ಮುಂಬೈ (ಮಹಾರಾಷ್ಟ್ರ): ಆಂಗ್ಲರ ವಿರುದ್ಧದ ಕೊನೆಯ ಪಂದ್ಯದಲ್ಲಿ ಆಲ್ರೌಂಡರ್ ಪ್ರದರ್ಶನ ನೀಡದ ಹರ್ಮನ್ಪ್ರೀತ್ ಕೌರ್ ಪಡೆ ಕ್ಲೀನ್ ಸ್ವೀಪ್ನಿಂದ ತಪ್ಪಿಸಿಕೊಂಡಿತು. ಉಪನಾಯಕಿ ಸ್ಮೃತಿ ಮಂಧಾನ ಮತ್ತು ಜೆಮಿಮಾ ರಾಡ್ರಿಗಸ್ ಅವರ ಇನ್ನಿಂಗ್ಸ್ ನೆರವಿನಿಂದ ಭಾರತದ ವನಿತೆಯರು ಒಂದು ಓವರ್ ಉಳಿಸಿಕೊಂಡು ಪಂದ್ಯವನ್ನು ಜಯಿಸಿದ್ದರು.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ ತಂಡ ಶ್ರೇಯಾಂಕ ಪಾಟೀಲ್, ಸೈಕಾ ಇಶಾಕ್, ಅಮಂಜೋತ್ ಕೌರ್ ಮತ್ತು ರೇಣುಕಾ ಠಾಕೂರ್ ಸಿಂಗ್ ಅವರ ಬೌಲಿಂಗ್ನಿಂದ ದೊಡ್ಡ ಮೊತ್ತ ಗಳಿಸಲಿಲ್ಲ. ಆದರೆ ಹೀದರ್ ನೈಟ್ (52) ಅರ್ಧಶತಕ ಮತ್ತು ಆಮಿ ಜೋನ್ಸ್ (25) ಅವರ ಸಮಯೋಚಿತ ಇನ್ನಿಂಗ್ಸ್ನ ನೆರವಿನಿಂದ 20 ಓವರ್ ಅಂತ್ಯಕ್ಕೆ 10 ವಿಕೆಟ್ ನಷ್ಟಕ್ಕೆ 126 ರನ್ ಕಲೆಹಾಕಿತು.
ಈ ಗುರಿಯನ್ನು ಬೆನ್ನತ್ತಿದ ಭಾರತದ ವನಿತೆಯರಿಗೆ ಉತ್ತಮ ಆರಂಭ ಸಿಗಲಿಲ್ಲ. 6 ರನ್ ಗಳಿಸಿದ ಶಫಾಲಿ ವರ್ಮಾ ಔಟ್ ಆದರು. ಆದರೆ ಎರಡನೇ ವಿಕೆಟ್ಗೆ ಸ್ಮೃತಿ ಮಂಧಾನ ಮತ್ತು ಜೆಮಿಮಾ ರಾಡ್ರಿಗಸ್ ಅರ್ಧಶತಕದ ಜೊತೆಯಾಟ ಆಡಿ ತಂಡದ ಒತ್ತಡವನ್ನು ಕಡಿಮೆ ಮಾಡಿದರು. 33 ಬಾಲ್ ಎದುರಿಸಿದ ಅವರು 4 ಬೌಂಡರಿಯ ಸಹಾಯದಿಂದ 29 ರನ್ ಗಳಿಸಿ ವಿಕೆಟ್ ಕೊಟ್ಟರು.
-
Amanjot Kaur hits the winning runs 👏#TeamIndia win the 3rd and last T20I by 5 wickets 🥳
— BCCI Women (@BCCIWomen) December 10, 2023 ." class="align-text-top noRightClick twitterSection" data="
England win the series 2-1
Scorecard ▶️ https://t.co/k4PSsXN2T6 #INDvENG | @IDFCFIRSTBank pic.twitter.com/yNlXmiKGu7
.">Amanjot Kaur hits the winning runs 👏#TeamIndia win the 3rd and last T20I by 5 wickets 🥳
— BCCI Women (@BCCIWomen) December 10, 2023
England win the series 2-1
Scorecard ▶️ https://t.co/k4PSsXN2T6 #INDvENG | @IDFCFIRSTBank pic.twitter.com/yNlXmiKGu7
.Amanjot Kaur hits the winning runs 👏#TeamIndia win the 3rd and last T20I by 5 wickets 🥳
— BCCI Women (@BCCIWomen) December 10, 2023
England win the series 2-1
Scorecard ▶️ https://t.co/k4PSsXN2T6 #INDvENG | @IDFCFIRSTBank pic.twitter.com/yNlXmiKGu7
2 ರನ್ನಿಂದ ಅರ್ಧಶತಕ ವಂಚಿತರಾದ ಮಂಧಾನ: ಉಪನಾಯಕಿ ಮಂಧಾನ ಕಳೆದ ಎರಡು ಪಂದ್ಯದಲ್ಲಿ ಬ್ಯಾಟಿಂಗ್ನಲ್ಲಿ ಕಳಪೆ ಪ್ರದರ್ಶನ ನೀಡಿದ್ದರು. ಕೊನೆಯ ಪಂದ್ಯದಲ್ಲಿ ಎಚ್ಚರಿಕೆ ಬ್ಯಾಟಿಂಗ್ ಮಾಡಿದ ಅವರು ಒಂದಡೆ ವಿಕೆಟ್ ಕಾಯ್ದುಕೊಂಡು ಇನ್ನಿಂಗ್ಸ್ ಬೆಳೆಸಿದರು. ರಾಡ್ರಿಗಸ್ ನಂತರ ದೀಪ್ತಿ ಶರ್ಮಾ (12) ಮಂಧಾನಗೆ ಸಾಥ್ ನೀಡಿದರು. 48 ಬಾಲ್ನಲ್ಲಿ 5 ಬೌಂಡರಿ ಮತ್ತು 2 ಸಿಕ್ಸ್ನಿಂದ 48 ರನ್ ಗಳಿಸಿದ್ದ ಮಂಧಾನ ವಿಕೆಟ್ ಕೊಟ್ಟರು. 2 ರನ್ನಿಂದ 23ನೇ ಅರ್ಧಶತಕವನ್ನು ಮಿಸ್ ಮಾಡಿಕೊಂಡರು. ಆದರೆ ಅವರ ಇನ್ನಿಂಗ್ಸ್ ಪಂದ್ಯದ ಗೆಲುವಿಗೆ ಪ್ರಮುಖ ಪಾತ್ರ ವಹಿಸಿತು.
ಗೆಲುವಿನ ದಡ ಸೇರಿಸಿದ ಅಮಂಜೋತ್ ಕೌರ್: ಮಂಧಾನ ವಿಕೆಟ್ ಬಳಿಕ ರಿಚಾ ಘೋಷ್ ಸಹ ಔಟ್ ಆದರು. ನಾಯಕಿ ಕೌರ್ ಜೊತೆಗೆ ಅಮಂಜೋತ್ ಕೌರ್ ಕೊನೆಯ 11 ರನ್ಗೆ ಜೊತೆಯಾದರು. ಒಂದು ಓವರ್ ಬಾಕಿ ಇರುವಂತೆಯೇ ಇನ್ನಿಂಗ್ಸ್ ಮುಕ್ತಾಯ ಮಾಡಿದ ಅವರು ಭಾರತಕ್ಕೆ 5 ವಿಕೆಟ್ಗಳ ಗೆಲುವು ತಂದಿತ್ತರು.
ಆಂಗ್ಲರ ಪರ ಫ್ರೇಯಾ ಕೆಂಪ್ ಮತ್ತು ಸೋಫಿ ಎಕ್ಲೆಸ್ಟೋನ್ ತಲಾ 2 ವಿಕೆಟ್ ಪಡೆದರೆ, ಷಾರ್ಲೆಟ್ ಡೀನ್ ಒಂದು ವಿಕೆಟ್ ಪಡೆದರು. 4 ಓವರ್ ಬೌಲಿಂಗ್ ಮಾಡಿ ಕೇವಲ 19ರನ್ ಕೊಟ್ಟು 3 ವಿಕೆಟ್ ಕಬಳಿಸಿದ ಶ್ರೇಯಾಂಕ ಪಾಟೀಲ್ ಪಂದ್ಯ ಶ್ರೇಷ್ಠರಾದರು.
ಇದನ್ನೂ ಓದಿ: ಗುವಾಹಟಿ ಮಾಸ್ಟರ್ಸ್: ಮಹಿಳೆಯರ ಡಬಲ್ಸ್ ಪ್ರಶಸ್ತಿ ಗೆದ್ದ ಅಶ್ವಿನಿ-ತನಿಶಾ ಜೋಡಿ