ETV Bharat / sports

ವಿಶ್ವಕಪ್​ಗೂ ಮುನ್ನ 5 ದ್ವಿಪಕ್ಷೀಯ ಸರಣಿ ಆಡಲಿರುವ ಭಾರತ: ಹಾರ್ದಿಕ್​ ನಾಯಕತ್ವದಲ್ಲಿ ಯುವ ಪಡೆ! - ETV Bharath Kannada news

T20 World Cup 2024: ಐಸಿಸಿ ಟಿ20 ವಿಶ್ವಕಪ್ 2024 ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ. ಟಿ20 ವಿಶ್ವಕಪ್‌ಗೂ ಮುನ್ನ ತಯಾರಿಗಾಗಿ ಟೀಂ ಇಂಡಿಯಾ 5 ದ್ವಿಪಕ್ಷೀಯ ಟಿ20 ಸರಣಿಗಳನ್ನು ಆಡಲಿದೆ. ಅವುಗಳ ವಿವರ ಇಂತಿದೆ.

T20 World Cup 2024
T20 World Cup 2024
author img

By

Published : Jul 29, 2023, 6:02 PM IST

ನವದೆಹಲಿ: ಐಸಿಸಿ ಟಿ20 ವಿಶ್ವಕಪ್ 2024ಕ್ಕೆ ಇನ್ನು ಕೇವಲ 1 ವರ್ಷಕ್ಕಿಂತ ಕಡಿಮೆ ಸಮಯ ಇದೆ. ವರದಿಯೊಂದರ ಪ್ರಕಾರ, 2024ರ ಟಿ-20 ವಿಶ್ವಕಪ್ ಜೂನ್ 4 ರಿಂದ ಜೂನ್ 30 ರವರೆಗೆ ವೆಸ್ಟ್ ಇಂಡೀಸ್ ಮತ್ತು ಯುನೈಟೆಡ್ ಸ್ಟೇಟ್ಸ್‌ನಲ್ಲಿ ಆಯೋಜಿಸಲಾಗುತ್ತದೆ. ಭಾರತ ತಂಡ ಈ ವರ್ಷದ ಕೊನೆಯಲ್ಲಿ ಏಕದಿನ ವಿಶ್ವಕಪ್​ ಆಯೋಜಿಸುತ್ತಿದೆ. ಇದರ ಜೊತೆಗೆ ಟಿ20 ವಿಶ್ವಕಪ್​ಗೆ ತಂಡವನ್ನು ಸಿದ್ಧ ಪಡಿಸಿಕೊಳ್ಳುವ ಅಗತ್ಯತೆಯೂ ಇದೆ.

  • Major updates on T20 World Cup 2024. [Espn Cricinfo]

    Date - June 4 to 30

    Host - USA & WI

    Teams - 20

    Qualified nations so far - AUS, ENG, IND, NED, NZ, PAK, SA, SL, AFG, BAN, WI, USA, IRE, PNG, SCO pic.twitter.com/7HJKdmdQ6F

    — Johns. (@CricCrazyJohns) July 29, 2023 " class="align-text-top noRightClick twitterSection" data=" ">

ಬಿಸಿಸಿಐನ ವಿಶ್ವಕಪ್​ಗೆ ಈಗಾಗಲೇ ಪ್ರಯೋಗಾತ್ಮಕವಾಗಿ ತಂಡವನ್ನು ಸಿದ್ಧಪಡಿಸುತ್ತಿದೆ. ಹಾರ್ದಿಕ್​ ನಾಯಕತ್ವದಲ್ಲಿ ಯುವ ತಂಡವನ್ನು ಭಾರತೀಯ ಕ್ರಿಕೆಟ್​ ನಿಯಂತ್ರಣ ಮಂಡಳಿ (ಬಿಸಿಸಿಐ) ಕಟ್ಟುತ್ತಿದ್ದು, 2007 ರ ಇತಿಹಾಸವನ್ನು ಮತ್ತೆ ನೋಡುವ ಬಯಕೆ ಅಭಿಮಾನಿಗಳಲ್ಲಿದೆ. ವಿಶ್ವಕಪ್​ಗೂ ಮುನ್ನ ಭಾರತ ತಂಡ ಯಾವೆಲ್ಲ ದೇಶದೊಂದಿಗೆ ದ್ವಿಪಕ್ಷೀಯ ಟಿ-20 ಪಂದ್ಯಗಳನ್ನು ಆಡಲಿದೆ ಎಂಬುದು ಈ ವರದಿಯಲ್ಲಿ ನೀಡಲಾಗಿದೆ.

ಟಿ20 ವಿಶ್ವಕಪ್ ಆರಂಭಕ್ಕೂ ಮುನ್ನ ಭಾರತ 5 ತಂಡಗಳ ವಿರುದ್ಧ ಒಟ್ಟು 19 ಟಿ-20 ಪಂದ್ಯಗಳನ್ನು ಆಡಬೇಕಿದೆ. ಈ ಸಮಯದಲ್ಲಿ, ಭಾರತವು ತವರಿನಿಂದ ಹೊರಗೆ 3 ಟಿ 20 ಸರಣಿಗಳನ್ನು ಆಡಿದರೆ, ತವರಿನಲ್ಲಿ 2 ಟಿ 20 ಸರಣಿಗಳನ್ನು ಆಡಬೇಕಾಗಿದೆ. ಈ ಅವಧಿಯಲ್ಲಿ ಭಾರತವು ವೆಸ್ಟ್ ಇಂಡೀಸ್, ಐರ್ಲೆಂಡ್ ಮತ್ತು ದಕ್ಷಿಣ ಆಫ್ರಿಕಾ ಪ್ರವಾಸಗಳನ್ನು ಮಾಡಬೇಕಾಗಿದೆ. ಅದೇ ಸಮಯದಲ್ಲಿ ಭಾರತವು ಆಸ್ಟ್ರೇಲಿಯಾ ಮತ್ತು ಅಫ್ಘಾನಿಸ್ತಾನ ವಿರುದ್ಧ ತವರಿನ ಸರಣಿಗಳನ್ನು ಆಡಲಿದೆ.

  • India's Road to the 2024 T20 World Cup

    - 5 T20is Vs West Indies (Away).
    - 3 T20is Vs Ireland (Away).
    - 5 T20is Vs Australia (Home).
    - 3 T20is Vs South Africa (Away).
    - 3 T20is Vs Afghanistan ( Home).
    - IPL 2024. pic.twitter.com/B0MTIVS3d7

    — Mufaddal Vohra (@mufaddal_vohra) July 29, 2023 " class="align-text-top noRightClick twitterSection" data=" ">

ವೆಸ್ಟ್ ಇಂಡೀಸ್ ವಿರುದ್ಧ 5 ಟಿ20 ಪಂದ್ಯಗಳ ಸರಣಿ: ಟೀಂ ಇಂಡಿಯಾ ಪ್ರಸ್ತುತ ವೆಸ್ಟ್ ಇಂಡೀಸ್ ಪ್ರವಾಸದಲ್ಲಿದ್ದು, ಆಗಸ್ಟ್ 3 ರಿಂದ ಆಗಸ್ಟ್ 13 ರವರೆಗೆ 5 ಪಂದ್ಯಗಳ ಟಿ20 ಸರಣಿ ಆಡಬೇಕಿದೆ. 2024 ರ ಟಿ20 ವಿಶ್ವಕಪ್ ಅನ್ನು ಗಮನದಲ್ಲಿಟ್ಟುಕೊಂಡು ಬಿಸಿಸಿಐ ಈ ಸರಣಿಗೆ ಹಲವು ಯುವ ಆಟಗಾರರಿಗೆ ಅವಕಾಶ ನೀಡಿದೆ. ತಂಡದ ನಾಯಕತ್ವವನ್ನು ಆಲ್​ರೌಂಡರ್​​ ಹಾರ್ದಿಕ್ ಪಾಂಡ್ಯ ಕೈಗೆ ನೀಡಲಾಗಿದೆ.

ಐರ್ಲೆಂಡ್ ವಿರುದ್ಧ 3 ಟಿ20 ಸರಣಿ: ವೆಸ್ಟ್ ಇಂಡೀಸ್ ಪ್ರವಾಸದ ನಂತರ, ಟೀಂ ಇಂಡಿಯಾ ಆಗಸ್ಟ್ 18 ರಿಂದ ಆಗಸ್ಟ್ 23 ರವರೆಗೆ ಐರ್ಲೆಂಡ್ ಪ್ರವಾಸ ಕೈಗೊಳ್ಳಲಿದೆ. ಈ ಪ್ರವಾಸದಲ್ಲಿ ಭಾರತ 3 ಟಿ20 ಪಂದ್ಯಗಳ ಸರಣಿಯನ್ನು ಆಡಬೇಕಿದೆ. ಈ ಪ್ರವಾಸದಲ್ಲಿಯೂ, ಬಿಸಿಸಿಐ ಹೊಸ ಆಟಗಾರರಿಗೆ ಆಡಲು ಅವಕಾಶ ನೀಡುತ್ತದೆ ಮತ್ತು ಪ್ರವಾಸಕ್ಕೆ ಬಿ ತಂಡವನ್ನು ಕಳುಹಿಸುತ್ತದೆ ಎನ್ನಲಾಗುತ್ತಿದೆ.

ಆಸ್ಟ್ರೇಲಿಯಾ ವಿರುದ್ಧ 5 ಟಿ20 ಸರಣಿ: ಭಾರತದಲ್ಲಿ ನಡೆಯಲಿರುವ ಐಸಿಸಿ ಏಕದಿನ ವಿಶ್ವಕಪ್ 2023 ರ ನಂತರ, ನವೆಂಬರ್ 23 ಮತ್ತು ಡಿಸೆಂಬರ್ 3 ರ ನಡುವೆ ಟೀಮ್ ಇಂಡಿಯಾ ಆಸ್ಟ್ರೇಲಿಯಾ ವಿರುದ್ಧ ತವರಿನಲ್ಲಿ 5 ಪಂದ್ಯಗಳ ಟಿ20 ಸರಣಿಯನ್ನು ಆಡಲಿದೆ.

  • Complete Schedule of Indian team till March 2024:

    3 ODI & 5 T20I vs WI.
    3 T20I vs IRE
    Asia Cup.
    3 ODI vs AUS
    World Cup
    5 T20I vs AUS
    3 T20I, 3 ODI & 2 Test vs SA
    3 T20I vs AFG
    5 Test vs ENG pic.twitter.com/ddCJt0i2hO

    — Johns. (@CricCrazyJohns) July 25, 2023 " class="align-text-top noRightClick twitterSection" data=" ">

ದಕ್ಷಿಣ ಆಫ್ರಿಕಾ ವಿರುದ್ಧ 3 ಟಿ20 ಸರಣಿ: ಡಿಸೆಂಬರ್ 2023 ರಲ್ಲಿ ಟೀಂ ಇಂಡಿಯಾ ದಕ್ಷಿಣ ಆಫ್ರಿಕಾದ ಸುದೀರ್ಘ ಪ್ರವಾಸದಲ್ಲಿರಲಿದೆ. ಅಲ್ಲಿ ಅವರು 3 ಪಂದ್ಯಗಳ ಟಿ20 ಸರಣಿಯನ್ನೂ ಆಡಬೇಕಿದೆ. ಈ ಸರಣಿಯಲ್ಲಿ 2024ರ ಟಿ20 ವಿಶ್ವಕಪ್‌ಗೆ ಮೊದಲು ಭಾರತ ತಂಡದ ಸಿದ್ಧತೆಗಳನ್ನು ಪರೀಕ್ಷಿಸಲಾಗುತ್ತದೆ.

ಅಫ್ಘಾನಿಸ್ತಾನ ವಿರುದ್ಧ 3 ಟಿ20 ಸರಣಿ: ಜನವರಿಯಲ್ಲಿ ಅಫ್ಘಾನಿಸ್ತಾನ ತಂಡ ಭಾರತಕ್ಕೆ ಭೇಟಿ ನೀಡಲಿದೆ. ಜನವರಿ 11 ರಿಂದ ಜನವರಿ 17 ರವರೆಗೆ ಭಾರತವು ಅಫ್ಘಾನಿಸ್ತಾನ ವಿರುದ್ಧ 3 ಪಂದ್ಯಗಳ ಟಿ20 ಸರಣಿಯನ್ನು ಆಡಬೇಕಾಗಿದೆ.

ಏಷ್ಯನ್​ ಗೇಮ್ಸ್​​ನಲ್ಲಿ ಹೊಸ ತಂಡ: ಏಕದಿನ ವಿಶ್ವಕಪ್​ನ ಸಮಯದಲ್ಲಿ ಏಷ್ಯನ್​ ಗೇಮ್ಸ್​​​ ನಡೆಯಲಿದ್ದು ಇದಕ್ಕೆ ಗಾಯಕ್ವಾಡ್​ ನೇತೃತ್ವದಲ್ಲಿ ಯುವ ಪಡೆಯನ್ನು ಕಳಿಸಲು ಬಿಸಿಸಿಐ ಈಗಾಗಲೇ ನಿರ್ಧರಿಸಿ ತಂಡವನ್ನೂ ಪ್ರಕಟಿಸಿದೆ. ಈ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿದ ಯುವ ಪ್ರತಿಭೆಗಳು ವಿಶ್ವಕಪ್​ ತಂಡದ ಕದ ತಟ್ಟುವ ಸಾಧ್ಯತೆ ಇದೆ.

ಇದನ್ನೂ ಓದಿ: ಮೈದಾನದಲ್ಲಿ ವಿಶ್ವಕಪ್​ ಪಂದ್ಯ ನೋಡಲು ಆಸೆಯೇ..? ಹಾಗಾದರೆ ಈ ದಿನಾಂಕದಿಂದ ನಿಮ್ಮ ಟಿಕೆಟ್​ ಕಾಯ್ದಿರಿಸಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.