ದುಬೈ: ಆಸ್ಟ್ರೇಲಿಯ ವಿರುದ್ಧದ ಬಾರ್ಡರ್ ಗವಾಸ್ಕರ್ ಸರಣಿಯಲ್ಲಿ ಭಾರತ ಗೆಲುವು ಸಾಧಿಸಿದೆ. ಕೊನೆಯ ಪಂದ್ಯದಲ್ಲಿ ಭಾರತ ಬ್ಯಾಟರ್ಗಳು ಉತ್ತಮ ಪ್ರದರ್ಶನ ನೀಡಿದ್ದಾರೆ. ಈ ಬ್ಯಾಟಿಂಗ್ ಪ್ರದರ್ಶನದನ ನಂತರ ಭಾರತ ಆಟಗಾರರು ಐಸಿಸಿ ಶ್ರೇಯಾಂಕದಲ್ಲಿ ಏರಿಕೆ ಕಂಡಿದ್ದಾರೆ. ಕೊನೆಯ ಪಂದ್ಯದಲ್ಲಿ ಶತಕ ಗಳಿಸಿ ವಿರಾಟ್ ಮತ್ತು ಆಲ್ರೌಂಡರ್ ಪ್ರದರ್ಶನ ನೀಡಿದ ಅಕ್ಷರ್ ಪಟೇಲ್ ರ್ಯಾಂಕಿಂಗ್ನಲ್ಲಿ ಗಮನಾರ್ಹ ಬದಲಾವಣೆ ಕಂಡು ಬಂದಿದೆ.
ಅಗ್ರ ಪಟ್ಟದಲ್ಲೇ ಮುಂದುವರಿದ ಅಶ್ವಿನ್: ಭಾರತದ ಸ್ಟಾರ್ ಸ್ಪಿನ್ ಬೌಲರ್ ರವಿಚಂದ್ರನ್ ಅಶ್ವಿನ್ ಅವರು ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ 17.28 ಸರಾಸರಿಯಲ್ಲಿ 25 ವಿಕೆಟ್‌ಗಳನ್ನು ಗಳಿಸಿ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದರು. ಮಾರ್ಚ್ 1 ರಂದು ನವೀಕರಣಗೊಂಡಿದ್ದ ರ್ಯಾಂಕಿಂಗ್ನಲ್ಲಿ ನಂ.1 ಸ್ಥಾನಕ್ಕೇರಿದ್ದ ಅಶ್ವಿನ್ ತಮ್ಮ ಶ್ರೇಯಾಂಕವನ್ನು ಕಾಯ್ದುಕೊಂಡಿದ್ದಾರೆ. ಜೇಮ್ಸ್ ಆಂಡರ್ಸನ್ ಮತ್ತು ಆಸಿಸ್ ಕ್ಯಾಪ್ಟನ್ ಪ್ಯಾಟ್ ಕಮಿನ್ಸ್ ಅವರನ್ನು ಹಿಂದಿಕ್ಕೆ ಮೂರನೇ ಟೆಸ್ಟ್ ಬಳಿಕ ಅಗ್ರಪಟ್ಟಕ್ಕೇರಿದ್ದರು.
ಬ್ಯಾಟಿಂಗ್ ರ್‍ಯಾಂಕಿಂಗ್: ಗುಜರಾತ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ 3.5 ವರ್ಷಗಳ ಶತಕದ ಬರವನ್ನು ಪೂರೈಸಿಕೊಂಡ ವಿರಾಟ್ ಶ್ರೇಯಾಂಕದಲ್ಲೂ ಬದಲಾವಣೆಯಾಗಿದೆ. ಮೂರನೇ ಟೆಸ್ಟ್ ನಂತರ 20 ರಲ್ಲಿದ್ದ ವಿರಾಟ್ ಈಗ 13ನೇ ಜಾಗಕ್ಕೆ ಅಂದರೆ 8 ಸ್ಥಾನದ ಏರಿಕೆ ಕಂಡಿದ್ದಾರೆ. ಸರಣಿಯ ಕೊನೆಯ ಪಂದ್ಯದಲ್ಲಿ ವಿರಾಟ್ ಅದ್ಭುತ 186 ರನ್ ಗಳಿಸಿದ್ದರು. ಬ್ಯಾಟರ್ಗಳ ರ್ಯಾಂಕಿಂಗ್ನಲ್ಲಿ ರಿಷಭ್ ಪಂತ್ ಒಂಬತ್ತು ಮತ್ತು ರೋಹಿತ್ ಶರ್ಮಾ 10 ನೇ ಸ್ಥಾನದಲ್ಲಿದ್ದಾರೆ. ಟಾಪ್ 10 ಪಟ್ಟಿಯಲ್ಲಿ ಇಬ್ಬರೇ ಆಟಗಾರರು ಮಾತ್ರ ಇದ್ದಾರೆ.
ಬೌಲಿಂಗ್ ಶ್ರೇಯಾಂಕ: ಆಲ್ರೌಂಡರ್ ಅಕ್ಷರ್ ಪಟೇಲ್ ಟೆಸ್ಟ್ ಸರಣಿಯಲ್ಲಿ ಬ್ಯಾಟಿಂಗ್ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದರು. ಅವರ ಬ್ಯಾಟಿಂಗ್ ಶ್ರೇಯಾಂಕದಲ್ಲೂ ಉತ್ತಮ ಬದಲಾವಣೆ ಕಂಡು ಬಂದಿದೆ. ಅವರು ಬ್ಯಾಟಿಂಗ್ ರ್ಯಾಂಕಿಂಗ್ನಲ್ಲಿ 8 ಸ್ಥಾನಗಳ ಏರಿಕೆ ಕಂಡು 44ನೇ ಶ್ರೇಯಾಂಕದಲ್ಲಿದ್ದಾರೆ. ಬೌಲಿಂಗ್ ಶ್ರೇಯಾಂಕದಲ್ಲಿ ಟಾಪ್ ಟೆನ್ನಲ್ಲಿ ಭಾರತದ ಇಬ್ಬರು ಬೌಲರ್ಗಳಿದ್ದಾರೆ. ಜಸ್ಪ್ರೀತ್ ಬುಮ್ರಾ 7 ನೇ ಸ್ಥಾನದಲ್ಲಿದ್ದಾರೆ ಮತ್ತು ರವೀಂದ್ರ ಜಡೇಜಾ 9 ನೇ ಸ್ಥಾನದಲ್ಲಿದ್ದಾರೆ. ಆದರೆ, ಉಭಯ ಆಟಗಾರರು ತಲಾ ಒಂದು ಅಂಕ ಕಳೆದುಕೊಂಡಿದ್ದಾರೆ. ಬೆನ್ನುನೋವಿನಿಂದಾಗಿ ಜಸ್ಪ್ರೀತ್ ಬುಮ್ರಾ ಬಹಳ ಸಮಯದಿಂದ ಮೈದಾನದಿಂದ ದೂರವಿದ್ದಾರೆ. ನಾಲ್ಕನೇ ಟೆಸ್ಟ್ನಲ್ಲಿ ಜಡೇಜಾ ವಿಕೆಟ್ ಪಡೆಯುವಲ್ಲಿ ವಿಫಲಾಗಿರುವ ಕಾರಣ ಇಳಿಕೆ ಕಂಡಿದ್ದಾರೆ.
ಆಲ್ರೌಂಡರ್ನಲ್ಲೂ ಅಕ್ಷರ್ ಏರಿಕೆ: ಆದರೆ ರವೀಂದ್ರ ಜಡೇಜಾ ಆಲ್ರೌಂಡರ್ ಪಟ್ಟಿಯಲ್ಲಿ ಅಗ್ರಸ್ಥಾನವನ್ನು ಕಾಯ್ದುಕೊಂಡಿದ್ದಾರೆ. ರವೀಂದ್ರ ಜಡೇಜಾ 431 ರೇಟಿಂಗ್‌ನೊಂದಿಗೆ ಮೊದಲ ಸ್ಥಾನದಲ್ಲಿದ್ದಾರೆ. ಆರ್ ಅಶ್ವಿನ್ 359 ರೇಟಿಂಗ್‌ಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ. ಅದೇ ವೇಳೆ ಅಕ್ಷರ್ ಪಟೇಲ್ ಆಲ್ರೌಂಡರ್ ಶ್ರೇಯಾಂಕದಲ್ಲೂ 2 ಸ್ಥಾನದ ಏರಿಕೆ ಕಂಡಿದ್ದು, 316 ರೇಟಿಂಗ್‌ಗಳೊಂದಿಗೆ ನಾಲ್ಕನೇ ಸ್ಥಾನಕ್ಕೆ ತಲುಪಿದ್ದಾರೆ.
ಇದನ್ನೂ ಓದಿ: ಮಾರ್ಚ್ 17ರಿಂದ ಏಕದಿನ ಫೈಟ್: ಕೊಹ್ಲಿ ಬ್ಯಾಟ್ನಿಂದ ಬರಲಿರುವ ದಾಖಲೆಗಳಿವು..