ETV Bharat / sports

ಕ್ರಿಕೆಟರ್​ ಮೊಹಮದ್​ ಶಮಿ ವಿರುದ್ಧ ಸುಪ್ರೀಂ ಕೋರ್ಟ್ ಮೊರೆ ಹೋದ ಪತ್ನಿ ಹಸೀನಾ ಜಹಾನ್

author img

By

Published : May 3, 2023, 9:14 AM IST

ಕ್ರಿಕೆಟರ್​ ಶಮಿ ವಿರುದ್ಧ ಹೊರಡಿಸಲಾದ ಬಂಧನ ವಾರಂಟ್​ಗೆ ನೀಡಲಾದ ತಡೆಯಾಜ್ಞೆ ತೆರವುಗೊಳಿಸಲು ಕೋರಿ ಪತ್ನಿ ಹಸೀನಾ ಜಹಾನ್​ ಸುಪ್ರೀಂ ಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದಾರೆ.

ಕ್ರಿಕೆಟರ್​ ಮೊಹಮದ್​ ಶಮಿ
ಕ್ರಿಕೆಟರ್​ ಮೊಹಮದ್​ ಶಮಿ

ನವದೆಹಲಿ: ಭಾರತೀಯ ಕ್ರಿಕೆಟ್ ತಂಡದ ಆಟಗಾರ ಮೊಹಮದ್​ ಶಮಿ ವಿರುದ್ಧ ಹೊರಡಿಸಲಾಗಿದ್ದ ಬಂಧನ ವಾರಂಟ್​ಗೆ ತಡೆ ನೀಡಲಾಗಿದ್ದು, ಇದರ ತೆರವಿಗೆ ನಿರಾಕರಿಸಿದ ಕೋಲ್ಕತ್ತಾ ಹೈಕೋರ್ಟ್​ ಆದೇಶದ ವಿರುದ್ಧ ಪತ್ನಿ ಹಸೀನ್​ ಜಹಾನ್​ ಸುಪ್ರೀಂ ಕೋರ್ಟ್​ ಮೆಟ್ಟಿಲೇರಿದ್ದಾರೆ. ಅಲ್ಲದೇ, ಕಳೆದ 4 ವರ್ಷಗಳಿಂದ ಪ್ರಕರಣ ಯಾವುದೇ ಪ್ರಗತಿ ಕಂಡಿಲ್ಲ ಎಂದೂ ಮನವಿಯಲ್ಲಿ ಆಪಾದಿಸಿದ್ದಾರೆ.

ಪ್ರಕರಣವೇನು?: ಶಮಿ ಮೇಲೆ ಹಸೀನ್​ ಜಹಾನ್​ ವರದಕ್ಷಿಣೆ ಕಿರುಕುಳ ಮತ್ತು ಅಕ್ರಮ ಸಂಬಂಧ ಪ್ರಕರಣ ದಾಖಲಿಸಿದ್ದು, ಅಲಿಪುರ ಮ್ಯಾಜಿಸ್ಟ್ರೇಟ್​ ಕೋರ್ಟ್​ ಕ್ರಿಕೆಟರ್​ ವಿರುದ್ಧ ಬಂಧನ ವಾರಂಟ್​ ಹೊರಡಿಸಿತ್ತು. ಇದನ್ನು ಪಶ್ಚಿಮ ಬಂಗಾಳದ ಸೆಷನ್ಸ್ ಕೋರ್ಟಲ್ಲಿ ಪ್ರಶ್ನಿಸಲಾಗಿತ್ತು. ವಿಚಾರಣೆ ನಡೆಸಿದ ಕೋರ್ಟ್ ಬಂಧನಕ್ಕೆ ತಡೆ ನೀಡಿತ್ತು. ಇದರ ವಿರುದ್ಧ ಹಸೀನಾ ಜಹಾನ್​ ಕೋಲ್ಕತ್ತಾ ಹೈಕೋರ್ಟ್​ ಮೇಲ್ಮನವಿ ಸಲ್ಲಿಸಿದ್ದರು. ಆದರೆ, ಕೋರ್ಟ್​ ತಡೆಯನ್ನು ತೆರವು ಮಾಡಲು ನಿರಾಕರಿಸಿತ್ತು. ಹೀಗಾಗಿ ಸುಪ್ರೀಂ ಕೋರ್ಟ್​ಗೆ ಮೇಲ್ಮನವಿ ಅರ್ಜಿ ಸಲ್ಲಿಸಿದ್ದಾರೆ.

ಶಮಿ​​ ಮೇಲಿರುವ ಆರೋಪಗಳು..: ಮೊಹಮ್ಮದ್ ಶಮಿ ವಿರುದ್ಧ ಅವರ ಪತ್ನಿ ನಟಿ, ಮಾಡೆಲ್​ ಹಸೀನಾ ಜಹಾನ್​ ಅಕ್ರಮ ಸಂಬಂಧ, ವರದಕ್ಷಿಣೆ ಕಿರುಕುಳದಂತಹ ಗಂಭೀರ ಆರೋಪ ಮಾಡಿದ್ದಾರೆ. 4 ವರ್ಷಗಳ ಹಿಂದೆಯೇ ಇಬ್ಬರೂ ಬೇರ್ಪಟ್ಟಿದ್ದಾರೆ. ಶಮಿ ಅಕ್ರಮವಾಗಿ ವಿವಾಹೇತರ ಲೈಂಗಿಕ ಸಂಬಂಧಗಳಲ್ಲಿ ತೊಡಗಿಸಿಕೊಂಡಿದ್ದಾರೆ. ವಿಶೇಷವಾಗಿ ಕ್ರಿಕೆಟ್​ ಪ್ರವಾಸದ ವೇಳೆ ಇದನ್ನು ನಡೆಸಿದ್ದಾರೆ. ಬಿಸಿಸಿಐ ಒದಗಿಸಿದ ಹೋಟೆಲ್ ಕೊಠಡಿಗಳಲ್ಲಿಯೇ ಅಕ್ರಮ ಸಂಬಂಧ ಮುಂದುವರಿಸಿದ್ದಾರೆ. ತನಗೆ ವರದಕ್ಷಿಣೆ ನೀಡಲು ಕೋರಿದ್ದಾರೆ. ನನ್ನಿಂದ ಹಣ ಪಡೆದುಕೊಂಡಿದ್ದಾರೆ ಎಂದೆಲ್ಲ ಗಂಭೀರ ಆರೋಪ ಮಾಡಿದ್ದಾರೆ.

ಈ ಬಗ್ಗೆ ಜಹಾನ್​ ಪೊಲೀಸರಿಗೆ ದೂರು ದಾಖಲಿಸಿದ್ದರು. 2019ರ ಆಗಸ್ಟ್ 29 ರಂದು ಅರ್ಜಿಯ ವಿಚಾರಣೆ ನಡೆಸಿದ್ದ ಅಲಿಪುರದ ಹೆಚ್ಚುವರಿ ಮುಖ್ಯ ಮ್ಯಾಜಿಸ್ಟ್ರೇಟ್, ಶಮಿ ವಿರುದ್ಧ ಬಂಧನ ವಾರಂಟ್ ಹೊರಡಿಸಿದ್ದರು. ಕ್ರಿಕೆಟರ್​ ಈ ಆದೇಶವನ್ನು ಸೆಷನ್ಸ್ ನ್ಯಾಯಾಲಯದ ಮುಂದೆ ಪ್ರಶ್ನಿಸಿದ್ದರು. ಸೆಪ್ಟೆಂಬರ್ 9, 2019 ರಂದು ಬಂಧನ ವಾರಂಟ್ ಮತ್ತು ಕ್ರಿಮಿನಲ್ ವಿಚಾರಣೆಯ ಸಂಪೂರ್ಣ ಪ್ರಕ್ರಿಯೆಗಳಿಗೆ ಕೋರ್ಟ್ ತಡೆ ನೀಡಿತ್ತು.

ಸೆಷನ್ಸ್​ ಕೋರ್ಟ್​ ನೀಡಿದ ಆದೇಶದ ವಿರುದ್ಧ ಜಹಾನ್​, 2023 ರ ಮಾರ್ಚ್ 28 ರಂದು ಕೋಲ್ಕತ್ತಾ ಹೈಕೋರ್ಟ್​ಗೆ ಮೇಲ್ಮನವಿ ಸಲ್ಲಿಸಿದ್ದರು. ಸೆಷನ್ಸ್​​ ನ್ಯಾಯಾಲಯದ ಆದೇಶವನ್ನು ರದ್ದುಗೊಳಿಸುವಂತೆ ಮನವಿ ಮಾಡಿದ್ದರು. 2023 ರ ಮಾರ್ಚ್ 28 ರಂದು ವಿಚಾರಣೆ ನಡೆಸಿದ ಹೈಕೋರ್ಟ್​ ವಾರಂಟ್​ಗೆ ನೀಡಲಾದ ತಡೆಯನ್ನು ತೆರವು ಮಾಡಲು ಸಾಧ್ಯವಿಲ್ಲ ಎಂದು ಹೇಳಿ ಅರ್ಜಿಯನ್ನು ವಜಾ ಮಾಡಿತ್ತು. ಪರಿಣಾಮ ಇದೀಗ, ಶಮಿ ಅವರ ಪತ್ನಿ ಕೋಲ್ಕತ್ತಾದ ಹೈಕೋರ್ಟ್‌ ನೀಡಿದ ಆದೇಶದ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ಸವಾಲು ಮಾಡಿದ್ದಾರೆ.

'ಸೆಲೆಬ್ರಿಟಿಗಳಿಗೆ ಕಾನೂನಿನಲ್ಲಿ ರಿಯಾಯಿತಿ ಬೇಡ': ಮೊಹಮದ್​ ಶಮಿ ಕ್ರಿಕೆಟರ್​ ಎಂಬ ಕಾರಣಕ್ಕಾಗಿ ವಿಚಾರಣೆ ನಡೆಸಲು ವಿಳಂಬ ಮಾಡಲಾಗುತ್ತಿದೆ. ಸೆಲೆಬ್ರಿಟಿಗಳಿಗೆ ಕಾನೂನಿನಲ್ಲಿ ರಿಯಾಯಿತಿ ನೀಡಬಾರದು. ಇದು ತ್ವರಿತ ವಿಚಾರಣೆಯ ಹಕ್ಕಿನ ಸ್ಪಷ್ಟ ಉಲ್ಲಂಘನೆಯಾಗಿದೆ. ಹೈಕೋರ್ಟ್​ ನೀಡಿದ ಆದೇಶ ಆಕ್ಷೇಪಾರ್ಹವಾಗಿದೆ ಎಂದು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ ಮನವಿಯಲ್ಲಿ ದೂರಿದ್ದಾರೆ. ಗಮನಾರ್ಹವಾಗಿ, ಕಳೆದ 4 ವರ್ಷಗಳಿಂದ ವಿಚಾರಣೆಯು ಪ್ರಗತಿ ಕಂಡಿಲ್ಲ. ವಿನಾಕಾರಣ ತಡೆಹಿಡಿಯಲಾಗಿದೆ ಎಂದು ಅವರು ಆರೋಪಿಸಿದ್ದಾರೆ.

"ಪ್ರಸ್ತುತ ಪ್ರಕರಣದ ಕ್ರಿಮಿನಲ್ ವಿಚಾರಣೆಯನ್ನು ಕಳೆದ 4 ವರ್ಷಗಳಿಂದ ಯಾವುದೇ ಸಕಾರಣಗಳಿಲ್ಲದೇ ತಡೆಹಿಡಿಯಲಾಗಿದೆ. ಬಂಧನ ವಾರಂಟ್​ ಹೊರಡಿಸಿದ್ದರೂ, ಆಪಾದಿತನ ಮೇಲೆ ಯಾವುದೇ ಕ್ರಮವಾಗಿಲ್ಲ. ಈ ವಾರಂಟ್​ ಇನ್ನೂ ಜಾರಿಯಲ್ಲಿದೆ. ಸೆಷನ್ಸ್ ನ್ಯಾಯಾಲಯ ಪಕ್ಷಪಾತದ ರೀತಿಯಲ್ಲಿ ವರ್ತಿಸಿದೆ. ಇದರಿಂದಾಗಿ ಅರ್ಜಿದಾರರ ಹಕ್ಕು ಕಸಿದಂತಾಗಿದೆ. ಪೂರ್ವಾಗ್ರಹ ಪೀಡಿತ ಆದೇಶವಾಗಿದೆ" ಎಂದು ದೂರಿದ್ದಾರೆ.

ಶಮಿ ಅವರ ಪತ್ನಿ ಜಹಾನ್​, ವಕೀಲರಾದ ದೀಪಕ್ ಪ್ರಕಾಶ್, ನಚಿಕೇತ ವಾಜಪೇಯಿ ಮತ್ತು ದಿವ್ಯಾಂಗ್ನಾ ಮಲಿಕ್ ವಾಜಪೇಯಿ ಅವರ ಮೂಲಕ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.

ಇದನ್ನೂ ಓದಿ: 'ಇದು ಸರಿ ಕಾಣ್ತಿಲ್ಲ': ಕೊಹ್ಲಿ, ಗಂಭೀರ್ ಮಾತಿನ ಚಕಮಕಿ ಬಗ್ಗೆ ಕುಬ್ಳೆ ಅಭಿಪ್ರಾಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.