ETV Bharat / sports

ಸೋಫಿ ಬೌಲಿಂಗ್​ ದಾಳಿಯೆದುರು ಶಫಾಲಿ ಅರ್ಧಶತಕ ವ್ಯರ್ಥ: ಭಾರತಕ್ಕೆ 38 ರನ್‌ಗಳ ಸೋಲು

author img

By ETV Bharat Karnataka Team

Published : Dec 6, 2023, 9:25 PM IST

Updated : Dec 6, 2023, 10:51 PM IST

ENGW vs INDW 1st T20I: ಮುಂಬೈನ ವಾಂಖೆಡೆಯಲ್ಲಿ ನಡೆದ ಇಂಗ್ಲೆಂಡ್​ ವಿರುದ್ಧದ ಟಿ20 ಸರಣಿಯ ಮೊದಲ ಪಂದ್ಯದಲ್ಲಿ ಭಾರತ 198 ರನ್‌ಗಳ ಗುರಿ ಬೇಧಿಸುವಲ್ಲಿ ವಿಫಲವಾಯಿತು.

India Women vs England Women 1st T20I
India Women vs England Women 1st T20I

ಮುಂಬೈ(ಮಹಾರಾಷ್ಟ್ರ): ಶಫಾಲಿ ವರ್ಮಾ ಅವರ ಅರ್ಧಶತಕ ಮತ್ತು ನಾಯಕಿ ಹರ್ಮನ್‌ಪ್ರೀತ್ ಕೌರ್ ಅವರ ಇನ್ನಿಂಗ್ಸ್​ ಆಂಗ್ಲ ವನಿತೆಯ ಬೌಲಿಂಗ್​ನ ಎದುರು ಗೆಲುವಿಗೆ ಸಹಕಾರಿ ಆಗಲಿಲ್ಲ. ಇಲ್ಲಿನ ವಾಂಖೆಡೆ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಭಾರತದ ವನಿತೆಯರು 20 ಓವರ್​ಗೆ 6 ವಿಕೆಟ್​ ಕಳೆದುಕೊಂಡು 159 ರನ್​ ಗಳಿಸಲಷ್ಟೇ ಶಕ್ತರಾದರು. ಹೀಗಾಗಿ ಸರಣಿಯ ಮೊದಲ ಪಂದ್ಯವನ್ನು 38 ರನ್​​ಗಳಿಂದ ತಂಡ ಕಳೆದುಕೊಂಡಿತು.

ಇಂಗ್ಲೆಂಡ್​ ವನಿತೆಯರು ನೀಡಿದ್ದ 198 ರನ್​​​ಗಳ ಬೃಹತ್​ ಗುರಿ ಬೆನ್ನತ್ತಿದ್ದ ಭಾರತ ಸ್ಮೃತಿ ಮಂಧಾನ ಮತ್ತು ಜೆಮಿಮಾ ರಾಡ್ರಿಗಸ್ ವಿಕೆಟ್‌ಗಳನ್ನು ಬೇಗನೆ ಕಳೆದುಕೊಂಡಿತು. ಇದರಿಂದ ಪವರ್​ ಪ್ಲೇ ವೇಳೆಗೆ ಜೊತೆಯಾಟ ಬಾರದೇ ದೊಡ್ಡ ಗುರಿ ಬೇಧಿಸುವಲ್ಲಿ ರನ್​ ಕೊರತೆ ಎದುರಾಯಿತು. ರನ್​ರೇಟ್​ ಒತ್ತಡ ಒಂದೆಡೆ ಹೆಚ್ಚಾದರೆ, ಇತ್ತ ಆಂಗ್ಲ ಬೌಲರ್​ಗಳ ಎಸೆತಗಳಿಗೆ ದೊಡ್ಡ ಹೊಡೆತ ಹೊಡೆಯಲು ಸಾಧ್ಯವಾಗಲಿಲ್ಲ.

ಶಫಾಲಿ ಅರ್ಧಶತಕ: ನಾಯಕಿ ಕೌರ್​ ಮತ್ತು ಶಫಾಲಿ ವರ್ಮಾ 3ನೇ ವಿಕೆಟ್​ಗೆ 40 ರನ್​ಗಳ ಜೊತೆಯಾಟ ಮಾಡಿದರು. ಆದರೆ ರನ್​ ಗತಿ ಹೆಚ್ಚಿಸುವಲ್ಲಿ ಎಡವಿದರು. ಇದು ತಂಡದ ಒತ್ತಡವನ್ನು ಹೆಚ್ಚು ಮಾಡಿತು. ಹರ್ಮನ್​ಪ್ರೀತ್​ ಜೊತೆಗೆ 40 ಮತ್ತು ರಿಚಾ ಘೋಷ್ ಜೊತೆಗೆ 40 ರನ್​ಗಳ ಪಾಲುದಾರಿಕೆ ಮಾಡಿದ ಆರಂಭಿಕ ಆಟಗಾರ್ತಿ ಶಫಾಲಿ ವರ್ಮಾ ಅರ್ಧಶತಕ ಮಾಡಿಕೊಂಡರು. ಈ ನಡುವೆ ಕೌರ್​ 26 ಮತ್ತು ಘೋಷ್​ 21 ರನ್​ ಗಳಿಸಿ ಔಟ್​ ಆಗಿದ್ದರು. ಶಫಾಲಿ 42 ಬಾಲ್​ನಲ್ಲಿ 9 ಬೌಂಡರಿ ಸಹಾಯದಿಂದ 52 ರನ್​ ಗಳಿಸಿದರು.

ಅಂತಿಮವಾಗಿ ಕನಿಕಾ ಅಹುಜಾ (15), ಪೂಜಾ ವಸ್ತ್ರಾಕರ್ ಮತ್ತು ದೀಪ್ತಿ ಶರ್ಮಾ ಗೆಲುವಿಗಾಗಿ ಹೋರಾಟ ನಡೆಸಿದರು. ಆದರೆ ಯಾವುದೇ ಫಲ ನೀಡಲಿಲ್ಲ. ಇಂಗ್ಲೆಂಡ್​ ಪರ ಸೋಫಿ ಎಕ್ಲೆಸ್ಟೋನ್ ಶಫಾಲಿ ವರ್ಮಾ, ಕೌರ್​ ಮತ್ತು ಅಹುಜಾ ಅವರ ವಿಕೆಟ್​​ ಪಡೆದರು. ಉಳಿದಂತೆ ನ್ಯಾಟ್ ಸ್ಕೈವರ್-ಬ್ರಂಟ್​​, ಫ್ರೇಯಾ ಕೆಂಪ್ ಮತ್ತು ಸಾರಾ ಗ್ಲೆನ್ ತಲಾ ಒಂದೊಂದು ವಿಕೆಟ್​ ಪಡೆದರು.

ಪ್ರಥಮ ಇನ್ನಿಂಗ್ಸ್​​: ಇದಕ್ಕೂ ಮೊದಲು ಬ್ಯಾಟ್​ ಮಾಡಿದ ಇಂಗ್ಲೆಂಡ್​ ಡೇನಿಯಲ್ ವ್ಯಾಟ್, ನ್ಯಾಟ್ ಸ್ಕೈವರ್ ಬ್ರಂಟ್ ಮತ್ತು ಆಮಿ ಜೋನ್ಸ್ ಅವರ ಅಬ್ಬರದ ಬ್ಯಾಟಿಂಗ್​ ಬಲದಿಂದ 197 ರನ್​ಗಳನ್ನು ಕಲೆಹಾಕಿತ್ತು. ಭಾರತದ ಪರ ಪಾದಾರ್ಪಣೆ ಮಾಡಿದ ಸೈಕಾ ಇಶಾಕ್ 1, ಶ್ರೇಯಾಂಕಾ ಪಾಟೀಲ್ 2 ವಿಕೆಟ್​ ಹಾಗೂ ಅನುಭವಿ ಬೌಲರ್​ ರೇಣುಕಾ ಠಾಕೂರ್ ಸಿಂಗ್ ಪ್ರಮುಖ 3 ವಿಕೆಟ್ ಪಡೆದಿದ್ದರು.

ಇದ್ನನೂ ಓದಿ: ರವಿ ಬಿಷ್ಣೋಯ್ ವಿಶ್ವದ ನಂ.1 ಟಿ20 ಬೌಲರ್!

Last Updated : Dec 6, 2023, 10:51 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.