವಿವಿಧ ರಾಷ್ಟ್ರಗಳ ಆಟಗಾರ್ತಿಯೊಂದಿಗೆ ಸಾಕಷ್ಟು ಅನುಭವಗಳನ್ನು ಹಂಚಿಕೊಳ್ಳಬಹುದು. ಜೊತೆಗೆ ಅಲ್ಲಿ ತುಂಬಾ ಕಲಿಯಬಹುದು. ನಾನು ಯಾವಾಗಲೂ ಇಂತಹ ಅವಕಾಶಗಳನ್ನು ಸದುಪಯೋಗ ಮಾಡಿಕೊಳ್ಳುತ್ತೇನೆ ಎಂದು ಹೇಳಿದರು.
ಇದನ್ನೂ ಓದಿ: ಆಸ್ಟ್ರೇಲಿಯಾದ 26 ಪಂದ್ಯಗಳ ಗೆಲುವಿನ ಓಟಕ್ಕೆ ಬ್ರೇಕ್ ಹಾಕಿದ ಭಾರತ ಮಹಿಳಾ ತಂಡ