ETV Bharat / sports

ಶ್ರೀಲಂಕಾ ವಿರುದ್ಧ 3ನೇ ಏಕದಿನ ಪಂದ್ಯ ಗೆದ್ದು ಕ್ಲೀನ್​ ಸ್ವೀಪ್ ಸಾಧನೆ ಮಾಡಿದ ಭಾರತ - ಭಾರತ ಮಹಿಳಾ ಕ್ರಿಕೆಟ್ ತಂಡ

ಆತಿಥೇಯ ಶ್ರೀಲಂಕಾ ವಿರುದ್ಧ ನಡೆದ ಏಕದಿನ ಸರಣಿಯಲ್ಲಿ ಭಾರತ ಮಹಿಳಾ ಪಡೆ ಕ್ಲೀನ್ ಸ್ವೀಪ್ ಸಾಧನೆ ಮಾಡಿದೆ.

India women vs Sri lanka women series
India women vs Sri lanka women series
author img

By

Published : Jul 7, 2022, 5:57 PM IST

ಪಲ್ಲೆಕೆಲೆ(ಶ್ರೀಲಂಕಾ): ಆತಿಥೇಯ ಶ್ರೀಲಂಕಾ ಮಹಿಳಾ ತಂಡದ ವಿರುದ್ಧ ಇಂದು ನಡೆದ ಮೂರನೇ ಏಕದಿನ ಪಂದ್ಯದಲ್ಲಿ 39ರನ್​​ಗಳ ಅಂತರದ ಗೆಲುವು ದಾಖಲಿಸಿರುವ ಭಾರತ, ಕ್ಲೀನ್​ ಸ್ವೀಪ್​ ಸಾಧನೆ ಮಾಡಿದೆ. ಈ ಮೂಲಕ 3-0 ಅಂತರದಲ್ಲಿ ಸರಣಿ ಕೈವಶ ಮಾಡಿಕೊಂಡಿದೆ.

ಪಲ್ಲೆಕೆಲೆ ಅಂತಾರಾಷ್ಟ್ರೀಯ ಮೈದಾನದಲ್ಲಿ ನಡೆದ ಮೂರನೇ ಏಕದಿನ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತ ವನಿತೆಯರ ತಂಡ ನಿಗದಿತ 50 ಓವರ್​​​ಗಳಲ್ಲಿ 9 ವಿಕೆಟ್​ನಷ್ಟಕ್ಕೆ 255ರನ್​​ಗಳಿಕೆ ಮಾಡಿತು. ಇದನ್ನು ಬೆನ್ನತ್ತಿದ ಶ್ರೀಲಂಕಾ 216ರನ್​​ಗಳಿಗೆ ಆಲೌಟ್ ಆಗಿದೆ. ಭಾರತದ ಪರ ಶೆಫಾಲಿ ವರ್ಮಾ(49), ನಾಯಕಿ ಹರ್ಮನ್​ಪ್ರೀತ್ ಕೌರ್​​​(75), ಪೂಜಾ ವಸ್ತ್ರಕರ್​(56)ರನ್​​​ಗಳಿಕೆ ಮಾಡಿದರು.

256ರನ್​​ಗಳ ಗುರಿ ಬೆನ್ನತ್ತಿದ ಶ್ರೀಲಂಕಾ ತಂಡ ಆರಂಭದಲ್ಲೇ ವಿಕೆಟ್ ಕಳೆದುಕೊಂಡಿತು. ಇದಾದ ಬಳಿಕ ಒಂದಾದ ನಾಯಕಿ ಅಥಾಪತ್(44), ಹಸಿನಿ ಪೆರಾರಿ(39)ರನ್​​​ಗಳಿಸಿ ತಂಡಕ್ಕೆ ಆಸರೆಯಾದರು. ಆದರೆ ಇವರ ವಿಕೆಟ್ ಬೀಳುತ್ತಿದ್ದಂತೆ ಸಿಲ್ವಾ(48) ತಂಡವನ್ನ ಗೆಲುವಿನ ದಡ ಸೇರಿಸುವ ಪ್ರಯತ್ನ ಮಾಡಿದರೂ ಸಹ ಯಶಸ್ವಿಯಾಗಲಿಲ್ಲ. ಶ್ರೀಲಂಕಾ ಕೊನೆಯದಾಗಿ 47.3 ಓವರ್​​ಗಳಲ್ಲಿ 10 ವಿಕೆಟ್​ ​ನಷ್ಟಕ್ಕೆ 216ರನ್​​ಗಳಿಸಿ ಆಲೌಟ್ ಆಯಿತು.

ಇದನ್ನೂ ಓದಿರಿ: ಹೊಯ್ಸಳ ಶೂಟಿಂಗ್ ಸ್ಥಳಕ್ಕೆ ಭೇಟಿ ನೀಡಿದ ಟೀಂ ಇಂಡಿಯಾ ಕ್ರಿಕೆಟರ್​ ವೇದಾ ಕೃಷ್ಣಮೂರ್ತಿ

ಭಾರತದ ಪರ ಉತ್ತಮ ಬೌಲಿಂಗ್​ ಪ್ರದರ್ಶನ ನೀಡಿದ ರಾಜೇಶ್ವರಿ 3 ವಿಕೆಟ್​, ಮೇಘನಾ ಸಿಂಗ್, ಪೂಜಾ ತಲಾ 2 ವಿಕೆಟ್ ಕಿತ್ತರೆ ದೀಪ್ತಿ ಶರ್ಮಾ, ಕೌರ್ ಹಾಗೂ ಹರ್ಲಿನ್ ಡಿಯೊಲ್ ತಲಾ 1 ವಿಕೆಟ್ ಪಡೆದುಕೊಂಡರು. ಸರಣಿವೊಂದಕ್ಕೂ ಉತ್ತಮ ಪ್ರದರ್ಶನ ನೀಡಿದ ನಾಯಕಿ ಹರ್ಮನ್​ಪ್ರೀತ್ ಕೌರ್ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದುಕೊಂಡರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.