ETV Bharat / sports

ಮಹಿಳಾ ಟಿ20 ವಿಶ್ವಕಪ್​: ಐರ್ಲೆಂಡ್​ ವಿರುದ್ಧ ಗೆದ್ದು ಸೆಮಿಫೈನಲ್‌ಗೇರಿದ ಭಾರತ

author img

By

Published : Feb 20, 2023, 10:45 PM IST

ಐರ್ಲೆಂಡ್ ವಿರುದ್ದ ಭಾರತದ ಮಹಿಳೆಯರು 5 ರನ್​ಗಳಿಂದ ಗೆಲುವು ಸಾಧಿಸಿದರು.

ಮಹಿಳಾ ಟಿ-20 ವಿಶ್ವಕಪ್​
ಮಹಿಳಾ ಟಿ-20 ವಿಶ್ವಕಪ್​

ದಕ್ಷಿಣ ಆಫ್ರಿಕಾ: ಮಹಿಳಾ ಟಿ20 ವಿಶ್ವಕಪ್​ ಕ್ರಿಕೆಟ್​ ಟೂರ್ನಿಯ ಇಂದಿನ ಪಂದ್ಯದಲ್ಲಿ ಐರ್ಲೆಂಡ್​ ವಿರುದ್ಧ ಡಕ್ವರ್ತ್ ಲೂಯಿಸ್ (DLS) ನಿಯಮದಡಿ ಭಾರತ ತಂಡ 5 ರನ್​ಗಳಿಂದ ಜಯಗಳಿಸುವ ಮೂಲಕ ಸೆಮಿಫೈನಲ್​ಗೆ ಲಗ್ಗೆ ಇಟ್ಟಿತು. ಗ್ಕೆಬರ್ಹಾದ ಸೇಂಟ್ ಜಾರ್ಜ್ ಪಾರ್ಕ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್​ ಗೆದ್ದ ಭಾರತ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಇನ್ನಿಂಗ್ಸ್ ಆರಂಭಿಸಿದ ಭಾರತಕ್ಕೆ ಉತ್ತಮ ಆರಂಭ ದೊರೆಯಿತು.

ಭಾರತ ಇನ್ನಿಂಗ್ಸ್‌: ಓಪನರ್ ಶಫಾಲಿ ವರ್ಮಾ ಅಬ್ಬರದ ಬ್ಯಾಟಿಂಗ್​ ತೋರದಿದ್ದರೂ 24 ರನ್​ ಬಾರಿಸಿದರು. ಇನ್ನೊಂದೆಡೆ, ಸ್ಮೃತಿ ಮಂಧಾನ ಬಿರುಸಿನ ಆಟವಾಡಿ 56 ಎಸೆತಗಳಲ್ಲಿ 9 ಬೌಂಡರಿ ಹಾಗೂ 3 ಸಿಕ್ಸರ್​ ಸಿಡಿಸುವ ಮೂಲಕ 87 ರನ್​ಗಳನ್ನು ಕಲೆ ಹಾಕಿದರು. ಈ ಮೂಲಕ ತಂಡದ ಮೊತ್ತವನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು.

ಇನ್ನುಳಿದಂತೆ, ನಾಯಕಿ ಹರ್ಮನ್​ 13 ಹಾಗೂ ಜೆಮಿಮಾ ರೋಡ್ರಿಗಸ್​ 12 ಎಸೆತಗಳಲ್ಲಿ 19 ರನ್​ ಸೇರಿಸಿದರು. ಅಂತಿಮವಾಗಿ ಭಾರತ ವನಿತೆಯರ ತಂಡ 20 ಓವರ್​ಗಳಲ್ಲಿ 6 ವಿಕೆಟ್​ ನಷ್ಟಕ್ಕೆ 155 ರನ್​ ಪೇರಿಸಿತು. ಐರ್ಲೆಂಡ್​ ಪರ ಲಾರಾ ಡೆಲಾನಿ 3 ಹಾಗೂ ಓರ್ಲಾ ಪ್ರೆಂಡರ್‌ಗಾಸ್ಟ್ 2 ವಿಕೆಟ್​ ಪಡೆದರು.

ಐರ್ಲೆಂಡ್ ಇನ್ನಿಂಗ್ಸ್‌: ಗೆಲ್ಲಲು 156 ರನ್​ ಗುರಿ ಪಡೆದ ಐರ್ಲೆಂಡ್​ ಆರಂಭಿಕ ಆಘಾತ ಅನುಭವಿಸಿತು. ಮೊದಲ ಓವರ್​ನ ಮೊದಲ ಎಸೆತದಲ್ಲೇ ಅ್ಯಮಿ ಹಂಟರ್​ ರನೌಟ್​ ಆದರು. ಬಳಿಕ ಅದೇ ಓವರ್​ನ 5ನೇ ಎಸೆತದಲ್ಲಿ ಓರ್ಲಾ ಪ್ರೆಂಡರ್‌ಗಾಸ್ಟ್ ಅವರನ್ನು ಬೌಲ್ಡ್​ ಮಾಡಿದ ರೇಣುಕಾ ಸಿಂಗ್​ ಐರಿಶ್​ ತಂಡಕ್ಕೆ ಡಬಲ್​ ಆಘಾತ ನೀಡಿದರು. ಆದರೆ, ಮೂರನೇ ವಿಕೆಟ್​ಗೆ ಜೊತೆಯಾದ ಗ್ಯಾಬಿ ಲೆವಿಸ್(32 ರನ್​​, 25 ಎಸೆತ)​ ಹಾಗೂ ಲಾರಾ ಡೆಲಾನಿ(17) 53 ರನ್​ ಜೊತೆಯಾಟ ನೀಡಿದರು. 8.2ನೇ ಓವರ್​​ನಲ್ಲಿ 24 ರನ್​ ಆಗಿದ್ದಾಗ ಮಳೆ ಆರಂಭವಾಯಿತು. ಬಳಿಕ ವರುಣಾರ್ಭಟ ನಿಲ್ಲದ ಕಾರಣ ಮರಳಿ ಆಟ ಆರಂಭವಾಗಲಿಲ್ಲ.

ಡಕ್ವರ್ತ್​ ಲೂಯಿಸ್​ ನಿಯಮದ ಮೊರೆ ಹೋದ ಅಂಪೈರ್​ಗಳು ಭಾರತ ತಂಡವನ್ನು ವಿಜೇತ ಎಂದು ಘೋಷಿಸಿದರು. ನಿಯಮಾನುಸಾರ ರನ್​ ಗಳಿಕೆಯಲ್ಲಿ ಮುನ್ನಡೆಯಲ್ಲಿದ್ದ ಭಾರತ 5 ರನ್‌ಗಳ ಅಂತರದ ಜಯ ಸಾಧಿಸಿತು. ಈ ಗೆಲುವಿನೊಂದಿಗೆ ಗ್ರೂಪ್​ ಬಿ ಪಟ್ಟಿಯಲ್ಲಿ 4 ಪಂದ್ಯಗಳನ್ನು ಆಡಿರುವ ಭಾರತ ಮೂರು ಪಂದ್ಯಗಳಲ್ಲಿ ಗೆದ್ದು ಸೆಮಿಫೈನಲ್ ಪ್ರವೇಶಿಸಿತು.

ಇದನ್ನೂ ಓದಿ: 'ಕ್ರಿಕೆಟ್​ನಲ್ಲಿ ಮ್ಯಾಚ್​ ಫಿಕ್ಸಿಂಗ್​ಗಿಂತ ಬಹುದೊಡ್ಡ ಭ್ರಷ್ಟಾಚಾರವಿದೆ': ಬಿಸಿಸಿಐ ಮಾಜಿ ಅಧಿಕಾರಿ ಆರೋಪ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.