ತರೊಬಾ(ವೆಸ್ಟ್ ಇಂಡೀಸ್): ಆತಿಥೇಯ ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಟಿ-20 ಪಂದ್ಯದಲ್ಲಿ ಟಾಸ್ ಸೋತ ಮೊದಲು ಬ್ಯಾಟಿಂಗ್ ನಡೆಸಿದ ಟೀಂ ಇಂಡಿಯಾ 20 ಓವರ್ಗಳಲ್ಲಿ 6 ವಿಕೆಟ್ನಷ್ಟಕ್ಕೆ 190ರನ್ಗಳಿಕೆ ಮಾಡಿದೆ. ಮಧ್ಯಮ ಕ್ರಮಾಂಕದ ಬ್ಯಾಟಿಂಗ್ ವೈಫಲ್ಯದ ಹೊರತಾಗಿ ಮಿಂಚಿದ ರೋಹಿತ್ ಶರ್ಮಾ ಹಾಗೂ ದಿನೇಶ್ ಕಾರ್ತಿಕ್ ತಂಡಕ್ಕೆ ಉತ್ತಮ ಕಾಣಿಕೆ ನೀಡಿದ್ದಾರೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಲು ಕಣಕ್ಕಿಳಿದ ಭಾರತಕ್ಕೆ ರೋಹಿತ್ ಶರ್ಮಾ(64), ಸೂರ್ಯಕುಮಾರ್ ಯಾದವ್(24) ಉತ್ತಮ ಜೊತೆಯಾಟವಾಡಿದರು. ಈ ಜೋಡಿ ಮೊದಲ ವಿಕೆಟ್ನಷ್ಟಕ್ಕೆ 44ರನ್ಗಳಿಕೆ ಮಾಡಿತು. 24ರನ್ಗಳಿಕೆ ಮಾಡಿದ್ದ ವೇಳೆ ಹೋಲ್ಡರ್ ಓವರ್ನಲ್ಲಿ ಯಾದವ್ ವಿಕೆಟ್ ಒಪ್ಪಿಸಿದರು. ಇದರ ಬೆನ್ನಲ್ಲೇ ಬಂದ ಅಯ್ಯರ್(0) ಔಟಾದರೆ, ಪಂತ್ 14ರನ್ಗಳಿಸಿ ಪೆವಿಲಿಯನ್ ಸೇರಿಕೊಂಡರು. ಇದರ ಬೆನ್ನಲ್ಲೇ ಪಾಂಡ್ಯ(1) ನಿರಾಸೆ ಮೂಡಿಸಿದರು.
-
5⃣0⃣ for @ImRo45! 👏 👏
— BCCI (@BCCI) July 29, 2022 " class="align-text-top noRightClick twitterSection" data="
A 35-ball half-century for the #TeamIndia captain! 👍 👍
Follow the match ▶️ https://t.co/qWZ7LSCVXA #WIvIND pic.twitter.com/zn67yNc6mK
">5⃣0⃣ for @ImRo45! 👏 👏
— BCCI (@BCCI) July 29, 2022
A 35-ball half-century for the #TeamIndia captain! 👍 👍
Follow the match ▶️ https://t.co/qWZ7LSCVXA #WIvIND pic.twitter.com/zn67yNc6mK5⃣0⃣ for @ImRo45! 👏 👏
— BCCI (@BCCI) July 29, 2022
A 35-ball half-century for the #TeamIndia captain! 👍 👍
Follow the match ▶️ https://t.co/qWZ7LSCVXA #WIvIND pic.twitter.com/zn67yNc6mK
ಸ್ಫೋಟಕ ಆಟವಾಡಿದ ಕಾರ್ತಿಕ್: ಮೇಲಿಂದ ಮೇಲೆ ವಿಕೆಟ್ ಕಳೆದುಕೊಂಡ ಟೀಂ ಇಂಡಿಯಾಗೆ ಕೊನೆಯದಾಗಿ ಹಿರಿಯ ಆಟಗಾರ ದಿನೇಶ್ ಕಾರ್ತಿಕ್(41) ಆಧಾರವಾದರು. ತಾವು ಎದುರಿಸಿದ 19 ಎಸೆತಗಳಲ್ಲಿ 4 ಬೌಂಡರಿ, 2 ಸಿಕ್ಸರ್ ಸೇರಿ 41ರನ್ಗಳಿಸಿ ಅಜೇಯರಾಗಿ ಉಳಿದರು. ಇವರಿಗೆ ಸಾಥ್ ನೀಡಿದ ಅಶ್ವಿನ್ ಅಜೇಯ 13ರನ್ಗಳಿಕೆ ಮಾಡಿದರು.
ಹೊಸ ದಾಖಲೆ ಬರೆದ ರೋಹಿತ್: ಟೀಂ ಇಂಡಿಯಾ ಕ್ರಿಕೆಟ್ನಲ್ಲಿ ಕ್ಯಾಪ್ಟನ್ ರೋಹಿತ್ ಶರ್ಮಾ ಹೊಸದೊಂದು ದಾಖಲೆ ಬರೆದಿದ್ದಾರೆ. ಟಿ20 ಕ್ರಿಕೆಟ್ನಲ್ಲಿ ರೋಹಿತ್ ಶರ್ಮಾ 129 ಪಂದ್ಯಗಳನ್ನಾಡಿ ಅತಿ ಹೆಚ್ಚು ರನ್ಗಳಿಕೆ ಮಾಡಿರುವ ಸಾಧನೆ ಮಾಡಿದ್ದು, ಈ ಮೂಲಕ ಮಾರ್ಟಿನ್ ಗಪ್ಟಿಲ್ ರೆಕಾರ್ಡ್ ಬ್ರೇಕ್ ಮಾಡಿದ್ದಾರೆ.
ಇದನ್ನೂ ಓದಿರಿ: ಟಿ-20 ಪಂದ್ಯ ನಡೆಯುತ್ತಿದ್ದಾಗ ಮೈದಾನದಲ್ಲಿ ಬಾಂಬ್ ಸ್ಫೋಟ.. ನಾಲ್ವರಿಗೆ ಗಾಯ
ವೆಸ್ಟ್ ಇಂಡೀಸ್ ಪರ ಜೋಸೆಪ್ 2 ವಿಕೆಟ್ ಪಡೆದರೆ, ಹೋಲ್ಡರ್, ಒಬ್ಡೆ, ಕಿಮೋ ತಲಾ 1 ವಿಕೆಟ್ ಪಡೆದುಕೊಂಡರು.