ನವದೆಹಲಿ: ಭಾರತ ತಂಡದ ವೇಗದ ಬೌಲರ್ ಉಮೇಶ್ ಯಾದವ್ ಅವರ ತಂದೆ ತಿಲಕ್ ಯಾದವ್ ಬುಧವಾರ ನಿಧನರಾದರು. ಅವರಿಗೆ 74 ವರ್ಷ ವಯಸ್ಸಾಗಿತ್ತು. ಕಳೆದ ಹಲವು ತಿಂಗಳುಗಳಿಂದ ತಿಲಕ್ ಅವರು ಅನಾರೋಗ್ಯದಿಂದ ಬಳಲುತ್ತಿದ್ದರು. ನಾಗ್ಪುರದ ಖಾಸಗಿ ಆಸ್ಪತ್ರೆಯಲ್ಲಿ ಅವರಿಗೆ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಬುಧವಾರ ಅವರ ಆರೋಗ್ಯ ಮತ್ತಷ್ಟು ಹದಗೆಟ್ಟಿದ್ದರಿಂದ ಇಹಲೋಕ ತ್ಯಜಿಸಿದರು. ಉಮೇಶ್ ಯಾದವ್ ಅವರನ್ನು ಹೊರತುಪಡಿಸಿ, ತಿಲಕ್ ಯಾದವ್ ಅವರಿಗೆ ಕಮಲೇಶ್ ಮತ್ತು ರಮೇಶ್ ಎಂಬ ಇಬ್ಬರು ಪುತ್ರರು ಮತ್ತು ಓರ್ವ ಪುತ್ರಿ ಇದ್ದಾರೆ. ನಾಗಪುರದ ಕೋಲಾರದಲ್ಲಿ ತಿಲಕ್ ಯಾದವ್ ಅಂತ್ಯಕ್ರಿಯೆ ಮಾಡಲಾಯಿತು.
ಉಮೇಶ್ ಯಾದವ್ ಅವರು ಕ್ರಿಕೆಟ್ ಆಗುವ ಬಗ್ಗೆ ತಂದೆ ತಿಲಕ್ ಯಾದವ್ ಬಹಳಷ್ಟು ಕನಸುಗಳನ್ನು ಕಂಡಿದ್ದರು. ಅವರು ತಮ್ಮ ಜೀವದಲ್ಲಿ ಉಮೇಶ್ಗಾಗಿ ಹಲವು ತ್ಯಾಗಗಳನ್ನೂ ಮಾಡಿದ್ದರು. ತಿಲಕ್ ಯಾದವ್ ಅವರ ನಿಧನದ ಬಗ್ಗೆ ಭಾರತದ ಮತ್ತೋರ್ವ ವೇಗಿ ಮೊಹಮ್ಮದ್ ಸಿರಾಜ್ ಟ್ವೀಟ್ ಮಾಡಿ ಸಂತಾಪ ಸೂಚಿಸಿದ್ದಾರೆ. ಉಮೇಶ್ ಮತ್ತು ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ಕೊಡಲಿ ಎಂದು ದೇವರಲ್ಲಿ ಪ್ರಾರ್ಥಿಸಿದ್ದಾರೆ.
ಕಲ್ಲಿದ್ದಲು ಗಣಿಯಲ್ಲಿ ಕೆಲಸಗಾರರಾಗಿದ್ದ ತಿಲಕ್ ಯಾದವ್: ಉಮೇಶ್ ಕಲ್ಲಿದ್ದಲು ಗಣಿಯಲ್ಲಿ ಕೆಲಸ ಮಾಡುವ ಮೂಲಕ ಕ್ರಿಕೆಟಿಗರಾದರು. ಉಮೇಶ್ ಯಾದವ್ ಅವರ ತಂದೆ ತಿಲಕ್ ಯಾದವ್ ಉತ್ತರ ಪ್ರದೇಶದ ಡಿಯೋರಿಯಾ ಜಿಲ್ಲೆಯಲ್ಲಿ ಜನಿಸಿದ್ದರು. ಪ್ರಸಿದ್ಧ ಕುಸ್ತಿಪಟು ಆಗಿದ್ದ ಅವರು ಕಲ್ಲಿದ್ದಲು ಗಣಿಯಲ್ಲಿ ಕೆಲಸ ಮಾಡಲು ನಾಗಪುರಕ್ಕೆ ತೆರಳಿದ್ದರು. ತಂದೆ ತಿಲಕ್ ಯಾದವ್ ಕಲ್ಲಿದ್ದಲು ಗಣಿಯಲ್ಲಿ ಕೆಲಸ ಮಾಡುತ್ತಿರುವಾಗಲೇ ಮಗ ಉಮೇಶ್ ಯಾದವ್ ಭಾರತ ಕ್ರಿಕೆಟ್ ತಂಡಕ್ಕೆ ಆಯ್ಕೆಯಾಗುವ ಮೂಲಕ ಅವರ ಕನಸನ್ನು ಈಡೇರಿಸಿದ್ದರು. ಮಧ್ಯಮ ಕುಟುಂಬದ ಹಿನ್ನೆಲೆಯಿಂದ ಬಂದ ಅವರು ಮಗನನ್ನು ಅಂತಾರಾಷ್ಟ್ರೀಯ ಕ್ರಿಕೆಟಿಗನನ್ನಾಗಿ ಮಾಡಿದ ಶ್ರೇಯಸ್ಸು ತಿಲಕ್ ಯಾದವ್ ಅವರಿಗೆ ಸಲ್ಲುತ್ತದೆ.
-
My condolences to @y_umesh bhai and family, a huge loss for anyone 😢 Stay strong mere bhai, and I pray for more strength during these difficult times 🤲
— Mohammed Siraj (@mdsirajofficial) February 23, 2023 " class="align-text-top noRightClick twitterSection" data="
">My condolences to @y_umesh bhai and family, a huge loss for anyone 😢 Stay strong mere bhai, and I pray for more strength during these difficult times 🤲
— Mohammed Siraj (@mdsirajofficial) February 23, 2023My condolences to @y_umesh bhai and family, a huge loss for anyone 😢 Stay strong mere bhai, and I pray for more strength during these difficult times 🤲
— Mohammed Siraj (@mdsirajofficial) February 23, 2023
ಯಾದವ್ ಕ್ರಿಕೆಟ್ ಕೆರಿಯಲ್: ಭಾರತದ ಟೆಸ್ಟ್ ತಂಡದಲ್ಲಿ ಸ್ಥಿರವಾದ ಪ್ರದರ್ಶನ ನೀಡುತ್ತಿರುವ ಉಮೇಶ್ ಯಾದವ್, ಇಲ್ಲಿಯವರೆಗೆ 54 ಟೆಸ್ಟ್‌ಗಳು, 75 ಏಕದಿನ ಮತ್ತು 7 ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ.
ಉಮೇಶ್ ಯಾದವ್ ಟೆಸ್ಟ್ನಲ್ಲಿ ಉತ್ತಮವಾಗಿ ಪ್ರದರ್ಶನ ನೀಡಿದ್ದಾರೆ. 2011ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ತಮ್ಮ ಟೆಸ್ಟ್ ಕೆರಿಯರನ್ನು ಪ್ರಾರಂಭಿಸಿದರು. ಟೆಸ್ಟ್ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದು, 54 ಟೆಸ್ಟ್ ಪಂದ್ಯಗಳಲ್ಲಿ 165 ವಿಕೆಟ್ ಪಡೆದಿದ್ದಾರೆ. ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ 4 ಪಂದ್ಯಗಳ ಬಾರ್ಡರ್ ಗವಾಸ್ಕರ್ ಟ್ರೋಫಿಗೆ ಉಮೇಶ್ ಯಾದವ್ ಆಯ್ಕೆಯಾಗಿದ್ದಾರೆ. ಆದರೆ, ಸಿರಾಜ್ ಮತ್ತು ಶಮಿ ಆಡುವ 11ರಲ್ಲಿ ಅವಕಾಶ ಪಡೆದುಕೊಂಡಿರುವುದರಿಂದ ಉಮೇಶ್ ಬೆಂಚ್ ಪ್ಲೇಯರ್ ಆಗಿದ್ದಾರೆ. ಸ್ಪೀಡ್ ಪಿಚ್ನಲ್ಲಿ ಮೂವರು ವೇಗಿಗಳನ್ನು ಕಣಕ್ಕಿಳಿಸಿದರೆ ಉಮೇಶ್ಗೆ ಸ್ಥಾನ ಸಿಗುವ ಸಾಧ್ಯತೆ ಇದೆ. ಕಳೆದ ಡಿಸೆಂಬರ್‌ನಲ್ಲಿ ಬಾಂಗ್ಲಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಅವರು ಕೊನೆಯ ಪಂದ್ಯ ಆಡಿದ್ದರು.
ಇದನ್ನೂ ಓದಿ: ಮಹಿಳಾ ಟಿ20 ವಿಶ್ವಕಪ್: ಸೆಮಿಫೈನಲ್ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಮುಗ್ಗರಿಸಿದ ಭಾರತ