ರಾಂಚಿ( ಜಾರ್ಖಂಡ್) : ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಎರಡನೇ ಏಕದಿನ ಕ್ರಿಕೆಟ್ ಪಂದ್ಯಕ್ಕಾಗಿ ಎರಡೂ ತಂಡಗಳು ರಾಂಚಿ ತಲುಪಿವೆ. ನಿನ್ನೆ ನಡೆದ ಮೊದಲ ಪಂದ್ಯದಲ್ಲಿ ಭಾರತವನ್ನು ಹರಿಣಗಳು ಸೋಲಿಸಿದ್ದರು. ಮುಂದಿನ ಪಂದ್ಯ ಗೆದ್ದು ಸರಣಿ ವಶ ಪಡಿಸಿಕೊಂಡು ಟಿ20 ಸೋಲಿನ ಸೇಡು ತೀರಿಸಿ ಕೊಳ್ಳಲು ದಕ್ಷಿಣ ಆಫ್ರಿಕಾ ಕಾತರದಿಂದ ಇದೆ.
ಇತ್ತ ಶಿಖರ್ ನಾಯಕತ್ವದ ತಂಡ ಬ್ಯಾಟಿಂಗ್ನಲ್ಲಿ ಬಲಗೊಳ್ಳುವ ಅಗತ್ಯತೆ ಇದೆ. ಅಕ್ಟೋಬರ್ 9 ರಂದು ಜೆಎಸ್‌ಸಿಎ ಕ್ರೀಡಾಂಗಣದಲ್ಲಿ ಎರಡನೇ ಪಂದ್ಯ ನಡೆಯಲಿದೆ. ಇದಕ್ಕೂ ಮುನ್ನ ಶನಿವಾರ ಎರಡೂ ತಂಡಗಳು ಜೆಎಸ್‌ಸಿಎ ಕ್ರೀಡಾಂಗಣದಲ್ಲಿ ಅಭ್ಯಾಸ ನಡೆಸಲಿವೆ. ಭಾರತಕ್ಕೆ ಗೆಲ್ಲಲೇ ಬೇಕಾದ ಒತ್ತಡ ಇದ್ದು, ಶಿಖರ್ ಧವನ್ ಬೌಲಿಂಗ್ನಲ್ಲಿ ಯಾವ ರೀತಿಯ ಬದಲಾವಣೆ ಮಾಡುತ್ತಾರೆ ಎಂಬುದು ಕಾದು ನೊಡಬೇಕಿದೆ.
ಮೊದಲ ಪಂದ್ಯಕ್ಕೆ ಮಳೆ ಕಾಡಿದಂತೆ ಈ ಪಂದ್ಯಕ್ಕೂ ಅಡ್ದಿ ಆಗುವ ಆತಂಕ ಇದೆ. ಹವಾಮಾನ ಇಲಾಖೆ ಮುನ್ಸೂಚನೆಯಂತೆ 9 ರಂದು ಮಧ್ಯಾಹ್ನ ಮಳೆಯಾಗುವ ಸಂಭವ ಹೆಚ್ಚಿದೆ. ಇದಕ್ಕೆ ತಕ್ಕ ಸಿದ್ಧತೆಗಳನ್ನು ಜೆಎಸ್‌ಸಿಎ ಆಡಳಿತ ಮಂಡಳಿ ಮಾಡಿಕೊಂಡಿದೆ.
ಇದನ್ನೂ ಓದಿ : Womens Asia Cup T20 : ಪಾಕಿಸ್ತಾನಕ್ಕೆ 13 ರನ್ಗಳ ಗೆಲುವು, ಭಾರತದ ಬ್ಯಾಟಿಂಗ್ ವೈಪಲ್ಯ