ETV Bharat / sports

India vs West Indies 2nd Test: ಟೆಸ್ಟ್​ನಲ್ಲಿ 29ನೇ ಶತಕ ಸಿಡಿಸಿದ ವಿರಾಟ್.. ಸರ್ ಡಾನ್​ ಬ್ರಾಡ್ಮನ್ ದಾಖಲೆ ಸರಿಗಟ್ಟಿದ ಕೊಹ್ಲಿ - ಟೆಸ್ಟ್​ನಲ್ಲಿ 29ನೇ ಶತಕ ಸಿಡಿಸಿದ ವಿರಾಟ್

ವೆಸ್ಟ್​ ಇಂಡೀಸ್​ ವಿರುದ್ಧದ ಎರಡನೇ ಟೆಸ್ಟ್​ ಪಂದ್ಯದಲ್ಲಿ ವಿರಾಟ್​ ಕೊಹ್ಲಿ 29ನೇ ಟೆಸ್ಟ್​ ಶತಕ ಬಾರಿಸಿದ್ದಾರೆ.

Etv Bharat
Etv Bharat
author img

By

Published : Jul 21, 2023, 8:34 PM IST

Updated : Jul 21, 2023, 9:11 PM IST

ಟ್ರಿನಿಡಾಡ್ (ವೆಸ್ಟ್​​ ಇಂಡೀಸ್​): 500ನೇ ಅಂತಾರಾಷ್ಟ್ರೀಯ ಕ್ರಿಕೆಟ್​ ಪಂದ್ಯ ಆಡುತ್ತಿರುವ ಟೀಂ ಇಂಡಿಯಾದ ಸ್ಟಾರ್​ ಆಟಗಾರ ವಿರಾಟ್​ ಕೊಹ್ಲಿ ವೆಸ್ಟ್​ ಇಂಡೀಸ್​ ವಿರುದ್ಧದ ಎರಡನೇ ಟೆಸ್ಟ್​ ಪಂದ್ಯದಲ್ಲಿ ಆಕರ್ಷಕ ಶತಕ ಬಾರಿಸಿದ್ದಾರೆ. ಈ ಮೂಲಕ ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಶತಕ ಬಾರಿಸಿದವರ ಪಟ್ಟಿಯಲ್ಲಿ ಸರ್ ಡಾನ್ ಬ್ರಾಡ್ಮನ್ ಅವರ ದಾಖಲೆಯನ್ನು ಕಿಂಗ್​ ಕೊಹ್ಲಿ ಸರಿಗಟ್ಟಿದ್ದಾರೆ.

ಇಲ್ಲಿನ ಕ್ವೀನ್ಸ್ ಪಾರ್ಕ್ ಓವಲ್‌ನಲ್ಲಿ ನಡೆಯುತ್ತಿರುವ ಎರಡನೇ ದಿನದಾಟ ಪಂದ್ಯದಲ್ಲಿ ಕೊಹ್ಲಿ 180ನೇ ಎಸೆತದಲ್ಲಿ ಬೌಂಡರಿ ಬಾರಿಸುವ ಮೂಲಕ ಶತಕದ ಗಡಿದಾಟಿದರು. ಸರ್ ಡಾನ್​ ಬ್ರಾಡ್ಮನ್ 52 ಟೆಸ್ಟ್‌ಗಳಲ್ಲಿ 29 ಶತಕಗಳನ್ನು ಗಳಿಸಿದ್ದರೆ, ಕೊಹ್ಲಿ ತಮ್ಮ 111ನೇ ಟೆಸ್ಟ್‌ನಲ್ಲಿ ಈ ಮೈಲಿಗಲ್ಲನ್ನು ತಲುಪಿದರು. ಕೊಹ್ಲಿ ಬಾರಿಸಿದ ಒಟ್ಟಾರೆ ತಮ್ಮ ಕ್ರಿಕೆಟ್​ ವೃತ್ತಿಜೀವನದ 76ನೇ ಶತಕ ಇದಾಗಿದೆ.

ವಿಶೇಷ ಎಂದರೆ ವಿದೇಶ ನೆಲದಲ್ಲಿ 2018ರ ನಂತರ ಕೊಹ್ಲಿ ಸಿಡಿಸಿದ ಮೊದಲ ಶತಕ ಇದಾಗಿದೆ. 2018ರ ಡಿಸೆಂಬರ್​ನಲ್ಲಿ ಆಸ್ಟ್ರೇಲಿಯಾ ಪ್ರವಾಸದಲ್ಲಿದ್ದಾಗ ಕೊನೆಯ ಟೆಸ್ಟ್‌ ಶತಕವನ್ನು ಬಾರಿಸಿದ್ದರು. ಅಲ್ಲದೇ, ಟೆಸ್ಟ್​ನಲ್ಲಿ ರನ್​ ಮಷಿನ್​ ಖ್ಯಾತಿಯ ಕೊಹ್ಲಿ ಅವರಿಂದ ವೆಸ್ಟ್ ಇಂಡೀಸ್ ವಿರುದ್ಧ ಮೂಡಿ ಬಂದ ಮೂರನೇ ಟೆಸ್ಟ್ ಶತಕ ಹಾಗೂ ಕ್ವೀನ್ಸ್ ಪಾರ್ಕ್ ಓವಲ್‌ನಲ್ಲಿ ಸಿಡಿಸಿದ ನಾಲ್ಕನೇ ಶತಕ ಇದಾಗಿದೆ.

ಒಟ್ಟಾರೆ ವೆಸ್ಟ್ ಇಂಡೀಸ್ ವಿರುದ್ಧ ಅತಿ ಹೆಚ್ಚು ಅಂತಾರಾಷ್ಟ್ರೀಯ ಶತಕಗಳನ್ನು ಸಿಡಿಸಿದ ಮೂರನೇ ಆಟಗಾರ ಎಂಬ ಹೆಗ್ಗಳಿಕೆಗೂ ವಿರಾಟ್​ ಪಾತ್ರರಾಗಿದ್ದಾರೆ. ವೆಸ್ಟ್​ ಇಂಡೀಸ್ ವಿರುದ್ಧ ಅತಿ ಹೆಚ್ಚು 13 ಶತಕಗಳನ್ನು ಸಿಡಿಸಿದ ದಾಖಲೆಯು ಸುನಿಲ್ ಗವಾಸ್ಕರ್ ಹೆಸರಲ್ಲಿದೆ. ನಂತರದಲ್ಲಿ ದಕ್ಷಿಣ ಆಫ್ರಿಕಾದ ಆಟಗಾರರ ಜಾಕ್​ ಕಾಲಿಸ್ ಹಾಗೂ ವಿರಾಟ್​ ಕೊಹ್ಲಿ ತಲಾ 12ನೇ ಶತಕಗಳೊಂದಿಗೆ ಸಮನಾದ ಸ್ಥಾನವನ್ನು ಹಂಚಿಕೊಂಡಿದ್ದಾರೆ. 11 ಶತಕ ಬಾರಿಸಿರುವ ಎಬಿ ಡಿವಿಲಿಯರ್ಸ್ ನಂತರದಲ್ಲಿ ಸ್ಥಾನದಲ್ಲಿದ್ದಾರೆ.

4ನೇ ಕ್ರಮಾಂಕದಲ್ಲಿ 25ನೇ ಶತಕ: ಟೆಸ್ಟ್​ ಕ್ರಿಕೆಟ್​ನಲ್ಲಿ 4ನೇ ಕ್ರಮಾಂಕದಲ್ಲಿ ಬ್ಯಾಟಿಂಗ್​ಗೆ​ ಬಂದ ಶತಕ ಬಾರಿಸಿದ ಆಟಗಾರರ ಪೈಕಿ ವಿರಾಟ್​ ಕೊಹ್ಲಿ ಸಹ ಒಬ್ಬರಾಗಿದ್ದಾರೆ. 4ನೇ ಕ್ರಮಾಂಕದಲ್ಲಿ ಬ್ಯಾಟಿಂಗ್​ ಮಾಡಿ ಸಚಿನ್ ತೆಂಡೂಲ್ಕರ್ 44 ಶತಕಗಳನ್ನು ಸಿಡಿಸಿದ ದಾಖಲೆ ಹೊಂದಿದ್ದಾರೆ. ನಂತರದಲ್ಲಿ ಜಾಕ್​ ಕಾಲಿಸ್ (35), ಮಹೇಲಾ ಜಯವರ್ಧನೆ (30) ಇದ್ದು, ಈಗ ವಿರಾಟ್ ಕೊಹ್ಲಿ 4ನೇ ಕ್ರಮಾಂಕದಲ್ಲಿ ಬಂದು 25ನೇ ಶತಕ ಬಾರಿಸಿದ್ದಾರೆ. ಈ ಮೂಲಕ ಬ್ರಿಯಾನ್ ಲಾರಾ (24) ಅವರನ್ನು ವಿರಾಟ್​ ಹಿಂದಿಕ್ಕಿದ್ದಾರೆ.

ಇದನ್ನೂ ಓದಿ: Virat Kohli: ಜಾಕ್ವೆಸ್​ ಕಾಲಿಸ್​ ದಾಖಲೆ ಮುರಿದು ಮುನ್ನುಗ್ಗಿದ ಕೊಹ್ಲಿ; 25,500 ರನ್​ ಪೂರ್ಣಗೊಳಿಸಿದ ಭಾರತದ 2ನೇ ಆಟಗಾರ​!

Last Updated : Jul 21, 2023, 9:11 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.