ETV Bharat / sports

ಭಾರತೀಯ ವನಿತೆಯರ ವಿರುದ್ಧ ಆಸ್ಟ್ರೇಲಿಯಾ ಗೆಲುವು: 2-1 ರಿಂದ ಸರಣಿ ಮುನ್ನಡೆ

author img

By

Published : Dec 14, 2022, 11:01 PM IST

Updated : Dec 15, 2022, 8:12 AM IST

ಮೂರನೇ ಟಿ20 ಪಂದ್ಯದಲ್ಲಿ ಆಸ್ಟ್ರೇಲಿಯಾ ವನಿತೆಯರ ತಂಡದ ವಿರುದ್ಧ ಭಾರತ 21 ರನ್​ಗಳಿಂದ ಸೋಲು ಕಂಡಿದೆ.

india-women-vs-australia-women-australia-won-by-21-runs
ಭಾರತೀಯ ವನಿತೆಯರ ವಿರುದ್ಧ ಆಸ್ಟ್ರೇಲಿಯಾ ತಂಡಕ್ಕೆ ಗೆಲುವು: 2-1 ಅಂತರದಿಂದ ಸರಣಿ ಮುನ್ನಡೆ

ಮುಂಬೈ (ಮಹಾರಾಷ್ಟ್ರ): ಭಾರತ ವಿರುದ್ಧದ ಮೂರನೇ ಟಿ20 ಪಂದ್ಯದಲ್ಲಿ ಆಸ್ಟ್ರೇಲಿಯಾ ವನಿತೆಯರ ತಂಡ 21 ರನ್​ಗಳಿಂದ ಗೆಲುವು ಸಾಧಿಸಿದೆ. ಈ ಮೂಲಕ ಐದು ಪಂದ್ಯಗಳ ಸರಣಿಯಲ್ಲಿ ಆಸೀಸ್​ ಮಹಿಳಾ ತಂಡ 2-1 ಅಂತರದಿಂದ ಸರಣಿ ಮುನ್ನಡೆ ಸಾಧಿಸಿದೆ.

ಇಲ್ಲಿನ ಬ್ರಬೋರ್ನ್ ಮೈದಾನದಲ್ಲಿ ಟಾಸ್​ ಗೆದ್ದ ಭಾರತ ಮೊದಲು ಬೌಲಿಂಗ್​ ಆಯ್ಕೆ ಮಾಡಿಕೊಂಡಿತು. ಕೇವಲ 5 ರನ್​ಗಳಾಗುವ ಹೊತ್ತಿನ ಆಸೀಸ್‌ನ 2 ವಿಕೆಟ್​ ಉರುಳಿಸಿದ ಭಾರತ ಆರಂಭಿಕ ಆಘಾತ ನೀಡಿತು. ಆದರೆ, ಎಲ್ಲಿಸ್ ಪೆರ್ರಿ (75), ಗ್ರೇಸ್ ಹ್ಯಾರಿಸ್ (41) ಹಾಗೂ ಬೆತ್ ಮೂನಿ (30) ಉತ್ತಮ ಬ್ಯಾಟಿಂಗ್​ ನೆರವಿನಿಂದ 8 ವಿಕೆಟ್​ ನಷ್ಟಕ್ಕೆ 172 ರನ್​ಗಳ ಸವಾಲಿನ ಮೊತ್ತ ಪೇರಿಸಿದರು.

ಆರಂಭಿಕರಾಗಿ ಕ್ರೀಸ್​ಗೆ ಬಂದಿದ್ದ ನಾಯಕಿ ಅಲಿಸ್ಸಾ ಹೀಲಿ ಅವರನ್ನು ಕೇವಲ 1 ರನ್​ಗಳಿಗೆ ರೇಣುಕಾ ಸಿಂಗ್​ ಪೆವಿಲಿಯನ್​ಗೆ ಕಳುಹಿಸಿದರು. ಮೂರನೇ ಕ್ರಮಾಂಕದಲ್ಲಿ ಬಂದ ತಾಲಿಯಾ ಮೆಕ್‌ಗ್ರಾತ್ ಅವರನ್ನೂ ಕೂಡ ಅಂಜಲಿ ಸರ್ವಾಣಿ ಬೌಲ್ಡ್​ ಮಾಡುವ ಮೂಲಕ ಪೆವಿಲಿಯನ್ ದಾರಿ ತೋರಿಸಿದರು. ನಂತರ ಬಂದ ಎಲ್ಲಿಸ್ ಪೆರ್ರಿ ಮತ್ತೊಬ್ಬ ಆರಂಭಿಕ ಆಟಗಾರ್ತಿ ಬೆತ್ ಮೂನಿ ಜೊತೆಗೂಡಿ ತಂಡಕ್ಕೆ ಚೇತರಿಕೆ ನೀಡಿದರು.

ಇದನ್ನೂ ಓದಿ: ರಿಯಲ್​ ಎಸ್ಟೇಟ್​ ವ್ಯವಹಾರ ಶುರು ಮಾಡಿದ ಯುವ ಕ್ರಿಕೆಟರ್​ ಇಶಾನ್ ಕಿಶನ್

ತಂಡದ ಮೊತ್ತ 67 ರನ್​ಗಳಾಗಿದ್ದಾಗ ಬೆತ್ ಮೂನಿ, ದೇವಿಕಾ ವೈದ್ಯ ಬೌಲಿಂಗ್​ನಲ್ಲಿ ವಿಕೆಟ್​ ಒಪ್ಪಿಸಿದರು. ನಂತರ ಬಂದ ಆಶ್ಲೀ ಗಾರ್ಡ್ನರ್ 7 ರನ್​ಗೆ ಔಟಾದರು. ಈ ವೇಳೆ ಎಲ್ಲಿಸ್ ಪೆರ್ರಿ ಜೊತೆಗೂಡಿದ ಗ್ರೇಸ್ ಹ್ಯಾರಿಸ್ ಬಿರುಸಿನ ಬ್ಯಾಟ್​ ಬೀಸಿದರು. ಈ ನಡುವೆ ಕೇವಲ 47 ಬಾಲ್​ಗಳಲ್ಲಿ 9 ಬೌಂಡರಿಗಳು ಮತ್ತು 3 ಸಿಕ್ಸರ್​ಗಳೊಂದಿಗೆ 75 ರನ್​ ಸಿಡಿಸಿದ್ದ ಎಲ್ಲಿಸ್ ಪೆರ್ರಿ ಅಂಜಲಿ ಸರ್ವಾಣಿ ಬೌಲಿಂಗ್​ನಲ್ಲಿ ಔಟಾದರು.

ನಂತರದಲ್ಲಿ ಗ್ರೇಸ್ ಹ್ಯಾರಿಸ್ ಸಹ 18 ಎಸೆತಗಳಲ್ಲಿ 4 ಬೌಂಡರಿಗಳು ಮತ್ತು 3 ಸಿಕ್ಸರ್​ಗಳ ಸಮೇತ 41 ರನ್​ ಬಾರಿಸಿ ರೇಣುಕಾ ಸಿಂಗ್​ ಬೌಲಿಂಗ್​ನಲ್ಲಿ​ ಕ್ಯಾಚ್​ ಕೊಟ್ಟರು. ಬಳಿಕ ಬಂದ ಅನ್ನಾಬೆಲ್ ಸದರ್ಲ್ಯಾಂಡ್ (1) ಮತ್ತು ನಿಕೋಲಾ ಕ್ಯಾರಿ (6) ಬೇಗ ವಿಕೆಟ್​ ಒಪ್ಪಿಸಿದರು. ಆಲಾನ್​ ಕಿಂಗ್ (7*) ಹಾಗೂ ಸ್ಚುಟ್ (1*) ರನ್​ ಬಾರಿಸಿದರು.

ಇದನ್ನೂ ಓದಿ: ತಂದೆಯ ಹಾದಿಯಲ್ಲೇ ಮಗ: ಸಚಿನ್​ರಂತೆ ರಣಜಿ ಪಾದಾರ್ಪಣೆ ಪಂದ್ಯದಲ್ಲೇ ಶತಕ ಸಿಡಿಸಿದ ಅರ್ಜುನ್​

173 ರನ್​ಗಳ ಗೆಲುವಿನ ಗುರಿ ಬೆನ್ನಟ್ಟಿದ ಭಾರತೀಯ ವನಿತೆಯರು 20 ಓವರ್​​ಗಳಲ್ಲಿ 7 ವಿಕೆಟ್​ ನಷ್ಟಕ್ಕೆ 151 ರನ್​ಗಳನ್ನು ಗಳಿಸಲಷ್ಟೇ ಶಕ್ತವಾದರು. ಸ್ಟಾರ್​ ಆಟಗಾರ್ತಿ ಸ್ಮೃತಿ ಮಂಧಾನ 10 ಎಸೆತ ಎದುರಿಸಿ 1 ರನ್​ ಗಳಿಸಿ ಔಟಾಗಿ ನಿರಾಶೆ ಮೂಡಿಸಿದರು. ಶಫಾಲಿ ವರ್ಮಾ ಬಿರುಸಿದ ಬ್ಯಾಟ್​ ಬೀಸಿ ಅರ್ಧಶತಕ ಸಿಡಿಸಿದರು. 41 ಎಸೆತಗಳಲ್ಲಿ 6 ಬೌಂಡರಿ ಮತ್ತು 3 ಸಿಕ್ಸರ್​​ಗಳೊಂದಿಗೆ 52 ರನ್​ಗಳನ್ನು ಬಾರಿಸಿ ಶಫಾಲಿ ವರ್ಮಾ ಔಟಾದರು.

ಜೆಮಿಮಾ ರಾಡ್ರಿಗಸ್, ಹರ್ಮನ್‌ಪ್ರೀತ್ ಕೌರ್ ಉತ್ತಮ ಬ್ಯಾಟ್​ ಬೀಸಿದರು. 11 ಎಸೆತಗಳಲ್ಲಿ ಜೆಮಿಮಾ 3 ಬೌಂಡರಿಗಳೊಂದಿಗೆ 16 ರನ್​ ಸಿಡಿಸಿದರೂ ಹೆಚ್ಚಿನ ರನ್​ ಕಲೆ ಹಾಕಲು ಸಾಧ್ಯವಾಗಲಿಲ್ಲ. ಹರ್ಮನ್‌ಪ್ರೀತ್ ಕೂಡ 27 ಎಸತೆಗಳಲ್ಲಿ 6 ಬೌಂಡರಿಗಳೊಂದಿಗೆ 37 ರನ್​ ಸಿಡಿಸಿ ವಿಕೆಟ್​ ಒಪ್ಪಿಸಿದರು. ಅಜೇಯರಾಗಿ ಉಳಿದ ದೀಪ್ತಿ ಶರ್ಮಾ 17 ಎಸೆತಗಳಲ್ಲಿ 3 ಬೌಂಡರಿಗಳೊಂದಿಗೆ 25 ರನ್​ ಬಾರಿಸಿದರೂ ಗೆಲುವು ತಂದುಕೊಡಲು ಸಾಧ್ಯವಾಗಲಿಲ್ಲ.

ಉಳಿದಂತೆ ದೇವಿಕಾ ವೈದ್ಯ (1) ಮತ್ತು ರಿಚಾ ಘೋಷ್​ (1), ರಾಧಾ ಯಾದವ್​ (4) ಹೆಚ್ಚಿನ ರನ್​ ಗಳಿಸಲು ವಿಫಲರಾದರು. ಕೊನೆಗೆ 151 ರನ್​ಗಳನ್ನು ಮಾತ್ರ ಕಲೆ ಹಾಕಿ ಸೋಲು ಒಪ್ಪಿಕೊಳ್ಳಬೇಕಾಯಿತು.

ಇದನ್ನೂ ಓದಿ: ರಣಜಿ ಟ್ರೋಫಿ: ಚೊಚ್ಚಲ ಪಂದ್ಯದಲ್ಲೇ 9 ವಿಕೆಟ್​ ಕಿತ್ತ 16 ವರ್ಷದ ಬೌಲರ್!

Last Updated : Dec 15, 2022, 8:12 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.