ದಂಬುಲ್ಲಾ(ಶ್ರೀಲಂಕಾ): ಭಾರತ ಮಹಿಳಾ ತಂಡದ ದಿಗ್ಗಜೆ ಮಿಥಾಲಿ ರಾಜ್ ಅವರ ನಿವೃತ್ತಿ ಘೋಷಣೆಯ ಬಳಿಕ ನಡೆದ ಶ್ರೀಲಂಕಾ ವಿರುದ್ಧದ ಸರಣಿಯ ಮೊದಲ ಟಿ20 ಪಂದ್ಯದಲ್ಲಿ ಭಾರತ ಮಹಿಳಾ ತಂಡ 34 ರನ್ಗಳ ಭರ್ಜರಿ ಗೆಲುವು ಸಾಧಿಸಿತು.
3 ಪಂದ್ಯಗಳ ಟಿ20 ಸರಣಿಗೆ ಶ್ರೀಲಂಕಾ ಪ್ರವಾಸ ಕೈಗೊಂಡಿರುವ ಭಾರತೀಯ ಆಟಗಾರ್ತಿಯರು ಮೊದಲ ಪಂದ್ಯವನ್ನು ಜಯಿಸಿ 1-0 ಅಂತರದಲ್ಲಿ ಶುಭಾರಂಭ ಮಾಡಿದ್ದಾರೆ.
ಮುಳುವಾದ ನಿಧಾನಗತಿ ಬ್ಯಾಟಿಂಗ್: ರಂಗಿರಿ ದಂಬುಲ್ಲಾ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಭಾರತ ಮಹಿಳೆಯರು ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿ 20 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 138 ರನ್ ಗಳಿಸಿದ್ದರು. ಇದಕ್ಕುತ್ತರವಾಗಿ ಶ್ರೀಲಂಕಾ ಮಹಿಳೆಯರು ನಿಧಾನಗತಿಯ ಬ್ಯಾಟಿಂಗ್ನಿಂದಾಗಿ 5 ವಿಕೆಟ್ ನಷ್ಟಕ್ಕೆ 104 ರನ್ ಗಳಿಸಲಷ್ಟೇ ಸಾಧ್ಯವಾಗಿ ಸೋಲೊಪ್ಪಿಕೊಂಡಿತು.
-
1ST WT20I. India Women Won by 34 Run(s) https://t.co/LWSbP6FWlA #SLvIND
— BCCI Women (@BCCIWomen) June 23, 2022 " class="align-text-top noRightClick twitterSection" data="
">1ST WT20I. India Women Won by 34 Run(s) https://t.co/LWSbP6FWlA #SLvIND
— BCCI Women (@BCCIWomen) June 23, 20221ST WT20I. India Women Won by 34 Run(s) https://t.co/LWSbP6FWlA #SLvIND
— BCCI Women (@BCCIWomen) June 23, 2022
ಶ್ರೀಲಂಕಾದ ಕವಿಶಾ ದಿಲ್ಹಾರಿ 47 ರನ್ ಹೋರಾಟದ ಹೊರತಾಗಿಯೂ ತಂಡ ಗೆಲುವು ಸಾಧಿಸಲು ಸಾಧ್ಯವಾಗಲಿಲ್ಲ. ಉಳಿದ ಆಟಗಾರ್ತಿಯರ ನಿಧಾನಗತಿ ಬ್ಯಾಟಿಂಗ್ ತಂಡಕ್ಕೆ ಮುಳುವಾಯಿತು. ನಾಯಕಿ ಚಮಾರಿ ಅಟ್ಟಪಟ್ಟು 19 ಎಸೆತಗಳಲ್ಲಿ 16 ರನ್ ಗಳಿಸಿದರೆ, ಹರ್ಷಿತಾ ಮದವಿ 17 ಎಸೆತ ಎದುರಿಸಿದರೂ 10 ರನ್ಗೆ ಔಟಾದರು.
ಉಳಿದ ಆಟಗಾರ್ತಿಯರು ಕೂಡ ಬ್ಯಾಟ್ ಬೀಸುವಲ್ಲಿ ವಿಫಲವಾದರು. ಭಾರತದ ಪರ ರಾಧಾ ಯಾದವ್ 2, ದೀಪ್ತಿ ಶರ್ಮಾ, ಪೂಜಾ ವಸ್ತ್ರಕಾರ್, ಶಫಾಲಿ ವರ್ಮಾ 1ವಿಕೆಟ್ ಪಡೆದು ಗೆಲುವಿನ ಶಾಸ್ತ್ರ ಮುಗಿಸಿದರು.
ಶಫಾಲಿ, ರೋಡ್ರಿಗಾಸ್ ಫೈಟ್: ಇದಕ್ಕೂ ಮುನ್ನ ಟಾಸ್ ಗೆದ್ದು ಬ್ಯಾಟ್ ಮಾಡಿದ್ದ ಭಾರತದ ಮಹಿಳೆಯರಲ್ಲಿ ಶಫಾಲಿ ವರ್ಮಾ 31, ಜೆಮಿಮೈಯ್ ರೋಡ್ರಿಗಾಸ್ರ 36 ರನ್ ಬಲದಿಂದ 138 ರನ್ಗಳ ಸಾಧಾರಣ ಮೊತ್ತ ಕಲೆಹಾಕಿತ್ತು. ಸ್ಟಾರ್ ಬ್ಯಾಟರ್ ಸ್ಮೃತಿ ಮಂದಾನಾ 1 ರನ್ಗೆ ಔಟಾಗಿ ನಿರಾಸೆ ಮೂಡಿಸಿದರು. ಸಬ್ಬಿನೇನಿ ಮೇಘನಾ ಸೊನ್ನೆ ಸುತ್ತಿದರು. ಈ ವೇಳೆ ನಾಯಕಿ ಹರ್ಮನ್ಪ್ರೀತ್ ಕೌರ್ 22 ರನ್ ಗಳಿಸಿ ತಂಡಕ್ಕೆ ನೆರವಾದರು.
ಕೊನೆಯಲ್ಲಿ ರಿಚಾ ಗೋಶ್ 11, ಪೂಜಾ ವಸ್ತ್ರಕಾರ್ 14, ದೀಪ್ತಿ ಶರ್ಮಾ 17 ರನ್ ಗಳಿಸಿದರು. ಶ್ರೀಲಂಕಾ ಪರ ಇನೋಕಾ ರಣವೀರ 3, ಒಶಾದಿ ರಣಸಿಂಘೆ 2 ಚಮಾರಿ ಅಟ್ಟುಪಟ್ಟು 1 ವಿಕೆಟ್ ಪಡೆದರು.
ಇದನ್ನೂ ಓದಿ: ನಿಂತೇ ಹೋಗಿತ್ತು ಸ್ವಿಮ್ಮರ್ ಉಸಿರು, ದೇವರಂತೆ ಬಂದು ಕಾಪಾಡಿದ ಕೋಚ್!