ಮುಂಬೈ (ಮಹಾರಾಷ್ಟ್ರ): 9 ವರ್ಷಗಳ ನಂತರ ತವರಿನಲ್ಲಿ ವನಿತೆಯರ ಕ್ರಿಕೆಟ್ ತಂಡ ಟೆಸ್ಟ್ ಪಂದ್ಯವನ್ನಾಡಿತು. ಈ ಮ್ಯಾಚ್ನಲ್ಲಿ ಇಂಗ್ಲೆಂಡ್ ಮಹಿಳಾ ತಂಡ ಎದುರಿಸಿದ ಹರ್ಮನ್ಪ್ರೀತ್ ಪಡೆ 347 ರನ್‌ಗಳ ಗೆಲುವು ದಾಖಲಿಸುವ ಮೂಲಕ ದಾಖಲೆ ನಿರ್ಮಾಣ ಮಾಡಿದೆ. ಇದು ವಿಶ್ವ ಮಹಿಳಾ ಟೆಸ್ಟ್ ಕ್ರಿಕೆಟ್‌ನಲ್ಲಿ ರನ್‌ಗಳ ವಿಷಯದಲ್ಲಿ ಅತಿದೊಡ್ಡ ಗೆಲುವಾಗಿದೆ. ಮುಂಬೈನ ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಭಾರತ ಗೆಲುವು ಸಾಧಿಸುವ ಮೂಲಕ ಒಟ್ಟು 40 ಟೆಸ್ಟ್ ಪಂದ್ಯಗಳಲ್ಲಿ 6ನೇ ಗೆಲುವು ಸಾಧಿಸಿದೆ. ಉಳಿದ 6 ಸೋತಿದ್ದು, 17 ಡ್ರಾನಲ್ಲಿ ಅಂತ್ಯವಾದರೆ, ಒಂದು ಪಂದ್ಯ ಫಲಿತಾಂಶ ರಹಿತವಾಗಿದೆ.
-
We have just witnessed the biggest victory margin being recorded in women's Tests. Congratulations @BCCIWomen on a fabulous show. 🙌🙌 #TeamIndia https://t.co/2MVZyXStRX
— BCCI (@BCCI) December 16, 2023 " class="align-text-top noRightClick twitterSection" data="
">We have just witnessed the biggest victory margin being recorded in women's Tests. Congratulations @BCCIWomen on a fabulous show. 🙌🙌 #TeamIndia https://t.co/2MVZyXStRX
— BCCI (@BCCI) December 16, 2023We have just witnessed the biggest victory margin being recorded in women's Tests. Congratulations @BCCIWomen on a fabulous show. 🙌🙌 #TeamIndia https://t.co/2MVZyXStRX
— BCCI (@BCCI) December 16, 2023
ಇಂಗ್ಲೆಂಡ್ ವಿರುದ್ಧ ಬಲಿಷ್ಠ ಭಾರತ: ಈ ಜಯದಿಂದ ಭಾರತದ ವನಿತೆಯರು ಇಂಗ್ಲೆಂಡ್ ವಿರುದ್ಧವೇ ಮೂರನೇ ಗೆಲುವನ್ನು ದಾಖಲಿಸಿದಂತಾಗಿದೆ. ಇಂಗ್ಲೆಂಡ್ ವಿರುದ್ಧ ಒಟ್ಟು 15 ಪಂದ್ಯವಾಡಿರುವ ಭಾರತ 3 ರನ್ ಗೆದ್ದು 1 ರಲ್ಲಿ ಸೋತಿದೆ ಉಳಿದವು ಡ್ರಾನಲ್ಲಿ ಅಂತ್ಯವಾಗಿದೆ. ಆದರೆ, ಇಂಗ್ಲೆಂಡ್ ವಿರುದ್ಧ ತವರಿನಲ್ಲಿ ಭಾರತಕ್ಕೆ ಇದು ಮೊದಲ ಗೆಲುವಾಗಿದೆ. 2014ರಲ್ಲಿ ಇಂಗ್ಲೆಂಡ್ನಲ್ಲಿ ಎರಡು ಪಂದ್ಯಗಳನ್ನು ವುವೆನ್ಸ್ ಟೀಮ್ ಗೆದ್ದಿತ್ತು.
ದಾಖಲೆಯ ರನ್ ಜಯ: 25 ವರ್ಷಗಳ ಹಿಂದಿನ ದಾಖಲೆಯನ್ನು ಭಾರತ ಶನಿವಾರ ಮುರಿದಿದೆ. 1998ರಲ್ಲಿ ಪಾಕಿಸ್ತಾನವನ್ನು ಶ್ರೀಲಂಕಾ 309 ರನ್‌ಗಳಿಂದ ಸೋಲಿಸಿತ್ತು. ಇದು ವನಿತೆಯರ ಟೆಸ್ಟ್ನ ದೊಡ್ಡ ಅಂತರದ ಗೆಲುವಾಗಿತ್ತು. ಶನಿವಾರ ಭಾರತ 347 ರನ್ ಅಂತರದ ಗೆಲುವು ದಾಖಲಿಸುವ ಮೂಲಕ ಈ ದಾಖಲೆಯನ್ನು ಬ್ರೇಕ್ ಮಾಡಿದೆ.
ವನಿತೆಯರ ಟೆಸ್ಟ್ ಕ್ರಿಕೆಟ್‌ನ 5 ದೊಡ್ಡ ಗೆಲುವುಗಳು:
- ಭಾರತ vs ಇಂಗ್ಲೆಂಡ್ 2023 - 347 ರನ್ ಅಂತರದ ಗೆಲುವು.
- ಶ್ರೀಲಂಕಾ vs ಪಾಕಿಸ್ತಾನ 1998 - 309 ರನ್ ಅಂತರದ ಗೆಲುವು.
- ನ್ಯೂಜಿಲೆಂಡ್ vs ದಕ್ಷಿಣ ಆಫ್ರಿಕಾ 1972 - 188 ರನ್ ಅಂತರದ ಗೆಲುವು.
- ಆಸ್ಟ್ರೇಲಿಯ vs ಇಂಗ್ಲೆಂಡ್ 186 ರನ್ ಅಂತರದ ಗೆಲುವು.
- ಇಂಗ್ಲೆಂಡ್ vs ನ್ಯೂಜಿಲೆಂಡ್ 185 ರನ್ ಅಂತರದ ಗೆಲುವು.
-
Laughter, banter & joy! ☺️ 😎
— BCCI Women (@BCCIWomen) December 16, 2023 " class="align-text-top noRightClick twitterSection" data="
𝗗𝗿𝗲𝘀𝘀𝗶𝗻𝗴 𝗥𝗼𝗼𝗺 𝗕𝗧𝗦 right after #TeamIndia's historic Test win over England 👏 👏
𝗗𝗢 𝗡𝗢𝗧 𝗠𝗜𝗦𝗦 🎥 🔽 #INDvENG | @IDFCFIRSTBank pic.twitter.com/eUux8ukSNQ
">Laughter, banter & joy! ☺️ 😎
— BCCI Women (@BCCIWomen) December 16, 2023
𝗗𝗿𝗲𝘀𝘀𝗶𝗻𝗴 𝗥𝗼𝗼𝗺 𝗕𝗧𝗦 right after #TeamIndia's historic Test win over England 👏 👏
𝗗𝗢 𝗡𝗢𝗧 𝗠𝗜𝗦𝗦 🎥 🔽 #INDvENG | @IDFCFIRSTBank pic.twitter.com/eUux8ukSNQLaughter, banter & joy! ☺️ 😎
— BCCI Women (@BCCIWomen) December 16, 2023
𝗗𝗿𝗲𝘀𝘀𝗶𝗻𝗴 𝗥𝗼𝗼𝗺 𝗕𝗧𝗦 right after #TeamIndia's historic Test win over England 👏 👏
𝗗𝗢 𝗡𝗢𝗧 𝗠𝗜𝗦𝗦 🎥 🔽 #INDvENG | @IDFCFIRSTBank pic.twitter.com/eUux8ukSNQ
-
ಡ್ರೆಸ್ಸಿಂಗ್ ರೂಮ್ನಲ್ಲಿ ಸಂಭ್ರಮ: ದೊಡ್ಡ ಗೆಲುವು ಸಾಧಿಸಿದ ನಂತರ ತಂಡ, ಸಹಾಯಕ ಸಿಬ್ಬಂದಿ ಮತ್ತು ಕೋಚ್ ಸಂಭ್ರಮಿಸುತ್ತಿರುವ ವಿಡಿಯೋವನ್ನು ಬಿಸಿಸಿಐ ತನ್ನ ಎಕ್ಸ್ ಆ್ಯಪ್ ಖಾತೆಯಲ್ಲಿ ಪೋಸ್ಟ್ ಮಾಡಿಕೊಂಡಿದೆ. ವಿಡಿಯೋದಲ್ಲಿ ಮುಖ್ಯ ತರಬೇತುದಾರ ಅಮೋಲ್ ಮುಜುಂದಾರ್ ಭಾರತದ ಆಲ್‌ರೌಂಡ್ ಪ್ರದರ್ಶನಕ್ಕೆ ಪ್ರಶಂಸಿಸಿದ್ದಾರೆ. ದೀಪ್ತಿ ಶರ್ಮಾ ಅವರು ಆಲ್‌ರೌಂಡ್ ಪ್ರದರ್ಶನದ ಮೂಲಕ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಎರಡು ಇನ್ನಿಂಗ್ಸ್ನಲ್ಲಿ ಬೌಲಿಂಗ್, ಬ್ಯಾಟಿಂಗ್ ಮಾಡಿದ ಅವರು 9 ವಿಕೆಟ್ ಮತ್ತು 87 ರನ್ ಗಳಿಸಿದರು. ಈ ಪ್ರದರ್ಶನಕ್ಕಾಗಿ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ವನಿತೆಯರ ತಂಡದ ಐತಿಹಾಸಿಕ ಜಯಕ್ಕೆ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಮತ್ತು ಬಿಸಿಸಿಐ ಶುಭಕೋರಿ ಎಕ್ಸ್ ಆ್ಯಪ್ನಲ್ಲಿ ಪೋಸ್ಟ್ ಹಂಚಿಕೊಂಡಿದೆ.
-
Congratulations #TeamIndia 🇮🇳
— Jay Shah (@JayShah) December 16, 2023 " class="align-text-top noRightClick twitterSection" data="
What an epic win in the Test match against England! A true team performance that saw collective effort.
I recall conversations with @ImHarmanpreet and @mandhana_smriti on the value of the truest format for a cricketer and to see the team do well… pic.twitter.com/DjdtZVw7PW
">Congratulations #TeamIndia 🇮🇳
— Jay Shah (@JayShah) December 16, 2023
What an epic win in the Test match against England! A true team performance that saw collective effort.
I recall conversations with @ImHarmanpreet and @mandhana_smriti on the value of the truest format for a cricketer and to see the team do well… pic.twitter.com/DjdtZVw7PWCongratulations #TeamIndia 🇮🇳
— Jay Shah (@JayShah) December 16, 2023
What an epic win in the Test match against England! A true team performance that saw collective effort.
I recall conversations with @ImHarmanpreet and @mandhana_smriti on the value of the truest format for a cricketer and to see the team do well… pic.twitter.com/DjdtZVw7PW
ಇದನ್ನೂ ಓದಿ: ಶುಭಾ ಸತೀಶ್ ಬೆರಳಿಗೆ ಗಾಯ: ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ಗೆ ಅನುಮಾನ