ಮೌಂಟ್ ಮೌಂಗನುಯಿ: ಭಾನುವಾರ ಭಾರತ ಮಹಿಳಾ ತಂಡ 2022ರ ಏಕದಿನ ವಿಶ್ವಕಪ್ನ ಮೊದಲ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ 107ರನ್ಗಳ ಸುಲಭ ಜಯ ಸಾಧಿಸಿ ಟೂರ್ನಮೆಂಟ್ನಲ್ಲಿ ಶುಭಾರಂಭ ಮಾಡಿದೆ.
ಈ ಪಂದ್ಯ ಮುಗಿಯುತ್ತಿದ್ದಂತೆ ಭಾರತೀಯ ಆಟಗಾರ್ತಿಯರು ಪಾಕಿಸ್ತಾನ ತಂಡದ ನಾಯಕಿ ಬಿಸ್ಮಾ ಮರೂಫ್ ಅವರು ಮಗುವಿನೊಂದಿಗೆ ಕೆಲವು ಸಮಯ ಕಳೆದಿರುವುದು ಇಂಟರ್ನೆಟ್ನಲ್ಲಿ ಸದ್ದು ಮಾಡುತ್ತಿದೆ. ಹರ್ಮನ್ ಪ್ರೀತ್ ಕೌರ್, ಸ್ಮೃತಿ ಮಂಧಾನ ಸೇರಿದಂತೆ ಹಲವಾರು ಭಾರತೀಯ ಕ್ರಿಕೆಟಿಗರು ಪಂದ್ಯದ ನಂತರ ಮಗುವಿನೊಂದಿಗೆ ಆಟವಾಡುತ್ತಾ, ಸೆಲ್ಫಿ ತೆಗೆದುಕೊಂಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲಾತಾಣದಲ್ಲಿ ಭಾರಿ ವೈರಲ್ ಆಗುತ್ತಿದ್ದು, ಎರಡೂ ದೇಶದ ಕ್ರಿಕೆಟ್ ಅಭಿಮಾನಿಗಳು ಮೆಚ್ಚುಗೆಯ ಸುರಿಮಳೆ ಸುರಿಸಿದ್ದಾರೆ.
-
This video ..
— Dhruba Jyot Nath 🇮🇳 (@Dhrubayogi) March 6, 2022 " class="align-text-top noRightClick twitterSection" data="
🇮🇳🙌🏻🇵🇰#INDvPAK #INDvSL #PAKvIND #PAKvAUS#CWC22 #Peshawarblast pic.twitter.com/VuoCOGyzKW
">This video ..
— Dhruba Jyot Nath 🇮🇳 (@Dhrubayogi) March 6, 2022
🇮🇳🙌🏻🇵🇰#INDvPAK #INDvSL #PAKvIND #PAKvAUS#CWC22 #Peshawarblast pic.twitter.com/VuoCOGyzKWThis video ..
— Dhruba Jyot Nath 🇮🇳 (@Dhrubayogi) March 6, 2022
🇮🇳🙌🏻🇵🇰#INDvPAK #INDvSL #PAKvIND #PAKvAUS#CWC22 #Peshawarblast pic.twitter.com/VuoCOGyzKW
ಈ ಫೋಟೋವನ್ನು ಸ್ವತಃ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಮತ್ತು ಐಸಿಸಿ ತನ್ನ ಅಧಿಕೃತ ಟ್ವಿಟರ್ನಲ್ಲಿ ಪೋಸ್ಟ್ ಮಾಡಿಕೊಂಡಿವೆ. ಲಕ್ಷಾಂತರ ಅಭಿಮಾನಿಗಳು ಕೂಡ ಈ ದಿನದ ಅದ್ಭುತ ಫೋಟೋ ಎಂದು ಬಣ್ಣಿಸಿದ್ದಾರೆ.
ಬಿಸ್ಮಾ ತಾಯಿಯಾದ ಕೇವಲ 6 ತಿಂಗಳಿಗೆ ಮೈದಾನಕ್ಕೆ ಮರಳಿ ಫಿಟ್ನೆಸ್ ಕಾಪಾಡಿಕೊಂಡು ವಿಶ್ವಕಪ್ನಲ್ಲಿ ಪಾಕಿಸ್ತಾನವನ್ನು ಪ್ರತಿನಿಧಿಸುವ ಮೂಲಕ ವಿವಾಹದ ನಂತರವೂ ಕ್ರೀಡೆಯಲ್ಲಿ ತೊಡಗಿಸಿಕೊಳ್ಳುವುದಕ್ಕೆ ಮಾದರಿಯಾಗಿ ನಿಂತಿದ್ದಾರೆ. ಈ ವಿಶ್ವಕಪ್ನ ವಿಶೇಷವೆಂದರೆ ಬಿಸ್ಮಾ ಮಾತ್ರವಲ್ಲದೆ ಕಿವೀಸ್ ಮಾಜಿ ನಾಯಕಿ ಕೂಡ ಮಗುವಿಗೆ ಜನ್ಮ ನೀಡಿದ ನಂತರ ಮತ್ತೆ ಮೈದಾನಕ್ಕೆ ಮರಳಿದ್ದು, ಕಿವೀಸ್ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ.
ಇನ್ನು ಪಂದ್ಯದಕ್ಕೆ ಬರುವುದಾದರೆ ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಭಾರತ ತಂಡ ಮಂಧಾನ ಅವರ 52ರನ್ಗಳ ಹೊರತಾಗಿಯೂ ಒಂದು ಹಂತದಲ್ಲಿ 114ಕ್ಕೆ 6 ವಿಕೆಟ್ ಕಳೆದುಕೊಂಡಿತ್ತು. ಆದರೂ ಪೂಜಾ ವಸ್ತ್ರಾಕರ್ 67 ರನ್ ಮತ್ತು ಸ್ನೇಹ್ ರಾಣಾ ಅಜೇಯ 53 ರನ್ಗಳ ನೆರವಿನಿಂದ 244 ರನ್ಗಳ ಸ್ಪರ್ಧಾತ್ಮಕ ರನ್ ದಾಖಲಿಸಿತ್ತು.
245 ರನ್ಗಳ ಸ್ಪರ್ಧಾತ್ಮಕ ಗುರಿ ಬೆನ್ನತ್ತಿದ ಪಾಕಿಸ್ತಾನ 7 ಇರುವಂತೆಯೇ 137 ರನ್ಗಳಿಗೆ ಆಲೌಟ್ ಆಯಿತು. ರಾಜೇಶ್ವರಿ ಗಾಯಕ್ವಾಡ್ 31ಕ್ಕೆ 4 ಪಡೆದು ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.
ಇದನ್ನೂ ಓದಿ:ವನಿತೆಯರ ವಿಶ್ವಕಪ್ ಕ್ರಿಕೆಟ್: ಪಾಕ್ ವಿರುದ್ಧ ಗೆದ್ದು ಬೀಗಿದ ಟೀಂ ಇಂಡಿಯಾ