ಆಗ್ರಾ( ಉತ್ತರ ಪ್ರದೇಶ): 14ನೇ ಆವೃತ್ತಿ ಇಂಡಿಯನ್ ಪ್ರೀಮಿಯರ್ ಲೀಗ್ ವೇಳೆ ಮೈದಾನದಲ್ಲೇ ಗರ್ಲ್ಫ್ರೆಂಡ್ಗೆ ಪ್ರಪೋಸ್ ಮಾಡಿ, ಉಂಗುರ ತೊಡಿಸಿದ್ದ ದೀಪಕ್ ಚಹರ್ ಇಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ದುಬೈನಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧದ ಪಂದ್ಯದ ವೇಳೆ ಚೆನ್ನೈ ತಂಡದ ದೀಪಕ್ ಚಹರ್ ತಮ್ಮ ಗೆಳತಿ ಜಯಾ ಭಾರದ್ವಾಜ್ಗೆ ಲವ್ ಪ್ರಪೋಸ್ ಮಾಡಿದ್ದರು. ಇದಕ್ಕೆ ಅವರು ಯೆಸ್ ಎಂಬ ಉತ್ತರ ನೀಡಿದ್ದರು.
ಇದೀಗ ಅವರೊಂದಿಗೆ ಉತ್ತರ ಪ್ರದೇಶದ ಆಗ್ರಾದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಇದರ ಬೆನ್ನಲ್ಲೇ ಕೆಲವೊಂದು ಫೋಟೋ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಇದಕ್ಕೆ ರವಿ ಬಿಷ್ಣೋಯ್ ಸೇರಿದಂತೆ ಅನೇಕರು ಅಭಿನಂದನೆ ಸಲ್ಲಿಸಿ, ಶುಭ ಹಾರೈಸಿದ್ದಾರೆ.
ಮೊದಲ ಸಲ ನಿಮ್ಮನ್ನು ಭೇಟಿಯಾದ ಕ್ಷಣ ನನಗೆ ಸರಿಯಾದ ವ್ಯಕ್ತಿ ನೀವೊಬ್ಬರೇ ಎಂದೆನಿಸಿತು. ನಮ್ಮ ಜೀವನದಲ್ಲಿ ನಾವು ಜೊತೆಯಾಗಿ ಸಾಕಷ್ಟು ಆನಂದಿಸಿದ್ದೇವೆ ಹಾಗೂ ಮುಂದಿನ ದಿನಗಳಲ್ಲಿಯೂ ಇದನ್ನು ಹಾಗೆಯೇ ಉಳಿಸಿಕೊಳ್ಳುತ್ತೇನೆ ಎಂದು ನಿಮ್ಮ ಬಳಿ ಪ್ರಮಾಣ ಮಾಡುತ್ತೇನೆ. ಇದು ನನ್ನ ಜೀವನದ ಅತ್ಯಂತ ಅದ್ಭುತ ಕ್ಷಣ. ದಯವಿಟ್ಟು ಪ್ರತಿಯೊಬ್ಬರೂ ನಮ್ಮನ್ನು ಆಶೀರ್ವದಿಸಿ ಎಂದು ದೀಪಕ್ ಚಹರ್ ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಮಾಡಿದ್ದಾರೆ.
ಇದನ್ನೂ ಓದಿ: 'IPLನೇ ಬನಾದಿ ಜೋಡಿ'.. ಮೈದಾನದಲ್ಲೇ ಗರ್ಲ್ಫ್ರೆಂಡ್ಗೆ ಪ್ರಪೋಸ್ ಮಾಡಿ, ಉಂಗುರ ತೊಡಿಸಿದ ಚಹರ್!
2021ರ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪರ ಆಡಿದ್ದ ದೀಪಕ್ ಚಹರ್ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದರು. ಈ ಸಲದ ಐಪಿಎಲ್ಗೋಸ್ಕರ ಬರೋಬ್ಬರಿ 14 ಕೋಟಿ ರೂಪಾಯಿ ನೀಡಿ ಅವರನ್ನ ಚೆನ್ನೈ ತಂಡ ಖರೀದಿ ಮಾಡಿತ್ತು. ಆದರೆ, ಗಾಯದ ಸಮಸ್ಯೆಯಿಂದಾಗಿ ಸೀಸನ್ನಿಂದ ಹೊರಬಿದ್ದಿದ್ದರು.
29ರ ದೀಪಕ್ ಚಹರ್ ಇಲ್ಲಿಯವರೆಗೆ 63 ಐಪಿಎಲ್ ಪಂದ್ಯಗಳಿಂದ 29.19ರ ಸರಾಸರಿಯಲ್ಲಿ 59 ವಿಕೆಟ್ ಕಬಳಿಸಿದ್ದಾರೆ. 2019ರ ಐಪಿಎಲ್ ಟೂರ್ನಿಯಲ್ಲಿ ದೀಪಕ್ 17 ಪಂದ್ಯಗಳಿಂದ 22 ವಿಕೆಟ್, 2021ರ ಟೂರ್ನಿಯಲ್ಲಿ 15 ಪಂದ್ಯಗಳಿಂದ 14 ವಿಕೆಟ್ ಪಡೆದುಕೊಂಡಿದ್ದರು. ಟೀಂ ಇಂಡಿಯಾ ಪರ 7 ಏಕದಿನ ಪಂದ್ಯ ಹಾಗೂ 20 ಟಿ-20 ಪಂದ್ಯಗಳನ್ನಾಡಿರುವ ದೀಪಕ್ ಕ್ರಮವಾಗಿ 10 ಹಾಗೂ 26 ವಿಕೆಟ್ ಪಡೆದುಕೊಂಡಿದ್ದಾರೆ.