ETV Bharat / sports

ಇಂಟ್ರಾ - ಸ್ಕ್ವಾಡ್ ಅಭ್ಯಾಸ ಪಂದ್ಯದ ಮೂಲಕ ತನ್ನ ಅಭಿಯಾನ ಆರಂಭಿಸಿದ ಟೀಮ್ ಇಂಡಿಯಾ - ಇಂಟ್ರಾ ಸ್ಕ್ವಾಡ್ ಪಂದ್ಯ

ಶುಕ್ರವಾರ ನಡೆದ ಅಭ್ಯಾಸ ಪಂದ್ಯದ ವಿಡಿಯೋವನ್ನು ಶನಿವಾರ ಬಿಸಿಸಿಐ ತನ್ನ ಸಾಮಾಜಿಕ ಜಾಲಾತಾಣಗಳಲ್ಲಿ ಬಿಡುಗಡೆ ಮಾಡಿಕೊಂಡಿದೆ. ಈ ವಿಡಿಯೋದಲ್ಲಿ ಭಾರತ ತಂಡದನ ನಾಯಕ ವಿರಾಟ್ ಕೊಹ್ಲಿ, ಶುಬ್ಮನ್​ ಗಿಲ್ ​ಬ್ಯಾಟಿಂಗ್ ಮಾಡುತ್ತಿರುವುದು ಮತ್ತು ವಿಕೆಟ್ ಕೀಪರ್ ರಿಷಭ್ ಪಂತ್ ಆಕರ್ಷಕ ಸಿಕ್ಸರ್​ ಬಾರಿಸಿದ್ದನ್ನು ವಿಡಿಯೋದಲ್ಲಿ ಕಾಣ ಬಹುದಾಗಿದೆ.

ಭಾರತ ಅಭ್ಯಾಸ ಪಂದ್ಯ
ಭಾರತ ಅಭ್ಯಾಸ ಪಂದ್ಯ
author img

By

Published : Jun 12, 2021, 7:04 PM IST

ಸೌತಾಂಪ್ಟನ್​: ಇಂಗ್ಲೆಂಡ್ ಪ್ರವಾಸ ಕೈಗೊಂಡಿರುವ ಭಾರತ ತಂಡ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ಗೂ ಮುನ್ನ ತಮ್ಮಲ್ಲೇ ಎರಡು ತಂಡಗಳನ್ನು ಮಾಡಿಕೊಂಡು ಇಂದಿನಿಂದ ಅಭ್ಯಾಸ ಆರಂಭಿಸಿದೆ. 10 ದಿನಗಳ ಕ್ವಾರಂಟೈನ್​ನಲ್ಲಿರುವ ಕೊಹ್ಲಿ ಪಡೆದ ಹೋಟೆಲ್​ಗೆ ಹತ್ತಿರ ಇರುವ ಹ್ಯಾಂಪ್​​ಷೈರ್​ ಬೌಲ್​ ಮೈದಾನದಲ್ಲಿ ಅಭ್ಯಾಸ ಪಂದ್ಯವನ್ನಾಡಿದೆ.

ಶುಕ್ರವಾರ ನಡೆದ ಅಭ್ಯಾಸ ಪಂದ್ಯದ ವಿಡಿಯೋವನ್ನು ಶನಿವಾರ ಬಿಸಿಸಿಐ ತನ್ನ ಸಾಮಾಜಿಕ ಜಾಲಾತಾಣಗಳಲ್ಲಿ ಬಿಡುಗಡೆ ಮಾಡಿಕೊಂಡಿದೆ. ಈ ವಿಡಿಯೋದಲ್ಲಿ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ, ಶುಬ್ಮನ್​ ಗಿಲ್ ​ಬ್ಯಾಟಿಂಗ್ ಮಾಡುತ್ತಿರುವುದು ಮತ್ತು ವಿಕೆಟ್ ಕೀಪರ್ ರಿಷಭ್ ಪಂತ್ ಆಕರ್ಷಕ ಸಿಕ್ಸರ್​ ಬಾರಿಸಿದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ.

ವೇಗಿಗಳಾದ ಜಸ್ಪ್ರೀತ್ ಬುಮ್ರಾ, ಇಶಾಂತ್ ಶರ್ಮಾ, ಮೊಹಮ್ಮದ್ ಶಮಿ ಮತ್ತು ಸಿರಾಜ್ ಬೌಲಿಂಗ್ ಮಾಡುತ್ತಿರುವುದು ಕಂಡು ಬಂದಿದೆ. ಹೊಸ ಬೌಲರ್​ ಅರ್ಜಾನ್ ನಾಗ್ವಸ್ವಾಲ್ಲ ಕೂಡ ಭಾರತೀಯ ಬಳಗದಲ್ಲಿ ಕಾಣಿಸಿಕೊಂಡಿದ್ದಾರೆ. ರಿಷಭ್ ಪಂತ್ ಬ್ಯಾಟ್ ಎತ್ತಿ ಸಂಭ್ರಮಿಸುವ ಝಲಕ್ ಕೂಡ ಇದೆಯಾದರೂ ಈ ಪಂದ್ಯದ ಸ್ಕೋರ್​ ಕಾರ್ಡ್​ನ್ನು ಬಿಸಿಸಿಐ ಹಂಚಿಕೊಂಡಿಲ್ಲ.

ಭಾರತ ತಂಡ ಮೂರುವರೆ ತಿಂಗಳು ಇಂಗ್ಲೆಂಡ್​ ಪ್ರವಾಸದಲ್ಲಿ ಜೂನ್​ನಲ್ಲಿ ವಿಶ್ವ ಚಾಂಪಿಯನ್​ಶಿಪ್​ ಫೈನಲ್ ಮತ್ತು ಆಗಸ್ಟ್​ನಿಂದ ಸೆಪ್ಟೆಂಬರ್​ 14ರವರೆಗೆ 5 ಪಂದ್ಯಗಳ ಟೆಸ್ಟ್​ ಸರಣಿ ನಡೆಯಲಿದೆ.

ಇದನ್ನು ಓದಿ:ಆಸ್ಟ್ರೇಲಿಯಾವನ್ನು ಅವರ ನೆಲದಲ್ಲೇ ಮಣಿಸಿದ್ದು ಆತ್ಮ ವಿಶ್ವಾಸ ಹೆಚ್ಚಿಸಿದೆ: ಇಶಾಂತ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.