ETV Bharat / sports

ಅಂತಾರಾಷ್ಟ್ರೀಯ ಕ್ರಿಕೆಟ್​ನಿಂದ ಮುರಳಿ ವಿಜಯ್​ ನಿವೃತ್ತಿ.. - ಅಂತಾರಾಷ್ಟ್ರೀಯ ಕ್ರಿಕೆಟ್​ ವೃತ್ತಿ ಜೀವನಕ್ಕೆ ವಿದಾಯ

ಭಾರತದ ಮಾಜಿ ಆರಂಭಿಕ ಆಟಗಾರ ವಿಜಯ್​ ಎಲ್ಲಾ ಮಾದರಿಯ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಇಂದು ವಿದಾಯ ಘೋಷಿಸಿದ್ದಾರೆ.

murali vijay
ಮುರಳಿ ವಿಜಯ್
author img

By

Published : Jan 30, 2023, 6:06 PM IST

ಹೈದರಾಬಾದ್​: ಭಾರತ ತಂಡದ ಆರಂಭಿಕ ಆಟಗಾರರಾಗಿದ್ದ 38 ವರ್ಷದ ಮುರಳಿ ವಿಜಯ್​ ಅಂತಾರಾಷ್ಟ್ರೀಯ ಕ್ರಿಕೆಟ್​ ವೃತ್ತಿ ಜೀವನಕ್ಕೆ ಇಂದು ವಿದಾಯ ಹೇಳಿದ್ದಾರೆ. 87 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿರುವ ಮುರಳಿ ವಿಜಯ್​ ಆರಂಭಿಕ ಆಟಗಾರರಾಗಿ 2008 ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ ಟೆಸ್ಟ್​ಗೆ ಪಾದಾರ್ಪಣೆ ಮಾಡಿದ್ದರು.

ವಿಜಯ್​ 87 ಅಂತಾರಾಷ್ಟ್ರೀಯ ಪಂದ್ಯಗಳಿಂದ ಕ್ರಿಕೆಟ್​ನಲ್ಲಿ 4,490 ರನ್ ಗಳಿಸಿದ್ದಾರೆ. ವೃತ್ತಿ ಜೀವನದಲ್ಲಿ 61 ಟೆಸ್ಟ್​ಗಳನ್ನು ಆಡಿದ ಅವರು 38.29 ಸರಾಸರಿಯಲ್ಲಿ ಬ್ಯಾಟ್​ ಬೀಸಿ 3,982 ರನ್ ಗಳಿಸಿದ್ದಾರೆ. ಇದರಲ್ಲಿ 12 ಶತಕ ಮತ್ತು 15 ಅರ್ಧ ಶತಕಗಳಿವೆ. 17 ಏಕದಿನ ಮತ್ತು 9 ಟಿ20ಗಳಲ್ಲಿ ಭಾಗವಹಿಸಿದ್ದಾರೆ. ಐಪಿಎಲ್​ನಲ್ಲಿ 106 ಪಂದ್ಯಗಳನ್ನು ಆಡಿರುವ ವಿಜಯ್​ ಎರಡು ಶತಕ ಸಹಿತ 2619 ರನ್ ಗಳಿಸಿದ್ದಾರೆ. ಐಪಿಎಲ್​ನಲ್ಲಿ ಇನ್ನಷ್ಟು ವರ್ಷ ಬ್ಯಾಟ್​ ಬೀಸುವ ಸಾಧ್ಯತೆ ಇದೆ.

ಇಂದು ಭಾವನಾತ್ಮಕವಾಗಿ ಟ್ವಿಟ್​ ಮಾಡಿದ ಮುರಳಿ ವಿಜಯ್​ ತಮ್ಮ ನಿವೃತ್ತಿಯ ಬಗ್ಗೆ ಬರೆದುಕೊಂಡಿದ್ದಾರೆ. ತಮ್ಮ ಟ್ವಿಟ್​ನಲ್ಲಿ ಪತ್ರವೊಂದನ್ನು ಪೋಸ್ಟ್​ ಮಾಡಿರುವ ವಿಜಯ್​ ಇದುವರೆಗೂ ಆಡಲು ಅವಕಾಶ ಮಾಡಿಕೊಟ್ಟ ಎಲ್ಲರಿಗೂ ಧನ್ಯವಾದ ಸಮರ್ಪಿಸಿ ತಮ್ಮ ವಿದಾಯವನ್ನು ಹೇಳಿದ್ದಾರೆ.

ವಿಜಯ್ ಟ್ವಿಟ್​ನಲ್ಲಿರುವ ಪತ್ರದಲ್ಲಿ, "ಇಂದು, ಅಪಾರ ಕೃತಜ್ಞತೆ ಮತ್ತು ನಮ್ರತೆಯಿಂದ, ನಾನು ಎಲ್ಲಾ ರೀತಿಯ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸುತ್ತೇನೆ. 2002-2018 ರವರೆಗಿನ ನನ್ನ ಪ್ರಯಾಣವು ನನ್ನ ಜೀವನದ ಅತ್ಯಂತ ಅದ್ಭುತ ವರ್ಷಗಳು ಏಕೆಂದರೆ ಇದು ಭಾರತವನ್ನು ಉನ್ನತ ಮಟ್ಟದಲ್ಲಿ ಪ್ರತಿನಿಧಿಸುವ ಗೌರವವಾಗಿದೆ. ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ), ತಮಿಳುನಾಡು ಕ್ರಿಕೆಟ್ ಸಂಸ್ಥೆ (ಟಿಎನ್‌ಸಿಎ), ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಚೆಂಪ್ಲಾಸ್ಟ್ ಸನ್ಮಾರ್ ನನಗೆ ನೀಡಿದ ಅವಕಾಶಗಳಿಗಾಗಿ ನಾನು ಕೃತಜ್ಞನಾಗಿದ್ದೇನೆ."

"ನನ್ನ ಎಲ್ಲಾ ತಂಡದ ಸಹ ಆಟಗಾರರು, ತರಬೇತುದಾರರು, ಮಾರ್ಗದರ್ಶಕರು ಮತ್ತು ಸಹಾಯಕ ಸಿಬ್ಬಂದಿಗೆ, ನಿಮ್ಮೆಲ್ಲರೊಂದಿಗೆ ಆಟವಾಡಲು ಇದು ಸಂಪೂರ್ಣ ಸವಲತ್ತು, ಮತ್ತು ನನ್ನ ಕನಸನ್ನು ನನಸಾಗಿಸಲು ಸಹಾಯ ಮಾಡಿದ್ದಕ್ಕಾಗಿ ನಾನು ನಿಮಗೆ ಧನ್ಯವಾದ ಹೇಳುತ್ತೇನೆ. ನನ್ನ ವೃತ್ತಿ ಜೀವನದ ಉನ್ನತ ಮಟ್ಟದಲ್ಲಿದ್ದಾಗಲೂ ಹಾಗೂ ಕಳಪೆಯಾಗಿ ಆಡಿದಾಗಲೂ ಬೆಂಬಲವಾಗಿ ನಿಂತು ಬೆಂಬಲಿಸಿದ ಎಲ್ಲಾ ಅಭಿಮಾನಿಗಳಿಗೆ ಮತ್ತು ಆ ಸಂದರ್ಭಗಳಲ್ಲಿ ನನ್ನ ಬೆಂಬಲಕ್ಕೆ ನಿಂತ ಎಲ್ಲರಿಗೂ ಧನ್ಯವಾದ" ಎಂದು ಬರೆದುಕೊಂಡಿದ್ದಾರೆ.

"ಕೊನೆಯದಾಗಿ, ನನ್ನ ವೃತ್ತಿಜೀವನದುದ್ದಕ್ಕೂ ನನ್ನ ಕುಟುಂಬ ಮತ್ತು ಸ್ನೇಹಿತರಿಗೆ ಅವರ ಪ್ರೀತಿ ಮತ್ತು ಬೆಂಬಲಕ್ಕಾಗಿ ನಾನು ಧನ್ಯವಾದ ಹೇಳಲು ಬಯಸುತ್ತೇನೆ. ಅವರು ನನ್ನ ಬೆನ್ನೆಲುಬಾಗಿದ್ದಾರೆ ಮತ್ತು ಅವರಿಲ್ಲದಿದ್ದರೆ, ನಾನು ಇಂದು ಏನನ್ನು ಸಾಧಿಸಲು ಸಾಧ್ಯವಾಗುತ್ತಿರಲಿಲ್ಲ. ನಾನು ಕ್ರಿಕೆಟ್ ಜಗತ್ತಿನಲ್ಲಿ ಹೊಸ ಅವಕಾಶಗಳನ್ನು ಅನ್ವೇಷಿಸುತ್ತಿದ್ದೇನೆ ಮತ್ತು ಅದರ ವ್ಯಾಪಾರದಲ್ಲಿ ನಾನು ಹೊಸ ಮತ್ತು ವಿಭಿನ್ನ ಪರಿಸರ ಇಷ್ಟಪಡುವ ಮತ್ತು ನನಗೆ ಸವಾಲು ಹಾಕುವ ಕ್ರೀಡೆಯಲ್ಲಿ ಭಾಗವಹಿಸುವುದನ್ನು ಮುಂದುವರಿಸುತ್ತೇನೆ ಎಂದು ಘೋಷಿಸಲು ಉತ್ಸುಕನಾಗಿದ್ದೇನೆ. ಕ್ರಿಕೆಟಿಗನಾಗಿ ನನ್ನ ಪ್ರಯಾಣದ ಮುಂದಿನ ಹೆಜ್ಜೆ ಮತ್ತು ನನ್ನ ಜೀವನದಲ್ಲಿ ಈ ಹೊಸ ಅಧ್ಯಾಯಕ್ಕಾಗಿ ನಾನು ಎದುರು ನೋಡುತ್ತಿದ್ದೇನೆ" ಎಂದು ಟ್ವೀಟ್​ ಮಾಡಿದ್ದಾರೆ.

ಇದನ್ನೂ ಓದಿ: ಕ್ಯಾನ್ಸರ್​ಗೆ ತಂದೆ, ಹಾವಿಗೆ ತಮ್ಮ ಬಲಿ: ಪಟ್ಟುಬಿಡದೇ ಬೆಳೆದ ಪ್ರತಿಭೆ ಅರ್ಚನಾ ದೇವಿಯ ಕ್ರಿಕೆಟ್​ಗಾಥೆಯಿದು!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.