ETV Bharat / sports

ವಿಶ್ವಕಪ್​ 2023: ಅಕ್ಟೋಬರ್​ 15 ರಂದು ಭಾರತ - ಪಾಕಿಸ್ತಾನ ಹೈವೋಲ್ಟೇಜ್​ ಪಂದ್ಯ? - ಅಕ್ಟೋಬರ್​ 5 ರಂದು ನರೇಂದ್ರ ಮೋದಿ ಕ್ರಿಡಾಂಗಣ

ವಿಶ್ವಕಪ್​ಗೆ ಇನ್ನು ದಿನಗಣನೆಗಳು ಬಾಕಿ ಇದೆ ಅಷ್ಟೇ, ಅಕ್ಟೋಬರ್​ 5 ರಂದು ನರೇಂದ್ರ ಮೋದಿ ಕ್ರಿಡಾಂಗಣದಲ್ಲಿ ಉದ್ಘಾಟನಾ ಪಂದ್ಯ ನಡೆಯಲಿದೆ.

India will take on Pakistan on October 15th, Sunday in World Cup 2023
ವಿಶ್ವಕಪ್​ 2023: ಅಕ್ಟೋಬರ್​ 15 ರಂದು ಭಾರತ - ಪಾಕಿಸ್ತಾನ ಹೈವೋಲ್ಟೇಜ್​ ಪಂದ್ಯ?
author img

By

Published : May 10, 2023, 5:53 PM IST

ಲೆಕ್ಕಾಚಾರದ ಪ್ರಕಾರ ಇನ್ನು ಐದು ತಿಂಗಳಿನಲ್ಲಿ ಭಾರತದಲ್ಲಿ ಐಸಿಸಿ ಏಕದಿನ ವಿಶ್ವಕಪ್​ ನಡೆಯಲಿದೆ. ಆದರೆ ಇನ್ನೂ ಅಂತಾರಾಷ್ಟ್ರೀಯ ಕ್ರಿಕೆಟ್‌ ಕೌನ್ಸಿಲ್‌ (ಐಸಿಸಿ) ವೇಳಾ ಪಟ್ಟಿಯನ್ನು ಬಿಡುಗಡೆ ಮಾಡಿಲ್ಲ. ಆದರೆ ಬಲ್ಲ ಮೂಲಗಳ ಮಾಹಿತಿ ಪ್ರಕಾರ ಅಹಮದಾಬಾದ್​ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಪಂದ್ಯ ಉದ್ಘಾಟನೆ ಆಗಿ, ಅದೇ ಮೈದಾನದಲ್ಲಿ ಫೈನಲ್​ ಸಹ ನಡೆಯಲಿದೆ ಎನ್ನಲಾಗಿದೆ. ಅಕ್ಟೋಬರ್ 5 ರಂದು ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್ ನಡುವೆ ಉದ್ಘಾಟನಾ ಪಂದ್ಯ ನಡೆಯಲಿದ್ದು, ನವೆಂಬರ್ 19 ರಂದು ಮೊಟೆರಾದ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಫೈನಲ್ ಪಂದ್ಯ ಜರುಗಲಿದೆ.

ಮೂಲಗಳ ಪ್ರಕಾರ, ಭಾರತದ ಆರಂಭಿಕ ಪಂದ್ಯ ಚೆನ್ನೈನಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆಯಲಿದ್ದು, ಅಕ್ಟೋಬರ್ 15 ರಂದು ಭಾನುವಾರ ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನದ ಪಂದ್ಯ ನಡೆಯಲಿದೆ. ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಶೀಘ್ರದಲ್ಲೇ ವೇಳಾಪಟ್ಟಿಯನ್ನು ಪ್ರಕಟಿಸುವ ಸಾಧ್ಯತೆ ಇದೆ. ನಡೆಯುತ್ತಿರುವ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನ ನಂತರ ಸಂಬಂಧಿಸಿದ ಎಲ್ಲರಿಂದ ಔಪಚಾರಿಕ ಅನುಮೋದನೆಯನ್ನು ಪಡೆದು ದಿನಾಂಕ ಮತ್ತು ಸ್ಥಳಗಳ ಬಗ್ಗೆ ಅಂತಿಮ ಮಾಡಲಿದೆ ಎನ್ನಲಾಗಿದೆ.

ಏಷ್ಯಾಕಪ್​ನ ಹೈಬ್ರಿಡ್​ ಮಾದರಿಗೆ ಒಪ್ಪಿಕೊಳ್ಳದಿದ್ದರೆ ವಿಶ್ವಕಪ್​ಗೆ ಪಾಕಿಸ್ತಾನ ಭಾರತಕ್ಕೆ ಪ್ರವಾಸ ಮಾಡುವುದಿಲ್ಲ ಎಂದು ಬೆದರಿಕೆ ಹಾಕಿದ್ದ ಪಾಕ್​ ಈಗ ಮಾತನ್ನು ಹಿಂಪಡೆದುಕೊಂಡಿದೆ ಎಂದು ತಿಳಿದು ಬಂದಿದೆ. ಹಾಗೇ ಏಷ್ಯಾಕಪ್​ನ್ನು ಪಾಕಿಸ್ತಾನದಲ್ಲಿ ಆಯೋಜಿಸಲು ಮಂಗಳವಾದ ಸಭೆಯಲ್ಲಿ ಶ್ರೀಲಂಕಾ ಮತ್ತು ಬಾಂಗ್ಲಾದೇಶದ ಕ್ರಿಕೆಟ್​ ಬೋರ್ಡ್​ ನಿರಾಕರಿಸಿದೆ ಎನ್ನಲಾಗಿದೆ. ಅದರಂತೆ ಯುಎಇಯಲ್ಲಿ ನಡೆಸಲು ಎರಡು ಕ್ರಿಕೆಟ್​ ಮಂಡಳಿಗಳು ಪ್ರಸ್ತಾಪಿಸಿವೆಯಂತೆ.

ಇಲ್ಲಿಯವರೆಗಿನ ತಾತ್ಕಾಲಿಕ ವೇಳಾಪಟ್ಟಿಯ ಪ್ರಕಾರ ಪಾಕಿಸ್ತಾನವು ಅಹಮದಾಬಾದ್, ಹೈದರಾಬಾದ್, ಚೆನ್ನೈ ಮತ್ತು ಬೆಂಗಳೂರಿನಲ್ಲಿ ತನ್ನ ಪಂದ್ಯಗಳನ್ನು ಆಡಲಿದೆ. ಬಿಸಿಸಿಐ ದಕ್ಷಿಣ ವಲಯದಲ್ಲಿ ಚೆನ್ನೈನೊಂದಿಗೆ ಹೆಚ್ಚಿನ ಪಾಕಿಸ್ತಾನ ಪಂದ್ಯಗಳಿಗೆ ಸ್ಥಳಗಳನ್ನು ಒದಗಿಸಿದೆ. ಕಾರಣ ಚೆನ್ನೈ ಅತ್ಯಂತ ಕ್ರೀಡಾ ಪ್ರೇಕ್ಷಕರನ್ನು ಹೊಂದಿರುವ ಶಾಂತಿಯುತ ಆತಿಥೇಯ ಕ್ರೀಡಾಂಗಣ ಎಂಬ ದಾಖಲೆಯನ್ನು ಹೊಂದಿದೆ.

ಅಹಮದಾಬಾದ್ ಮತ್ತು ಮೂರು ದಕ್ಷಿಣ ಕೇಂದ್ರಗಳ ಹೊರತಾಗಿ, ಕೋಲ್ಕತ್ತಾ, ದೆಹಲಿ, ಇಂದೋರ್, ಧರ್ಮಶಾಲಾ, ಗುವಾಹಟಿ, ರಾಜ್‌ಕೋಟ್, ರಾಯ್‌ಪುರ ಮತ್ತು ಮುಂಬೈ ಗೊತ್ತುಪಡಿಸಿದ ಸ್ಥಳಗಳಾಗಿದ್ದು, ಮೊಹಾಲಿ ಮತ್ತು ನಾಗ್ಪುರ ಪಟ್ಟಿಯಿಂದ ಹೊರಗುಳಿದಿವೆ. ಮುಂಬೈನ ವಾಂಖೆಡೆ ಸೆಮಿಫೈನಲ್ ಪಡೆಯುವ ಸಾಧ್ಯತೆ ಇದೆ. ಪ್ರತಿ ತಂಡವು ಒಂಬತ್ತು ಲೀಗ್ ಪಂದ್ಯಗಳನ್ನು ಆಡುತ್ತದೆ. ಹೀಗಾಗಿ ಪ್ರತಿ ಮೈದಾನದಲ್ಲೂ ಭಾರತ ಒಂದಾದರೂ ಪಂದ್ಯ ಆಡುವ ಸಾಧ್ಯತೆ ಇದೆ.

ಒಟ್ಟಾರೆಯಾಗಿ 10 ತಂಡಗಳು ಮತ್ತು 48 ಪಂದ್ಯಗಳು ವಿಶ್ವಕಪ್‌ನಲ್ಲಿ ಭಾರತ, ಇಂಗ್ಲೆಂಡ್, ಆಸ್ಟ್ರೇಲಿಯಾ, ನ್ಯೂಜಿಲೆಂಡ್, ಅಫ್ಘಾನಿಸ್ತಾನ, ಪಾಕಿಸ್ತಾನ ಮತ್ತು ಬಾಂಗ್ಲಾದೇಶ ಚಾಂಪಿಯನ್‌ಶಿಪ್‌ಗೆ ಅರ್ಹತೆ ಪಡೆದಿವೆ. ದಕ್ಷಿಣ ಆಫ್ರಿಕಾ ಇತ್ತೀಚೆಗೆ ನೇರ ಪ್ರವೇಶವನ್ನು ಪಡೆದುಕೊಂಡಿದೆ.

ಜೂನ್-ಜುಲೈನಲ್ಲಿ ಜಿಂಬಾಬ್ವೆಯಲ್ಲಿ ಅರ್ಹತಾ ಪಂದ್ಯಾವಳಿ ನಡೆಯಲಿದ್ದು ಮಾಜಿ ಚಾಂಪಿಯನ್ ವೆಸ್ಟ್ ಇಂಡೀಸ್ ಮತ್ತು ಶ್ರೀಲಂಕಾ ತಂಡವು ನೆದರ್ಲ್ಯಾಂಡ್ಸ್, ಐರ್ಲೆಂಡ್, ನೇಪಾಳ, ಓಮನ್, ಸ್ಕಾಟ್ಲೆಂಡ್, ಯುಎಇ ಮತ್ತು ಆತಿಥೇಯ ಜಿಂಬಾಬ್ವೆಯೊಂದಿಗೆ ಸ್ಪರ್ಧಿಸಿ ಗೆದ್ದರೆ ಪ್ರವೇಶ ಪಡೆಯಲಿವೆ.

ಇದನ್ನೂ ಓದಿ: ಚಾಂಪಿಯನ್ಸ್‌ ಟ್ರೋಫಿಗೆ ಬರುವುದಾಗಿ ಬರೆದುಕೊಟ್ಟರೆ ವಿಶ್ವಕಪ್​ಗೆ ಪಾಕ್​ ಭಾರತಕ್ಕೆ: ಪಿಸಿಬಿ ಚೌಕಾಸಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.