ಟ್ರಿನಿಡಾಡ್ (ವೆಸ್ಟ್ ಇಂಡೀಸ್): ಎರಡನೇ ಏಕದಿನ ಪಂದ್ಯದಲ್ಲಿ ಭಾರತದ ಸೋಲಿನ ನಂತರ, ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಅವರು ತಂಡದ ಪ್ರಯೋಗಗಳನ್ನು ಸಮರ್ಥಿಸಿಕೊಂಡಿದ್ದಾರೆ. ಏಷ್ಯಾ ಕಪ್ ಮತ್ತು ವಿಶ್ವಕಪ್ ಸಿದ್ಧತೆಗಳ ಪ್ರಯೋಗ ಅಗತ್ಯ ಎಂದಿದ್ದಾರೆ. ಆದರೆ ಇಂದಿನ ಪಂದ್ಯದಲ್ಲಿ ಟೀಮ್ ಮ್ಯಾನೇಜ್ ಮೆಂಟ್ ಮಾಡುವ ಪ್ರಯೋಗ ಸರಣಿ ನಷ್ಟಕ್ಕೆ ಕಾರಣ ಆಗಬಹುದು. ಈ ಹಿನ್ನೆಲೆಯಲ್ಲಿ ತಂಡದ ಆಯ್ಕೆಯ ಬಗ್ಗೆ ಹೆಚ್ಚಿನ ಗಮನ ನೆಟ್ಟಿದೆ.
-
The deciding ODI is tomorrow in Trinidad!🇹🇹
— Windies Cricket (@windiescricket) July 31, 2023 " class="align-text-top noRightClick twitterSection" data="
Get Tickets⬇️https://t.co/21A070Xq1G pic.twitter.com/D6MTMKFW9e
">The deciding ODI is tomorrow in Trinidad!🇹🇹
— Windies Cricket (@windiescricket) July 31, 2023
Get Tickets⬇️https://t.co/21A070Xq1G pic.twitter.com/D6MTMKFW9eThe deciding ODI is tomorrow in Trinidad!🇹🇹
— Windies Cricket (@windiescricket) July 31, 2023
Get Tickets⬇️https://t.co/21A070Xq1G pic.twitter.com/D6MTMKFW9e
ಕಿಶನ್ ಸ್ಥಾನ ಯಾವುದು?: ಮಂಗಳವಾರದ ಸರಣಿ ನಿರ್ಣಾಯಕ ಪಂದ್ಯದಲ್ಲಿ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿಗೆ ವಿಶ್ರಾಂತಿ ನೀಡುವ ಬಗ್ಗೆ ಭಾರತ ತಂಡದ ಆಡಳಿತವು ಯೋಚಿಸುವುದಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಇಶಾನ್ ಕಿಶನ್ ಅವರ ಬ್ಯಾಟಿಂಗ್ ಕ್ರಮಾಂಕವನ್ನು ಕೂಡ ಕಾದು ನೋಡಬೇಕಿದೆ. ಆರಂಭಿಕರಾಗಿ ಗಿಲ್ ಕಾಣಿಸಿಕೊಳ್ಳುತ್ತಾರ ಇಲ್ಲಾ, ಮೊದಲ ಪಂದ್ಯದಂತೆ ರೋಹಿತ್ ಸ್ಥಾನ ಬಿಟ್ಟುಕೊಡುತ್ತಾರ ಎಂಬುದನ್ನು ತಿಳಿಯಬೇಕಿದೆ.
ಮಧ್ಯಮ ಕ್ರಮಾಂಕವೂ ಗೊಂದಲ: ಮಧ್ಯಮ ಕ್ರಮಾಂಕದ ಸೂರ್ಯ ಕುಮಾರ್ ಯಾದವ್ ಮತ್ತು ಸಂಜು ಸ್ಯಾಮ್ಸನ್ ನಡುವೆ ಸ್ಪರ್ಧೆ ಇದೆ. ಒಂದು ಅವಕಾಶದಲ್ಲಿ ವಿಫಲವಾಗಿರುವ ಸ್ಯಾಮ್ಸನ್ಗೆ ಮತ್ತೆ ಸ್ಥಾನ ಸಿಗುತ್ತಾ ಇಲ್ಲಾ ಸೂರ್ಯ ಅವರಿಗೆ ಮೂರನೇ ಅವಕಾಶ ಸಿಗುತ್ತಾ ಎಂಬುದು ಪ್ರಶ್ನೆಯಾಗಿದೆ. ಸೂರ್ಯಕುಮಾರ್ ಅವರು ಎರಡೂ ಪಂದ್ಯಗಳಲ್ಲಿ ಉತ್ತಮ ಆರಂಭವನ್ನು ಪಡೆದರು. ಆದರೆ ಅವುಗಳನ್ನು ದೊಡ್ಡ ಸ್ಕೋರ್‌ಗಳಾಗಿ ಪರಿವರ್ತಿಸಲು ಸಾಧ್ಯವಾಗಲಿಲ್ಲ. ಸ್ಯಾಮ್ಸನ್ ಎರಡನೇ ಪಂದ್ಯವನ್ನಷ್ಟೇ ಆಡಿ 9 ರನ್ ಗಳಿಸಿ ಸ್ಲಿಪ್‌ನಲ್ಲಿ ಕ್ಯಾಚ್‌ಗೆ ಸಿಲುಕಿದರು. ಮಂಗಳವಾರ ಸಂಜುಗೆ ಮತ್ತೊಂದು ಅವಕಾಶ ಸಿಕ್ಕರೆ ಅದನ್ನೇ ಸದುಪಯೋಗ ಪಡಿಸಿಕೊಳ್ಳಬೇಕಾಗುತ್ತದೆ.
-
When in Trinidad 🇹🇹... 🤝#TeamIndia | #WIvIND | @DJBravo47 pic.twitter.com/dBublUKGGz
— BCCI (@BCCI) August 1, 2023 " class="align-text-top noRightClick twitterSection" data="
">When in Trinidad 🇹🇹... 🤝#TeamIndia | #WIvIND | @DJBravo47 pic.twitter.com/dBublUKGGz
— BCCI (@BCCI) August 1, 2023When in Trinidad 🇹🇹... 🤝#TeamIndia | #WIvIND | @DJBravo47 pic.twitter.com/dBublUKGGz
— BCCI (@BCCI) August 1, 2023
ಈ ವರ್ಷ ಭಾರತದಲ್ಲಿ ನಡೆಯಲಿರುವ 2023ರ ವಿಶ್ವಕಪ್ನಲ್ಲಿ ಆಡುವ ಅವಕಾಶದಿಂದ ವೆಸ್ಟ್ ಇಂಡೀಸ್ ವಂಚಿತವಾಗಿದೆ. ಅರ್ಹತಾ ಸುತ್ತಿನ ಪಂದ್ಯಗಳಲ್ಲಿ ಕಳಪೆ ಪ್ರದರ್ಶನ ನೀಡಿ ತಂಡ 10 ತಂಡಗಳ ಪಟ್ಟಿಯನ್ನು ಸೇರುವುದರಲ್ಲಿ ವಿಫಲವಾಗಿದೆ. 2006 ರಿಂದ ಎರಡೂ ತಂಡಗಳು ಪರಸ್ಪರರ ವಿರುದ್ಧ 12 ದ್ವಿಪಕ್ಷೀಯ ಏಕದಿನ ಸರಣಿಗಳನ್ನು ಆಡಿವೆ ಮತ್ತು ಪ್ರತಿ ಬಾರಿ ಭಾರತ ಗೆದ್ದಿದೆ. ಈ ಬಾರಿಯ ಸರಣಿ ಗೆದ್ದಲ್ಲಿ 13ನೇ ಪ್ರಶಸ್ತಿ ಗೆದ್ದ ದಾಖಲೆಯನ್ನು ಭಾರತ ಬರೆಯಲಿದೆ.
ಲಾರಾ ಮೈದಾನದಲ್ಲಿ ಮೊದಲ ಏಕದಿನ: ಬ್ರಿಯಾನ್ ಲಾರಾ ಸ್ಟೇಡಿಯಂನಲ್ಲಿ ಇದು ಮೊದಲ ಏಕದಿನ ಪಂದ್ಯವಾಗಿದೆ. ಈ ಮೈದಾನದಲ್ಲಿ ಇಲ್ಲಿಯವರೆಗೆ ಕೇವಲ ಒಂದು ಪುರುಷರ ಅಂತರಾಷ್ಟ್ರೀಯ ಪಂದ್ಯವನ್ನು ಮಾತ್ರ ಆಡಲಾಗಿದೆ. ಕಳೆದ ವರ್ಷ ವೆಸ್ಟ್ ಇಂಡೀಸ್ ಮತ್ತು ಭಾರತ ನಡುವಿನ ಟಿ20 ಪಂದ್ಯವನ್ನು ಭಾರತ ಗೆದ್ದಿತ್ತು. ಅದೇ ಸಮಯದಲ್ಲಿ, 23 ಲಿಸ್ಟ್ ಎ ಪಂದ್ಯಗಳಲ್ಲಿ, ಮೊದಲು ಬ್ಯಾಟಿಂಗ್ ಮಾಡಿದ ತಂಡಗಳು ಕೇವಲ ಏಳು ಬಾರಿ 250 ರ ಗಡಿ ದಾಟಿವೆ.
ಹವಾಮಾನ: ಮಂಗಳವಾರದಂದು ಬ್ರಿಯಾನ್ ಲಾರಾ ಕ್ರೀಡಾಂಗಣದ ಸುತ್ತಮುತ್ತಲಿನ ವಾತಾವರಣ ಸಾಮಾನ್ಯವಾಗಿರುತ್ತದೆ. ಈ ಪ್ರದೇಶದಲ್ಲಿ ಮೋಡ ಕವಿದ ವಾತಾವರಣ ಇರಲಿದ್ದು, ಮಳೆಯಾಗುವ ಸಾಧ್ಯತೆ ಕಡಿಮೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಅಂಕಿ ಅಂಶಗಳು ಹೀಗಿವೆ:
- ವೆಸ್ಟ್ ಇಂಡೀಸ್ ಟೀಮ್ ನಾಯಕ ಶಾಯ್ ಹೋಪ್ ಏಕದಿನ ಕ್ರಿಕೆಟ್ನಲ್ಲಿ 5000 ರನ್ ಪೂರೈಸಲು ಕೇವಲ 65 ರನ್‌ಗಳ ಅಂತರದಲ್ಲಿದ್ದಾರೆ. ಮಂಗಳವಾರ 113ನೇ ಇನ್ನಿಂಗ್ಸ್ ಆಡುತ್ತಿರುವ ಹೋಪ್ 65 ರನ್ ಗಡಿ ದಾಟಿದರೆ ಬಾಬರ್ ಅಜಮ್ ಮತ್ತು ಹಾಶಿಮ್ ಆಮ್ಲಾ 6000 ರನ್ ಪೂರೈಸಿದ ಮೂರನೇ ವೇಗದ ಬ್ಯಾಟರ್ ಎಂಬ ದಾಖಲೆ ಮಾಡಲಿದ್ದಾರೆ.
- ಇಂದಿನ ಪಂದ್ಯದಲ್ಲಿ ಕೊಹ್ಲಿ 102 ರನ್ ಗಳಿಸಿದರೆ, ಏಕದಿನದಲ್ಲಿ 13,000 ಗಡಿ ಮುಟ್ಟಿದ ಐದನೇ ಬ್ಯಾಟರ್ ಎಂಬ ರೆಕಾರ್ಡ್ ಮಾಡಲಿದ್ದಾರೆ.
- ಆಲ್ರೌಂಡರ್ ರವೀಂದ್ರ ಜಡೇಜ 6 ವಿಕೆಟ್ಗಳನ್ನು ಈ ಪಂದ್ಯದಲ್ಲಿ ಕಿತ್ತಲ್ಲಿ ಏಕದಿನದಲ್ಲಿ 200 ವಿಕೆಟ್ ಪಡೆದ ಸಾಧನೆ ಮಾಡಲಿದ್ದಾರೆ. ಜಡೇಜ 200 ವಿಕೆಟ್ ಪಡೆದಲ್ಲಿ ಕಪಿಲ್ ದೇವ್ (3783 ರನ್ ಮತ್ತು 253 ವಿಕೆಟ್) ನಂತರ 2000 ರನ್ ಮತ್ತು 200 ವಿಕೆಟ್ ಪಡೆದ ಎರಡನೇ ಭಾರತೀಯ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ.
ಸಂಭಾವ್ಯ ತಂಡಗಳು ಇಂತಿದೆ.. ವೆಸ್ಟ್ ಇಂಡೀಸ್ : ಬ್ರ್ಯಾಂಡನ್ ಕಿಂಗ್, ಕೈಲ್ ಮೇಯರ್ಸ್, ಅಲಿಕ್ ಅಥಾನಾಜ್, ಶಾಯ್ ಹೋಪ್ (ನಾಯಕ & ವಿಕೆಟ್ ಕೀಪರ್), ಶಿಮ್ರಾನ್ ಹೆಟ್ಮೆಯರ್, ಕೇಸಿ ಕಾರ್ಟಿ, ರೊಮಾರಿಯೋ ಶೆಫರ್ಡ್, ಯಾನಿಕ್ ಕರಿಯಾ, ಅಲ್ಜಾರಿ ಜೋಸೆಫ್, ಗುಡಕೆಶ್ ಮೊಟ್ಟಿ, ಜೇಡನ್ ಸೀಲ್ಸ್
ಭಾರತ: ರೋಹಿತ್ ಶರ್ಮಾ (ನಾಯಕ), ಇಶಾನ್ ಕಿಶನ್ (ವಿಕೆಟ್ ಕೀಪರ್) ಅಥವಾ ಸಂಜು ಸ್ಯಾಮ್ಸನ್, ವಿರಾಟ್ ಕೊಹ್ಲಿ, ಹಾರ್ದಿಕ್ ಪಾಂಡ್ಯ , ಸೂರ್ಯಕುಮಾರ್ ಯಾದವ್, ಶುಭಮನ್ ಗಿಲ್, ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಕುಲದೀಪ್ ಯಾದವ್, ಉಮ್ರಾನ್ ಮಲಿಕ್, ಮುಖೇಶ್ ಕುಮಾರ್.
ಇದನ್ನೂ ಓದಿ: Stuart Broad:146 ವರ್ಷದ ಟೆಸ್ಟ್ ಇತಿಹಾಸದಲ್ಲಿ ಯಾರೂ ಮಾಡದ ದಾಖಲೆ ಬರೆದ ಸ್ಟುವರ್ಟ್ ಬ್ರಾಡ್!