ಮುಂಬೈ(ಮಹಾರಾಷ್ಟ್ರ): ಇಂಗ್ಲೆಂಡ್ ವಿರುದ್ಧ ಟಿ20 ಮಾದರಿಗೆ ಪಾದಾರ್ಪಣೆ ಮಾಡಿರುವ ಆಟಗಾರ್ತಿಯರಾದ ಶ್ರೇಯಾಂಕಾ ಪಾಟೀಲ್, ಸೈಕಾ ಇಶಾಕ್ ಮತ್ತು ಟಿಟಾಸ್ ಸಾಧು ಅವರೊಂದಿಗೆ ಮನ್ನತ್ ಕಶ್ಯಪ್ ಆಸ್ಟ್ರೇಲಿಯಾ ಎದುರು ಏಕದಿನ ಕ್ರಿಕೆಟ್ ಪಂದ್ಯಗಳ ಸರಣಿಗೆ ಆಯ್ಕೆಯಾಗಿದ್ದಾರೆ. ಈ ನಾಲ್ಕು ಯುವ ಆಟಗಾರ್ತಿಯರಿಗೆ ಚೊಚ್ಚಲ ಏಕದಿನ ಪಂದ್ಯಗಳನ್ನು ಆಡುವ ಅವಕಾಶ ದೊರೆತಿದೆ.
ಆಸ್ಟ್ರೇಲಿಯಾ ವಿರುದ್ಧ ಮುಂಬೈನ ವಾಂಖೆಡೆಯಲ್ಲಿ ಡಿಸೆಂಬರ್ 28, 30 ಮತ್ತು ಜನವರಿ 2ರಂದು ಮೂರು ಏಕದಿನ ಪಂದ್ಯಗಳು ನಡೆಯಲಿವೆ. ಡಿ.ವೈ.ಪಾಟೀಲ್ ಕ್ರೀಡಾಂಗಣದಲ್ಲಿ ಜ.5, 7, 9ರಂದು ಟಿ20 ಪಂದ್ಯಗಳು ಏರ್ಪಾಪಾಡಾಗಿವೆ.
-
🚨 NEWS 🚨#TeamIndia’s ODI & T20I squad against Australia announced.
— BCCI Women (@BCCIWomen) December 25, 2023 " class="align-text-top noRightClick twitterSection" data="
Details 🔽 #INDvAUS | @IDFCFIRSTBankhttps://t.co/7ZsqUFR9cf
">🚨 NEWS 🚨#TeamIndia’s ODI & T20I squad against Australia announced.
— BCCI Women (@BCCIWomen) December 25, 2023
Details 🔽 #INDvAUS | @IDFCFIRSTBankhttps://t.co/7ZsqUFR9cf🚨 NEWS 🚨#TeamIndia’s ODI & T20I squad against Australia announced.
— BCCI Women (@BCCIWomen) December 25, 2023
Details 🔽 #INDvAUS | @IDFCFIRSTBankhttps://t.co/7ZsqUFR9cf
ಆಫ್ಸ್ಪಿನ್, ಆಲ್‌ರೌಂಡರ್ ಶ್ರೇಯಾಂಕಾ ಕಳೆದ ತಿಂಗಳ ಆರಂಭದಲ್ಲಿ ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ಟಿ20ಗೆ ಪಾದಾರ್ಪಣೆ ಮಾಡಿದ್ದರು. ಮೂರನೇ ಪಂದ್ಯದಲ್ಲಿ 19 ರನ್ ಬಿಟ್ಟುಕೊಟ್ಟು 3 ವಿಕೆಟ್ ಪಡೆದರು. ಸರಣಿಯಲ್ಲಿ ಒಟ್ಟು ಐದು ವಿಕೆಟ್ ಉರುಳಿಸಿದ್ದರು. ಎಡಗೈ ಸ್ಪಿನ್ನರ್ ಸೈಕಾ ಸಹ ಅದೇ ಸರಣಿಯಲ್ಲಿ ಐದು ವಿಕೆಟ್‌ಗಳನ್ನು ಪಡೆದರು. ಕೊನೆಯ ಪಂದ್ಯದಲ್ಲಿ 22ಕ್ಕೆ 3 ವಿಕೆಟ್ ಪಡೆದಿದ್ದರು. ಈ ವರ್ಷಾರಂಭದಲ್ಲಿ ಭಾರತದಲ್ಲಿ ನಡೆದ 19 ವರ್ಷದೊಳಗಿನವರ ಮಹಿಳಾ ಟಿ20 ವಿಶ್ವಕಪ್ನಲ್ಲಿ ಟಿಟಾಸ್ ಮತ್ತು ಮನ್ನತ್ ಸ್ಥಾನ ಗಿಟ್ಟಿಸಿಕೊಂಡಿದ್ದರು. ಚೀನಾದ ಹ್ಯಾಂಗ್‌ಝೌನಲ್ಲಿ ನಡೆದ ಏಷ್ಯನ್ ಗೇಮ್ಸ್ ಪಂದ್ಯಗಳಲ್ಲಿ ಟೈಟಾಸ್ ನಾಲ್ಕು ವಿಕೆಟ್ ಪಡೆದಿದ್ದಾರೆ.
ಗಾಯಗೊಂಡಿದ್ದ ರೇಣುಕಾ ಸಿಂಗ್ ಠಾಕೂರ್ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಮತ್ತು ಟಿ20 ಸರಣಿಗೆ ಚೇತರಿಸಿಕೊಂಡು ಮರಳಿದ್ದಲ್ಲದೇ ಗೇಮ್ ಚೇಂಜಿಂಗ್ ಪ್ರದರ್ಶನ ನೀಡಿ ಕಮ್ಬ್ಯಾಕ್ ಮಾಡಿದ್ದರು. ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್‌ಗೆ ಪಾದಾರ್ಪಣೆ ಮಾಡಿದ ವಿಕೆಟ್‌ಕೀಪರ್-ಬ್ಯಾಟರ್ ರಿಚಾ ಘೋಷ್ ಏಕದಿನ ಕ್ರಿಕೆಟ್ಗೆ ಮರಳಿದ್ದಾರೆ.
ಶ್ರೇಯಾಂಕಾ, ಸೈಕಾ, ಮನ್ನತ್, ಟೈಟಾಸ್, ರೇಣುಕಾ ಮತ್ತು ರಿಚಾ ಅವರನ್ನು ಸೇರಿಸಿಕೊಂಡಿದ್ದರಿಂದ ಅನುಭವಿ ಎಡಗೈ ಸ್ಪಿನ್ನರ್ ರಾಜೇಶ್ವರಿ ಗಾಯಕ್ವಾಡ್, ಲೆಗ್ ಸ್ಪಿನ್ ಆಲ್‌ರೌಂಡರ್ ದೇವಿಕಾ ವೈದ್ಯ, ವಿಕೆಟ್ ಕೀಪರ್-ಬ್ಯಾಟರ್ ಉಮಾ ಚೆಟ್ರಿ, ಬ್ಯಾಟರ್ ಪ್ರಿಯಾ ಪುನಿಯಾ, ವೇಗಿ ಮೇಘನಾ ಸಿಂಗ್, ಮೋನಿಕಾ ಪಟೇಲ್, ಸ್ಪಿನ್ನರ್‌ಗಳಾದ ಅನುಷಾ ಬಾರೆಡ್ಡಿ ಮತ್ತು ರಾಶಿ ಕನೋಜಿಯಾ ಅವರನ್ನು ತಂಡದಿಂದ ಹೊರಗಿಡಲಾಗಿದೆ.
ಭಾರತವು ಆಸ್ಟ್ರೇಲಿಯಾ ವಿರುದ್ಧ ತವರಿನಲ್ಲಿ ಅನೇಕ ವರ್ಷಗಳ ನಂತರ ಕ್ರಿಕೆಟ್ ಸರಣಿ ಆಡುತ್ತಿದೆ. ಈ ಮೂರು ಏಕದಿನ ಪಂದ್ಯಗಳು 2025ರ ಮಹಿಳಾ ಏಕದಿನ ವಿಶ್ವಕಪ್‌ಗೆ ತಯಾರಿ ಎಂದು ಪರಿಗಣಿಸಲಾಗುತ್ತಿದೆ. ಇದೇ ಕಾರಣದಿಂದ ಹೊಸ ಮುಖಗಳಿಗೆ ತಂಡದಲ್ಲಿ ಅವಕಾಶ ನೀಡಲಾಗುತ್ತಿದೆ. ಅಲ್ಲದೇ 25ರ ವಿಶ್ವಕಪ್ ಭಾರತದಲ್ಲಿ ನಡೆಯಲಿದೆ. ಕಳೆದ ತಿಂಗಳು ಇಂಗ್ಲೆಂಡ್ ವಿರುದ್ಧ ಆಡಿರುವ ಟಿ20 ತಂಡವನ್ನು ಆಸೀಸ್ ವಿರುದ್ಧವೂ ಮುಂದುವರೆಸಲಾಗಿದೆ.
ಭಾರತ- ಏಕದಿನ ಕ್ರಿಕೆಟ್ ತಂಡ: ಹರ್ಮನ್‌ಪ್ರೀತ್ ಕೌರ್ (ನಾಯಕಿ), ಸ್ಮೃತಿ ಮಂಧಾನ, ಜೆಮಿಮಾ ರೋಡ್ರಿಗಸ್, ಶಫಾಲಿ ವರ್ಮಾ, ದೀಪ್ತಿ ಶರ್ಮಾ, ಯಾಸ್ತಿಕಾ ಭಾಟಿಯಾ (ವಿಕೆಟ್ ಕೀಪರ್), ರಿಚಾ ಘೋಷ್, ಅಮನ್‌ಜೋತ್ ಕೌರ್, ಶ್ರೇಯಾಂಕ ಪಾಟೀಲ್, ಮನ್ನತ್ ಕಶ್ಯಪ್, ಸೈಕಾ ಇಶಾಕ್, ರೇಣುಕಾ ಸಿಂಗ್ ಠಾಕೂರ್, ಟಿಟಾಸ್ ಸಾಧು, ಪೂಜಾ ವಸ್ತ್ರಾಕರ್, ಸ್ನೇಹ ರಾಣಾ, ಹರ್ಲೀನ್ ಡಿಯೋಲ್.
ಟಿ20 ತಂಡ: ಹರ್ಮನ್‌ಪ್ರೀತ್ ಕೌರ್ (ನಾಯಕಿ), ಸ್ಮೃತಿ ಮಂಧಾನ, ಜೆಮಿಮಾ ರಾಡ್ರಿಗಸ್, ಶಫಾಲಿ ವರ್ಮಾ, ದೀಪ್ತಿ ಶರ್ಮಾ, ಯಾಸ್ತಿಕಾ ಭಾಟಿಯಾ (ವಿಕೆಟ್ ಕೀಪರ್), ರಿಚಾ ಘೋಷ್, ಅಮನ್‌ಜೋತ್ ಕೌರ್, ಶ್ರೇಯಾಂಕಾ ಪಾಟೀಲ್, ಮನ್ನತ್ ಕಶ್ಯಪ್, ಸೈಕಾ ಇಶಾಕ್, ರೇಣುಕಾ ಸಿಂಗ್ ಠಾಕೂರ್, ಟಿಟಾಸ್ ಸಾಧು, ಪೂಜಾ ವಸ್ತ್ರಾಕರ್, ಕನಿಕಾ ಅಹುಜಾ, ಮಿನ್ನು ಮಣಿ.
ಇದನ್ನೂ ಓದಿ: ಹಾರ್ದಿಕ್ ಪಾಂಡ್ಯ ಬಿಕರಿಗೆ ಗುಜರಾತ್ ಟೈಟಾನ್ಸ್ಗೆ ₹100 ಕೋಟಿ ನೀಡಿತಾ ಮುಂಬೈ ಇಂಡಿಯನ್ಸ್?