ಸಿಡ್ನಿ(ಆಸ್ಟ್ರೇಲಿಯಾ) : ಭಾರತ ಪಾಕಿಸ್ತಾನದ ಎದುರು ಮೊದಲ ಪಂದ್ಯದಲ್ಲಿ ಗೆದ್ದ ನಂತರ ಎರಡನೇ ಪಂದ್ಯದಲ್ಲಿ ನೆದರ್ಲ್ಯಾಂಡ್ಸ್ ಜೊತೆ ಮುಖಾಮುಖಿಯಾಗಲಿದೆ. ಈ ಹಿನ್ನೆಲೆಯಲ್ಲಿ ಭಾರತ ತಂಡ ನೆಟ್ ಪ್ರಾಕ್ಟಿಸ್ನಲ್ಲಿ ತೊಡಗಿಸಿಕೊಂಡಿದೆ. ನಿನ್ನೆ ನೆಟ್ ಅಭ್ಯಾಸದ ನಂತರ ನೀಡಿದ ಆಹಾರದ ಬಗ್ಗೆ ತಂಡದ ಸದಸ್ಯರು ಬೇಸರ ವ್ಯಕ್ತಪಡಿಸಿದ್ದಾರೆ ಎಂದು ತಿಳಿದು ಬಂದಿದೆ.
ನೆಟ್ ಪ್ರಾಕ್ಟಿಸ್ ನಂತರ ಮೈದಾನದಲ್ಲಿದ್ದ ಆಟಗಾರರಿಗೆ ಆಸ್ಟ್ರೇಲಿಯಾದ ಆಹಾರ ಸಂಸ್ಕೃತಿಯಾದ ಹಣ್ಣು, ಫಲಾಫೆಲ್ ಮತ್ತು ಸ್ಯಾಂಡ್‌ವಿಚ್ ನೀಡಲಾಗಿತ್ತು. ಈ ಆಹಾರಕ್ಕೆ ಬೇಸರಗೊಂಡ ಆಟಗಾರರು ಹೋಟೆಲ್ಗೆ ತೆರಳಿ ಊಟ ಮಾಡಿದ್ದಾರೆ. ಅಭ್ಯಾಸದ ನಂತರ ಆಟಗಾರರು ಊಟದ ನಿರೀಕ್ಷೆಯಲ್ಲಿದ್ದರು. ಆದರೆ, ಸ್ಥಳೀಯ ಆಹಾರಕ್ಕೆ ಬೇಸರ ವ್ಯಕ್ತ ಪಡಿಸಿದ್ದಾರೆ.
ಆದರೆ, ಯಾರೂ ಆಹಾರವನ್ನು ತಿರಸ್ಕರಿಸಲಿಲ್ಲ, ಎಲ್ಲರೂ ಊಟ ಬಯಸಿದ್ದರಿಂದ ಮಧ್ಯಾಹ್ನದ ನಂತರ ಹೋಟೆಲ್ಗೆ ಮರಳಿ ಊಟ ಸೇವಿಸಿದ್ದಾರೆ. ಕೆಲವು ಆಟಗಾರರು ಹಣ್ಣುಗಳನ್ನು ತೆಗೆದುಕೊಂಡಿದ್ದಾರೆ. ಆದರೆ, ಪೂರ್ಣ ಪ್ರಮಾಣದ ಊಟಕ್ಕೆ ಎಲ್ಲರೂ ಇಚ್ಚಿಸಿದ್ದರು ಎಂದು ಬಿಸಿಸಿಐನ ಮೂಲಗಳು ತಿಳಿಸಿವೆ.
ಮಂಗಳವಾರ ಐಚ್ಛಿಕ ತರಬೇತಿ ನಡೆದಿತ್ತು, ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ, ಬ್ಯಾಟರ್ ಸೂರ್ಯಕುಮಾರ್ ಯಾದವ್ ಮತ್ತು ಸ್ಪಿನ್ನರ್ ಅಕ್ಷರ್ ಪಟೇಲ್ ವಿಶ್ರಾಂತಿಯಲ್ಲಿದ್ದರು. ಇವರ ಜೊತೆಗೆ ಗಾಯದ ಸಮಸ್ಯೆ ಕಾಡ ಬಾರದು ಎಂಬ ಉದ್ದೇಶದಿಂದ ಎಲ್ಲಾ ಸ್ಪೀಡ್ ಬೌಲರ್‌ಗಳಿಗೆ ವಿಶ್ರಾಂತಿ ನೀಡಲಾಗಿತ್ತು.
ಇದನ್ನೂ ಓದಿ : 'ಟಿ20 ಮಾದರಿಯಿಂದ ವಿರಾಟ್ ಕೊಹ್ಲಿ ನಿವೃತ್ತಿಯಾಗಲಿ..': ಶೋಯೆಬ್ ಅಖ್ತರ್ ಅಚ್ಚರಿಯ ಹೇಳಿಕೆ