ETV Bharat / sports

ಐದು ವಿಕೆಟ್​ ಕಿತ್ತ ದೀಪ್ತಿ: ಭಾರತಕ್ಕೆ 259 ರನ್​ಗಳ ಗುರಿ - Ellyse Perry

AUSW vs INDW 2nd ODI: ಮುಂಬೈನ ವಾಂಖೆಡೆ ಮೈದಾನದಲ್ಲಿ ನಡೆಯುತ್ತಿರುವ ಮಹಿಳೆಯರ ಎರಡನೇ ಏಕದಿನ ಪಂದ್ಯದಲ್ಲಿ ಆಸೀಸ್​ 259 ರನ್​ಗಳ ಗುರಿಯನ್ನು ಭಾರತಕ್ಕೆ ನೀಡಿದೆ.

AUSW vs INDW 2nd ODI
AUSW vs INDW 2nd ODI
author img

By ETV Bharat Karnataka Team

Published : Dec 30, 2023, 5:20 PM IST

Updated : Dec 30, 2023, 5:52 PM IST

ಮುಂಬೈ (ಮಹಾರಾಷ್ಟ್ರ): ಫೋಬೆ ಲಿಚ್‌ಫೀಲ್ಡ್ ಮತ್ತು ಎಲ್ಲಿಸ್ ಪೆರ್ರಿ ಅವರ ಅರ್ಧಶತಕದ ನೆರವಿನಿಂದ ಆಸ್ಟ್ರೇಲಿಯಾ ಆತಿಥೇಯ ಭಾರತದ ವಿರುದ್ಧ 2ನೇ ಏಕದಿನ ಪಂದ್ಯದಲ್ಲಿ ನಿಗದಿತ ಓವರ್​ ಅಂತ್ಯಕ್ಕೆ 8 ವಿಕೆಟ್​ ನಷ್ಟಕ್ಕೆ 258 ರನ್​ ಕಲೆ ಹಾಕಿದೆ. ದೀಪ್ತಿ ಶರ್ಮಾ 5 ವಿಕೆಟ್​ ಕಬಳಿಸಿ ಉತ್ತಮ ಆರಂಭ ಪಡೆದಿದ್ದ ಆಸೀಸ್​​ ತಂಡವನ್ನು ಬೃಹತ್​ ಮೊತ್ತ ಪೇರಿಸದಂತೆ ನಿಯಂತ್ರಿಸಿದರು.

ಇಲ್ಲಿನ ವಾಂಖೆಡೆ ಕ್ರೀಡಾಂಗಣದಲ್ಲಿ ವನಿತೆಯರ ಆಸ್ಟ್ರೇಲಿಯಾ ಮತ್ತು ಭಾರತದ ನಡುವಿನ 3 ಏಕದಿನ ಪಂದ್ಯಗಳ ಸರಣಿಯ ಎರನಡೇ ಮ್ಯಾಚ್​ ನಡೆಯುತ್ತಿದೆ. ಟಾಸ್​ ಗೆದ್ದ ಆಸೀಸ್​ ನಾಯಕಿ ಅಲಿಸ್ಸಾ ಹೀಲಿ ಮೊದಲು ಬ್ಯಾಟಿಂಗ್​ ನಿರ್ಧಾರ ಮಾಡಿದರು. 13 ರನ್​ ಗಳಿಸಿ ನಾಯಕಿ ಹಿಲಿ ಔಟ್​ ಆಗಿ ಕಾಂಗರೂ ಪಡೆಗೆ ಉತ್ತಮ ಆರಂಭಿಕ ಜೊತೆಯಾಟ ಸಿಗದಿದ್ದರೂ, ಎರಡನೇ ವಿಕೆಟ್​ಗೆ ತಂಡ ಕಮ್​ಬ್ಯಾಕ್​ ಮಾಡಿತು.

ಫೋಬೆ ಲಿಚ್‌ಫೀಲ್ಡ್ ಮತ್ತು ಎಲ್ಲಿಸ್ ಪೆರ್ರಿ ಎರಡನೇ ವಿಕೆಟ್​ಗೆ 77 ರನ್​ಗಳ ಪಾಲುದಾರಿಕೆ ಹಂಚಿಕೊಂಡದ್ದಲ್ಲದೇ ವೈಯಕ್ತಿಕ ಅರ್ಧಶತಕವನ್ನು ಪೂರೈಸಿದರು. 47 ಬಾಲ್​ ಎದುರಿಸಿದ ಪೆರ್ರಿ 5 ಬೌಂಡರಿ, 1 ಸಿಕ್ಸ್​ ನೆರವಿನಿಂದ 50 ರನ್ ಕಲೆಹಾಕಿದರು. ಅವರ ನಂತರ ಬಂದ ಬೆತ್ ಮೂನಿ (10) ಬೇಗ ವಿಕೆಟ್​ ಕೈಚೆಲ್ಲಿದರು.

ಚೊಚ್ಚಲ ವಿಕೆಟ್​ ಪಡೆದ ಶ್ರೇಯಾಂಕ: ಚೊಚ್ಚಲ ಏಕದಿನ ಅಂತಾರಾಷ್ಟ್ರೀಯ ಪಂದ್ಯವನ್ನಾಡುತ್ತಿರುವ ಶ್ರೇಯಾಂಕ ಪಾಟೀಲ್​ ಅರ್ಧಶತಕ ಗಳಿಸಿ ದೊಡ್ಡ ಮೊತ್ತ ಕಲೆಹಾಕುವತ್ತ ಸಾಗುತ್ತಿದ್ದ ಫೋಬೆ ಲಿಚ್‌ಫೀಲ್ಡ್ ಅವರನ್ನು ಔಟ್​ ಮಾಡಿದರು. ಈ ಮೂಲಕ ಪಾದಾರ್ಪಣೆ ಪಂದ್ಯದಲ್ಲೇ ಚೊಚ್ಚಲ ವಿಕೆಟ್​ ಸಾಧನೆ ಮಾಡಿದರು. ಇನ್ನಿಂಗ್ಸ್​​ನಲ್ಲಿ ಫೋಬೆ 98 ಬಾಲ್​ ಎದುರಿಸಿ 6 ಬೌಂಡರಿಯಿಂದ 63 ರನ್​ ಕಲೆಹಾಕಿದರು.

ಕೆಳ ಕ್ರಮಾಂಕದಲ್ಲಿ ಬ್ಯಾಟಿಂಗ್​ ಕುಸಿತ: ಕೆಳ ಕ್ರಮಾಂಕದಲ್ಲಿ ಯಾವುದೇ ಆಟಗಾರ್ತಿಯರು ದೊಡ್ಡ ಮೊತ್ತವನ್ನು ಕಲೆಹಾಕಲಿಲ್ಲ. ದೀಪ್ತಿ ಶರ್ಮಾ ಬ್ಯಾಟರ್​​ಗಳನ್ನು ಕಾಡಿದರು. ತಹ್ಲಿಯಾ ಮೆಕ್‌ಗ್ರಾತ್ (24), ಆಶ್ಲೀ ಗಾರ್ಡ್ನರ್ (2), ಅನ್ನಾಬೆಲ್ ಸದರ್‌ಲ್ಯಾಂಡ್ (23) ಮತ್ತು ಜಾರ್ಜಿಯಾ ವೇರ್‌ಹ್ಯಾಮ್ (22) ಸಣ್ಣ ಕೊಡುಗೆ ನೀಡಿ ಔಟ್​ ಆದರು. ಕೊನೆಯಲ್ಲಿ ಅಲಾನಾ ಕಿಂಗ್ 28 ಮತ್ತು ಕಿಮ್ ಗಾರ್ತ್ 11 ರನ್​ ಗಳಿಸಿ ಅಜೇಯವಾಗಿ ಉಳಿದರು.

ಭಾರತದ ಪರ ದೀಪ್ತಿ ಶರ್ಮಾ 10 ಓವರ್​ ಮಾಡಿ 38 ರನ್​ ಕೊಟ್ಟು 5 ವಿಕೆಟ್​ ಪಡೆದರೆ, ಸ್ನೇಹ ರಾಣಾ, ಪೂಜಾ ವಸ್ತ್ರಾಕರ್ ಮತ್ತು ಶ್ರೇಯಾಂಕಾ ಪಾಟೀಲ್ ತಲಾ ಒಂದೊಂದು ವಿಕೆಟ್​ ಕಬಳಿಸಿದ್ದಾರೆ.

ಇದನ್ನೂ ಓದಿ: ನಿಧಾನ ಗತಿ ಬೌಲಿಂಗ್​: ಡಬ್ಲ್ಯುಟಿಸಿ ಅಂಕ ಕಳೆದುಕೊಂಡ ಭಾರತ

Last Updated : Dec 30, 2023, 5:52 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.