ಜೋಹಾನ್ಸ್‌ಬರ್ಗ್: ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಮೂರು ಪಂದ್ಯಗಳ ಟಿ-20 ಸರಣಿ 1-1 ರಿಂದ ಸಮಬಲಗೊಂಡಿದೆ. ಎರಡನೇ ಪಂದ್ಯದಲ್ಲಿ ಹೀನಾಯವಾಗಿ ಸೋತು ಹಿನ್ನಡೆಯಲ್ಲಿದ್ದ ಭಾರತ ಮೂರನೇ ಮತ್ತು ಕೊನೆಯ ಪಂದ್ಯದಲ್ಲಿ ಕಮ್ಬ್ಯಾಕ್ ಮಾಡಿದ್ದು, ನಾಯಕ ಸೂರ್ಯಕುಮಾರ್ ಮತ್ತು ಕುಲದೀಪ್ ಯಾದವ್ ಭರ್ಜರಿ ಪ್ರದರ್ಶನದಿಂದ 106 ರನ್‌ಗಳ ಗೆಲುವು ದಾಖಲಿಸಿದೆ.
-
Kuldeep Yadav capped off his birthday with a career-best spell in Johannesburg 🙌
— ICC (@ICC) December 15, 2023 " class="align-text-top noRightClick twitterSection" data="
More ➡️ https://t.co/uPjtWlKTOz pic.twitter.com/cSqRv1GeB5
">Kuldeep Yadav capped off his birthday with a career-best spell in Johannesburg 🙌
— ICC (@ICC) December 15, 2023
More ➡️ https://t.co/uPjtWlKTOz pic.twitter.com/cSqRv1GeB5Kuldeep Yadav capped off his birthday with a career-best spell in Johannesburg 🙌
— ICC (@ICC) December 15, 2023
More ➡️ https://t.co/uPjtWlKTOz pic.twitter.com/cSqRv1GeB5
ಗುರುವಾರ (ನಿನ್ನೆ) ಜೋಹಾನ್ಸ್‌ಬರ್ಗ್‌ನ ವಾಂಡರರ್ಸ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತ ಸೂರ್ಯಕುಮಾರ್ ಯಾದವ್ ಅವರ ಶತಕದ ನೆರವಿನಿಂದ ಏಳು ವಿಕೆಟ್ ನಷ್ಟಕ್ಕೆ 201 ರನ್‌ಗಳ ಬೃಹತ್ ಮೊತ್ತ ಕಲೆಹಾಕಿತು. ಬೃಹತ್ ಮೊತ್ತ ಬೆನ್ನಟ್ಟಿದ ದಕ್ಷಿಣ ಆಫ್ರಿಕಾ ಬರ್ತಡೇ ಬಾಯ್ ಕುಲ್ದೀಪ್ ಯಾದವ್ ಮತ್ತು ಜಡೇಜಾ ಅವರ ಬೌಲಿಂಗ್ ದಾಳಿಗೆ ಸಿಲುಕಿ 13.5 ಓವರ್‌ಗಳಲ್ಲಿ ಕೇವಲ 95 ರನ್‌ಗಳಿಗೆ ಸರ್ವಪತನಕಂಡು ಭಾರತಕ್ಕೆ ಶರಣಾಯಿತು. ಈ ಪಂದ್ಯವನ್ನು ಭಾರತ ಬೃಹತ್ ಅಂತರದಿಂದ ಗೆದ್ದುಕೊಂಡಿತು. ಮೊದಲ ಪಂದ್ಯ ಮಳೆಯಿಂದಾಗಿ ರದ್ದಾಗಿತ್ತು. ಎರಡನೇ ಪಂದ್ಯವನ್ನು ದಕ್ಷಿಣ ಆಫ್ರಿಕಾ ಗೆದ್ದಿತ್ತು. ಇದೀಗ ಮೂರನೇ ಪಂದ್ಯವನ್ನು ಭಾರತ ಗೆದ್ದಿದೆ. ಈ ಮೂಲಕ ಮೂರು ಪಂದ್ಯಗಳ ಟಿ20 ಸರಣಿ ಸಮಬಲಗೊಂಡಿದೆ.
-
Kuldeep Yadav capped off his birthday with a career-best spell in Johannesburg 🙌
— ICC (@ICC) December 15, 2023 " class="align-text-top noRightClick twitterSection" data="
More ➡️ https://t.co/uPjtWlKTOz pic.twitter.com/cSqRv1GeB5
">Kuldeep Yadav capped off his birthday with a career-best spell in Johannesburg 🙌
— ICC (@ICC) December 15, 2023
More ➡️ https://t.co/uPjtWlKTOz pic.twitter.com/cSqRv1GeB5Kuldeep Yadav capped off his birthday with a career-best spell in Johannesburg 🙌
— ICC (@ICC) December 15, 2023
More ➡️ https://t.co/uPjtWlKTOz pic.twitter.com/cSqRv1GeB5
ಇದಕ್ಕೂ ಮೊದಲು ದಕ್ಷಿಣ ಆಫ್ರಿಕಾದ ನಾಯಕ ಏಡೆನ್ ಮಾರ್ಕ್‌ರಾಮ್ ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡು ಭಾರತಕ್ಕೆ ಬ್ಯಾಟಿಂಗ್ಗೆ ಆಹ್ವಾನಿಸಿದರು. ಪಂದ್ಯ ಆರಂಭದಲ್ಲಿ ಭಾರತ ಸ್ಪೋಟಕ ಪ್ರದರ್ಶನ ನೀಡಿತ್ತು. ಆರಂಭಿಕ ಜೋಡಿಗಳಾದ ಯಶಸ್ವಿ ಜೈಸ್ವಾಲ್ ಮತ್ತು ಶುಭ್ಮನ್ ಗಿಲ್ ಕೇವಲ 2.1 ಓವರ್‌ನಲ್ಲಿ 29 ರನ್ಗಳನ್ನು ಚಚ್ಚಿ ದೊಡ್ಡ ಮೊತ್ತ ಕಲೆ ಹಾಕುವ ಮುನ್ಸೂಚನೆ ನೀಡಿದ್ದರು. ಆದರೆ, ಮೂರನೇ ಓವರ್‌ನಲ್ಲಿ ಕೇಶವ್ ಮಹಾರಾಜ್ ಸತತ ಎರಡು ಎಸೆತಗಳಲ್ಲಿ ಶುಭಮನ್ ಗಿಲ್ ಮತ್ತು ತಿಲಕ್ ವರ್ಮಾರ ವಿಕೆಟ್ ಪಡೆಯುವ ಮೂಲಕ ತಂಡಕ್ಕೆ ಆಘಾತ ನೀಡಿದರು.
-
Honours shared in the T20I series after India produced a sublime all-round performance in the final match against South Africa 🔥
— ICC (@ICC) December 14, 2023 " class="align-text-top noRightClick twitterSection" data="
📝 #SAvIND: https://t.co/ytix3VV4Cb pic.twitter.com/JjbbjmzHrd
">Honours shared in the T20I series after India produced a sublime all-round performance in the final match against South Africa 🔥
— ICC (@ICC) December 14, 2023
📝 #SAvIND: https://t.co/ytix3VV4Cb pic.twitter.com/JjbbjmzHrdHonours shared in the T20I series after India produced a sublime all-round performance in the final match against South Africa 🔥
— ICC (@ICC) December 14, 2023
📝 #SAvIND: https://t.co/ytix3VV4Cb pic.twitter.com/JjbbjmzHrd
ರೋಹಿತ್ ಶರ್ಮಾ ದಾಖಲೆ ಸರಿಗಟ್ಟಿದ ಸೂರ್ಯ: ಈ ವೇಳೆ ಕ್ರೀಸ್ಗೆ ಬಂದ ಸೂರ್ಯಕುಮಾರ್ ಯಾದವ್, ಯಶಸ್ವಿ ಜೊತೆಗೂಡಿ ಜತೆಗೂಡಿ ಈ ಜೋಡಿ 112 ರನ್‌ಗಳ ಕಲೆಹಾಕಿ ಟೀಂ ಇಂಡಿಯಾ ಸ್ಕೋರ್ ಬೋರ್ಡ್ ಅನ್ನು ಹೆಚ್ಚಿಸಿದರು. ಜೈಸ್ವಾಲ್ (61) ಅಮೋಘ ಆಟವಾಡಿ ಅರ್ಧಶತಕ ಪೂರೈಸಿದರೇ, ನಾಯಕ ಸೂರ್ಯಕುಮಾರ್ ಯಾದವ್(100) ತಮ್ಮ ಟಿ-20 ಅಂತಾರಾಷ್ಟ್ರೀಯ ವೃತ್ತಿ ಬದುಕಿನ ನಾಲ್ಕನೇ ಶತಕ ದಾಖಲಿಸಿದರು. ಈ ಮೂಲಕ ರೋಹಿತ್ ಶರ್ಮಾ ಮತ್ತು ಗ್ಲೆನ್ ಮ್ಯಾಕ್ಸ್‌ವೆಲ್ ದಾಖಲೆ ಸರಿಗಟ್ಟಿದ್ದಾರೆ. ದಕ್ಷಿಣ ಆಫ್ರಿಕಾ ಪರ ಕೇಶವ್ ಮಹಾರಾಜ್ (2/26) ಮತ್ತು ಲಿಜಾದ್ ವಿಲಿಯಮ್ಸ್ (2/46) ಅಗ್ರ ಬೌಲರ್‌ಗಳಾಗಿದ್ದರು.
ಎರಡನೇ ಇನ್ನಿಂಗ್ಸ್ನಲ್ಲಿ ಬೌಲಿಂಗ್‌ನಲ್ಲೂ ಭಾರತ ಉತ್ತಮ ಆರಂಭ ಪಡೆಯಿತು. ಮೊಹಮ್ಮದ್ ಸಿರಾಜ್ ಮೊದಲ ಓವರ್ ಮೇಡನ್ ಮಾಡಿದರೆ, ಎರಡನೇ ಓವರ್‌ನಲ್ಲಿ ವೇಗಿ ಮುಖೇಶ್ ಕುಮಾರ್, ಮ್ಯಾಥ್ಯೂ ಬ್ರಿಟ್ಜ್ ವಿಕೆಟ್ ಉರುಳಿಸಿದರು. ಇದಾದ ಬಳಿಕ ಹರಿಣ ಪಡೆಗಳು ಒಬ್ಬರ ಹಿಂದೊಬ್ಬರಂತೆ ಪೆವಿಲಿಯನ್ ಪರೇಡ್ ಮಾಡಿದರು. 10 ಓವರ್ ವೇಳೆಗೆ ದಕ್ಷಿಣ ಆಫ್ರಿಕಾ 75 ರನ್‌ಗಳಿಗೆ 5 ವಿಕೆಟ್ ಕಳೆದುಕೊಂಡಿತ್ತು. ಆ ಬಳಿಕ ಕುಲದೀಪ್ ಹಾಗೂ ಜಡೇಜಾ ಬೌಲಿಂಗ್ ದಾಳಿಗೆ ಉಳಿದ 5 ವಿಕೆಟ್‌ಗಳು 20 ರನ್‌ಗಳ ಅಂತರದಲ್ಲಿ ಪತನಗೊಂಡವು. ನಾಯಕ ಐಡನ್ ಮಾರ್ಕ್ರಾಮ್ (25) ಮತ್ತು ಡೇವಿಡ್ ಮಿಲ್ಲರ್ (35) ಹೊರತು ಪಡಿಸಿ ಉಳಿದ ಆಟಗಾರರು ಎರಡಂಕಿಗಳಿಸಲು ಸಾಧ್ಯವಾಗಲಿಲ್ಲ. ಭಾರತ ಪರ ಕುಲದೀಪ್ ಯಾದವ್(5/17), ಜಡೇಜಾ (2/25) ಅಗ್ರ ಬೌಲರ್‌ಗಳಾಗಿದ್ದರು.
ಇದನ್ನೂ ಓದಿ: ಏಕೈಕ ಟೆಸ್ಟ್ : ಶುಭಾ, ಜೆಮಿಮಾ, ಯಸ್ತಿಕಾ, ದೀಪ್ತಿ ಅರ್ಧಶತಕ; ಇಂಗ್ಲೆಂಡ್ ವಿರುದ್ಧ ಭಾರತ 410/7