ಮುಂಬೈ: ಭಾರತ ಟೆಸ್ಟ್ ತಂಡದ ಉಪನಾಯಕ ರೋಹಿತ್ ಶರ್ಮಾ ಮುಂಬರುವ ದಕ್ಷಿಣ ಆಫ್ರಿಕಾದ ವಿರುದ್ಧದ ಟೆಸ್ಟ್ ಸರಣಿಯಿಂದ ಹೊರಬಿದ್ದಿದ್ದಾರೆ. ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ಭಾರತ ಎ ತಂಡದ ನೇತೃತ್ವ ವಹಿಸಿದ್ದ ಪ್ರಿಯಾಂಕ್ ಪಂಚಾಲ್ ತಂಡವನ್ನು ಸೇರಿಕೊಳ್ಳಲಿದ್ದಾರೆ.
ಮುಂಬೈನ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್ನಲ್ಲಿ ಕಳೆದ ಒಂದು ವಾರದಿಂದ ರೋಹಿತ್ ಶರ್ಮಾ ಅಭ್ಯಾಸ ಮಾಡುತ್ತಿದ್ದರು. ಅಭ್ಯಾಸ ಶಿಬಿರದಲ್ಲಿ ಅವರು ಹ್ಯಾಮ್ಸ್ಟ್ರಿಂಗ್ ಗಾಯಕ್ಕೆ ತುತ್ತಾಗಿದ್ದಾರೆ ಎಂದು ಬಿಸಿಸಿಐ ಟ್ವೀಟ್ ಮಾಡಿದೆ.
-
NEWS - Priyank Panchal replaces injured Rohit Sharma in India's Test squad.
— BCCI (@BCCI) December 13, 2021 " class="align-text-top noRightClick twitterSection" data="
Rohit sustained a left hamstring injury during his training session here in Mumbai yesterday. He has been ruled out of the upcoming 3-match Test series against South Africa.#SAvIND | @PKpanchal9 pic.twitter.com/b8VgoN52LW
">NEWS - Priyank Panchal replaces injured Rohit Sharma in India's Test squad.
— BCCI (@BCCI) December 13, 2021
Rohit sustained a left hamstring injury during his training session here in Mumbai yesterday. He has been ruled out of the upcoming 3-match Test series against South Africa.#SAvIND | @PKpanchal9 pic.twitter.com/b8VgoN52LWNEWS - Priyank Panchal replaces injured Rohit Sharma in India's Test squad.
— BCCI (@BCCI) December 13, 2021
Rohit sustained a left hamstring injury during his training session here in Mumbai yesterday. He has been ruled out of the upcoming 3-match Test series against South Africa.#SAvIND | @PKpanchal9 pic.twitter.com/b8VgoN52LW
"ರೋಹಿತ್ ಶರ್ಮಾ ಮುಂಬೈನಲ್ಲಿ ಭಾನುವಾರ ಅಭ್ಯಾಸ ಮಾಡುವ ವೇಳೆ ಎಡಗಾಲು ಸ್ಮಾಯು ಸೆಳೆತಕ್ಕೆ ಒಳಗಾಗಿದ್ದಾರೆ. ಹಾಗಾಗಿ ಮುಂಬರುವ ದಕ್ಷಿಣ ಆಫ್ರಿಕಾ ವಿರುದ್ಧದ 3 ಪಂದ್ಯಗಳ ಟೆಸ್ಟ್ ಸರಣಿಯಿಂದ ಹೊರಬಿದ್ದಿದ್ದಾರೆ. ಪ್ರಿಯಾಂಕ್ ಪಾಂಚಾಲ್ ಅವರ ಬದಲೀ ಆಟಗಾರನಾಗಿ ಭಾರತ ತಂಡಕ್ಕೆ ಸೇರಿಕೊಂಡಿದ್ದಾರೆ " ಎಂದು ಬಿಸಿಸಿಐ ಹೇಳಿಕೆ ಬಿಡುಗಡೆ ಮಾಡಿದೆ. ರೋಹಿತ್ ಇತ್ತೀಚೆಗೆ ಕಿವೀಸ್ ವಿರುದ್ಧ ತವರಿನಲ್ಲಿ ನಡೆದ 2 ಪಂದ್ಯಗಳ ಟೆಸ್ಟ್ ಸರಣಿಯಿಂದ ವಿಶ್ರಾಂತಿ ಪಡೆದಿದ್ದರು.
ರೋಹಿತ್ ಅವರ ಗಾಯದ ಪ್ರಮಾಣ ಎಷ್ಟಿದೆ ಎಂಬುದು ಇನ್ನು ಖಾತ್ರಿಯಾಗದ ಕಾರಣ ಚೇತರಿಕೆಗೆ ಎಷ್ಟು ಸಮಯವಾಗಬಹುದು ಎನ್ನುವುದರ ಬಗ್ಗೆ ಸ್ಪಷ್ಟತೆಯಿಲ್ಲ. ಹಾಗಾಗಿ ಟೆಸ್ಟ್ ಸರಣಿ ಮಾತ್ರವಲ್ಲದೇ 3 ಪಂದ್ಯಗಳ ಏಕದಿನ ಸರಣಿಗೂ ಲಭ್ಯರಾಗುವರೇ ಎನ್ನುವುದು ಇನ್ನೂ ಸ್ಪಷ್ಟವಾಗಿಲ್ಲ.
ಪ್ರಿಯಾಂಕ್ ಪಾಂಚಾಲ್ ಸೇರ್ಪಡೆ
ಭಾರತದ ಎ ಪರ ದಕ್ಷಿಣ ಆಫ್ರಿಕಾದಲ್ಲಿ ನಡೆದ ಅನಧಿಕೃತ ಟೆಸ್ಟ್ ಪಂದ್ಯದಲ್ಲಿ 3 ಇನ್ನಿಂಗ್ಸ್ಗಳಲ್ಲಿ 96 ಗರಿಷ್ಠ ರನ್ ಸೇರಿದಂತೆ 120 ರನ್ಗಳಿಸಿದ್ದ ಗುಜರಾತ್ನ ಪ್ರಿಯಾಂಕ್ ಪಾಂಚಾಲ್ ಅವರು ಭಾರತ ತಂಡಕ್ಕೆ ರೋಹಿತ್ ಬದಲೀ ಆಟಗಾರನಾಗಿ ಆಯ್ಕೆಯಾಗುವ ಸಾಧ್ಯತೆಯಿದೆ. ಇವರು 100 ಪ್ರಥಮ ದರ್ಜೆ ಪಂದ್ಯಗಳಿಂದ 45.52 ರ ಸರಾಸರಿಯಲ್ಲಿ 24 ಶತಕಗಳ ಸಹಿತ 7011 ರನ್ಗಳಿಸಿದ್ದಾರೆ. ಭಾರತ ತಂಡ ದಕ್ಷಿಣ ಆಫ್ರಿಕಾಕ್ಕೆ ಡಿಸೆಂಬರ್ 16ರಂದು ಪ್ರಯಾಣ ಬೆಳಸಲಿದ್ದು, ಡಿಸೆಂಬರ್ 26ರಿಂದ ಟೆಸ್ಟ್ ಸರಣಿಯನ್ನಾಡಲಿದೆ
ಇದನ್ನೂ ಓದಿ:Ashes Test: 2ನೇ ಟೆಸ್ಟ್ಗೂ ಮುನ್ನ ಆಸೀಸ್ಗೆ ಶಾಕ್.. ಗಾಯದಿಂದ ತಂಡದ ಪ್ರಮುಖ ವೇಗಿ ಔಟ್