ETV Bharat / sports

IND vs WI: ಭಾರತ-ವಿಂಡೀಸ್‌ 3ನೇ ಟಿ20 ಪಂದ್ಯವೂ ಒಂದೂವರೆ ಗಂಟೆ ವಿಳಂಬ! - ಈಟಿವಿ ಭಾರತ ಕನ್ನಡ

ಭಾರತ-ವೆಸ್ಟ್​ ಇಂಡೀಸ್ ತಂಡಗಳ ನಡುವಿನ ಇಂದಿನ ಚುಟುಕು ಕ್ರಿಕೆಟ್ ಪಂದ್ಯ ಕೂಡ ಒಂದೂವರೆ ಗಂಟೆ ತಡವಾಗಿ ಆರಂಭಗೊಳ್ಳಲಿದೆ ಎಂದು ಕ್ರಿಕೆಟ್ ವೆಸ್ಟ್ ಇಂಡೀಸ್ ತಿಳಿಸಿದೆ.

India vs West Indies
India vs West Indies
author img

By

Published : Aug 2, 2022, 3:03 PM IST

ವಾರ್ನರ್ ಪಾರ್ಕ್​​(ವೆಸ್ಟ್ ಇಂಡೀಸ್​): ಆತಿಥೇಯ ವೆಸ್ಟ್​ ಇಂಡೀಸ್-ಭಾರತದ ನಡುವೆ ಇಂದು ಮೂರನೇ ಟಿ20 ಪಂದ್ಯ ನಡೆಯಲಿದ್ದು, ಒಂದೂವರೆ ಗಂಟೆ ತಡವಾಗಿ ಆರಂಭಗೊಳ್ಳಲಿದೆ. ಎರಡನೇ ಟಿ20 ಪಂದ್ಯದ ರೀತಿಯಲ್ಲಿ ಈ ಪಂದ್ಯಕ್ಕೂ ಲಾಜಿಸ್ಟಿಕ್​ ಸಮಸ್ಯೆ ಎದುರಾಗಿದೆ. ರಾತ್ರಿ 8 ಗಂಟೆಯ ಬದಲಿಗೆ 9:30ಕ್ಕೆ ಪಂದ್ಯ ನಿಗದಿಯಾಗಿದೆ ಎಂದು ವೆಸ್ಟ್ ಇಂಡೀಸ್ ಕ್ರಿಕೆಟ್ ಮಂಡಳಿ ಮಾಹಿತಿ ಹಂಚಿಕೊಂಡಿದೆ.

ಉಭಯ ತಂಡಗಳ ನಡುವಿನ ನಿನ್ನೆಯ ಪಂದ್ಯವೂ ಸಹ ಮೂರು ಗಂಟೆಗಳಷ್ಟು ತಡವಾಗಿ ಶುರುವಾಗಿತ್ತು. ಇಂದಿನ ಪಂದ್ಯ ಸೇಂಟ್​ ಕಿಟ್ಸ್​​ನ ವಾರ್ನರ್​ ಪಾರ್ಕ್​​ನಲ್ಲಿ ನಡೆಯಲಿದೆ. ಮೊದಲ ಪಂದ್ಯದಲ್ಲಿ ಟೀಂ ಇಂಡಿಯಾ ಗೆಲುವು ಪಡೆದಿದ್ದು, 2ನೇ ಪಂದ್ಯದಲ್ಲಿ ಬೌಲಿಂಗ್ ಹಾಗೂ ಬ್ಯಾಟಿಂಗ್​ನಲ್ಲಿ ಸಂಘಟಿತ ಪ್ರದರ್ಶನ ನೀಡಿರುವ ವಿಂಡೀಸ್​ ಪ್ರವಾಸಿ ತಂಡಕ್ಕೆ ತಿರುಗೇಟು ನೀಡಿದೆ. ಹೀಗಾಗಿ, ಸರಣಿ 1-1 ರಲ್ಲಿ ಸಮಬಲಗೊಂಡಿದೆ. ಇಂದಿನ ಪಂದ್ಯದಲ್ಲಿ ಗೆಲುವು ದಾಖಲಿಸುವ ತಂಡ ಸರಣಿಯಲ್ಲಿ ಮುನ್ನಡೆ ಕಾಯ್ದುಕೊಳ್ಳಲಿದೆ.

ಇದನ್ನೂ ಓದಿ: IND vs WI: ಮೆಕಾಯ್​, ಕಿಂಗ್​ ಆಟಕ್ಕೆ ಮಂಡಿಯೂರಿದ ಭಾರತ.. ವಿಂಡೀಸ್​ಗೆ 5 ವಿಕೆಟ್​ ಗೆಲುವು

ಮಹತ್ವದ ಬದಲಾವಣೆ ಸಾಧ್ಯತೆ: ಎರಡನೇ ಪಂದ್ಯದಲ್ಲಿ ಸೋಲು ಕಂಡಿರುವ ಟೀಂ ಇಂಡಿಯಾ ಇಂದಿನ ಪಂದ್ಯಕ್ಕಾಗಿ ಕೆಲವು ಬದಲಾವಣೆ ಮಾಡಿಕೊಳ್ಳುವ ಸಾಧ್ಯತೆ ಇದೆ. ಮಧ್ಯಮ ಕ್ರಮಾಂಕದಲ್ಲಿ ದೀಪಕ್ ಹೂಡಾ ಹಾಗೂ ಬೌಲಿಂಗ್​ ವಿಭಾಗಕ್ಕೆ ಆವೇಶ್ ಖಾನ್​ ಬದಲಿಗೆ ಹರ್ಷಲ್ ಪಟೇಲ್​​ ಅವಕಾಶ ಗಿಟ್ಟಿಸಿಕೊಳ್ಳುವ ಸಾಧ್ಯತೆ ಇದೆ. ಆಡಿರುವ ಎರಡು ಪಂದ್ಯಗಳಲ್ಲಿ ಶ್ರೇಯಸ್ ಅಯ್ಯರ್ ವಿಫಲರಾಗಿದ್ದು, ಬೌಲಿಂಗ್​​ನಲ್ಲೂ ಆವೇಶ್ ಖಾನ್ ಹೇಳಿಕೊಳ್ಳುವಂತಹ ಪ್ರದರ್ಶನ ನೀಡಿಲ್ಲ. ಹೀಗಾಗಿ, ಆಟಗಾರರ ಬದಲಾವಣೆ ಸಾಧ್ಯತೆ ಇದೆ.

ಭಾರತ ಟಿ20 ತಂಡ: ರೋಹಿತ್ ಶರ್ಮಾ (ನಾಯಕ) , ರಿಷಬ್ ಪಂತ್ (ವಿಕೆಟ್ ಕೀಪರ್), ಸೂರ್ಯಕುಮಾರ್ ಯಾದವ್, ಶ್ರೇಯಸ್ ಅಯ್ಯರ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ದಿನೇಶ್ ಕಾರ್ತಿಕ್, ರವಿಚಂದ್ರನ್ ಅಶ್ವಿನ್, ಭುವನೇಶ್ವರ್ ಕುಮಾರ್, ಅವೇಶ್ ಖಾನ್, ಅರ್ಷದೀಪ್​ ಸಿಂಗ್, ರವಿ ಬಿಷ್ಣೋಯ್, ಸಂಜು ಸ್ಯಾಮ್ಸನ್, ಹರ್ಷಲ್ ಪಟೇಲ್, ದೀಪಕ್ ಹೂಡಾ, ಕುಲ್​ದೀಪ್ ಯಾದವ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.